ETV Bharat / bharat

ಸಂಚಾರಿ ನಿಯಮ ಉಲ್ಲಂಘಿಸಿದ್ರೆ ಇನ್ಮುಂದೆ ದಂಡದ ಜೊತೆ ರಕ್ತದಾನ ಕಡ್ಡಾಯ..!

author img

By

Published : Jul 18, 2022, 1:34 PM IST

ದಂಡ ವಿಧಿಸುವುದರ ಹೊರತಾಗಿಯೂ ಸಂಚಾರಿ ನಿಯಮ ಉಲ್ಲಂಘನೆಯಾಗುತ್ತಿದೆ. ಅದನ್ನು ತಡೆಯಲು ಪಂಜಾಬ್​ ಸಂಚಾರಿ ಪೊಲೀಸರು ಇದೀಗ ದಂಡದ ಜೊತೆಗೆ ರಕ್ತದಾನ ಮಾಡುವುದನ್ನೂ ಕಡ್ಡಾಯ ಮಾಡಿದ್ದಾರೆ.

ಸಂಚಾರಿ ನಿಯಮ ಉಲ್ಲಂಘಿಸಿದ್ರೆ ರಕ್ತದಾನ ಕಡ್ಡಾಯ

ಚಂಡೀಗಢ: ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ದಂಡ ಸೇರಿದಂತೆ ಏನೆಲ್ಲಾ ಕ್ರಮಗಳನ್ನು ತಂದರೂ ಪಾಲನೆ ಮಾತ್ರ ಗೌಣವಾಗಿದೆ. ಇಂಥವರಿಗೆ ಬುದ್ಧಿ ಕಲಿಸಲು ಪಂಜಾಬ್​ ಪೊಲೀಸರು ದಂಡದ ಜೊತೆಗೆ ಹೊಸ ಐಡಿಯಾ ಮಾಡಿದ್ದಾರೆ. ಅದೇನೆಂದರೆ, ಸಂಚಾರಿ ನಿಯಮ ಉಲ್ಲಂಘನೆ ಮಾಡುವವರು ಕಡ್ಡಾಯವಾಗಿ ರಕ್ತದಾನ ಮಾಡಬೇಕು!.

ಪಂಜಾಬ್​ನಲ್ಲಿ ನಿಗದಿತ ವೇಗದ ಮಿತಿ ಮೀರಿ ವಾಹನ ಚಲಾಯಿಸುವುದು, ಮದ್ಯಪಾನ ಅಥವಾ ಮಾದಕ ದ್ರವ್ಯ ಸೇವಿಸಿ ಸಂಚರಿಸುವ ಪ್ರಕರಣಗಳು ಹೆಚ್ಚಳವಾಗಿವೆ. ಇದಕ್ಕೆ ಕಡಿವಾಣ ಹಾಕಲು ಸಂಚಾರಿ ಪೊಲೀಸರು ರಕ್ತದಾನದಂತಹ 'ಸಾಮಾಜಿಕ ಕಾಳಜಿಯ ಶಿಕ್ಷೆ' ವಿಧಿಸಲು ಮುಂದಾಗಿದ್ದಾರೆ. ಹೀಗಾಗಿ ಇನ್ನು ಮುಂದೆ ಟ್ರಾಫಿಕ್ ರೂಲ್ಸ್​ ಉಲ್ಲಂಘನೆ ಮಾಡಬೇಕಾದರೆ ದಂಡದ ಜೊತೆಗೆ ರಕ್ತದಾನ ಮಾಡಲು ವಾಹನ ಸವಾರರು ಸಜ್ಜಾಗಬೇಕಿದೆ.

ಓದಿ: ಭಾರಿ ಮಳೆಯಿಂದ ಕುಸಿದ ರಸ್ತೆ.. ಎಎಂಸಿಯ ದಿವ್ಯ ನಿರ್ಲಕ್ಷ್ಯ ಬಯಲು- Video Viral

ETV Bharat Logo

Copyright © 2024 Ushodaya Enterprises Pvt. Ltd., All Rights Reserved.