ETV Bharat / bharat

ರೈತರ ಪ್ರತಿಭಟನೆಗೆ ಮಣಿದ ಕೇಂದ್ರ.. ನಾಳೆಯಿಂದಲೇ ಭತ್ತ ಖರೀದಿಗೆ ಗ್ರೀನ್ ಸಿಗ್ನಲ್..

ಮುಂಗಾರು ವಿಳಂಬವಾಗಿದ್ದ ಕಾರಣ ಕೇಂದ್ರ ಸರ್ಕಾರ ಭತ್ತ ಮತ್ತು ರಾಗಿ ಖರೀದಿ ಅಕ್ಟೋಬರ್​ 1ರ ಬದಲು ಅಕ್ಟೋಬರ್​​​​ 11ಕ್ಕೆ ಮುಂದೂಡಿಕೆ ಮಾಡಿತು. ಆದರೆ, ಅಕ್ಟೋಬರ್​​ 1ರಿಂದಲೇ ಆರಂಭಿಸುವಂತೆ ಪ್ರತಿಭಟನೆ ನಡೆದಿದ್ದವು..

Paddy
Paddy
author img

By

Published : Oct 2, 2021, 6:42 PM IST

ನವದೆಹಲಿ : ಪಂಜಾಬ್​, ಹರಿಯಾಣ ರೈತರ ಪ್ರತಿಭಟನೆಗೆ ಕೊನೆಗೂ ಮಣಿದಿರುವ ಕೇಂದ್ರ ಸರ್ಕಾರ ನಾಳೆಯಿಂದಲೇ ಭತ್ತ(Paddy) ಖರೀದಿಗೆ ಗ್ರೀನ್​ ಸಿಗ್ನಲ್ ನೀಡಿದೆ. ಭತ್ತ, ರಾಗಿ ಖರೀದಿಗೆ ಅಕ್ಟೋಬರ್​ 11ರಿಂದ ಚಾಲನೆ ನೀಡಲಾಗುವುದು ಎಂದು ಈ ಹಿಂದೆ ಕೇಂದ್ರ ಸರ್ಕಾರ ಹೇಳಿತ್ತು. ಹೀಗಾಗಿ, ಪಂಜಾಬ್​ ಹಾಗೂ ಹರಿಯಾಣದಲ್ಲಿ ಕಳೆದ ಕೆಲ ದಿನಗಳಿಂದ ರೈತರು ಪ್ರತಿಭಟನೆ ನಡೆಸಿದ್ದರು.

  • #WATCH | Haryana: Protesters break police barricade in Yamunanagar as they held a demonstration near the residence of state minister Kanwar Pal over delay in paddy procurement pic.twitter.com/4HmskHoEOS

    — ANI (@ANI) October 2, 2021 " class="align-text-top noRightClick twitterSection" data=" ">

ಹರಿಯಾಣ ಮುಖ್ಯಮಂತ್ರಿ ಮನೋಹರ್​ಲಾಲ್​ ಖಟ್ಟರ್​​ ಹಾಗೂ ದುಷ್ಯಂತ್​ ಚೌಟಾಲಾ ಅವರೊಂದಿಗಿನ ಮಾತುಕತೆ ಬಳಿಕ ಕೇಂದ್ರ ಆಹಾರ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್​​ ಚೌಬೆ ಮಾಹಿತಿ ನೀಡಿದ್ದಾರೆ. ಹರಿಯಾಣ ಹಾಗೂ ಪಂಜಾಬ್​​ನಲ್ಲಿ ನಾಳೆಯಿಂದ ಭತ್ತ, ರಾಗಿ ಬೆಳೆ ಖರೀದಿ ಆರಂಭವಾಗಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

  • The procurement (of Kharif crops) will start from tomorrow in Haryana as well as Punjab: Ashwini Kumar Choubey, MoS, Consumer Affairs, Food & Public Distribution in Delhi pic.twitter.com/8rS3t765lF

ಮುಂಗಾರು ವಿಳಂಬವಾಗಿದ್ದ ಕಾರಣ ಕೇಂದ್ರ ಸರ್ಕಾರ ಭತ್ತ ಮತ್ತು ರಾಗಿ ಖರೀದಿಯನ್ನ ಅಕ್ಟೋಬರ್​ 1ರ ಬದಲು ಅಕ್ಟೋಬರ್​​ 11ಕ್ಕೆ ಮುಂದೂಡಿಕೆ ಮಾಡಿತು. ಆದರೆ, ಅಕ್ಟೋಬರ್​​ 1ರಿಂದಲೇ ಆರಂಭಿಸುವಂತೆ ಪ್ರತಿಭಟನೆ ನಡೆದಿದ್ದವು. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದ ಪಂಜಾಬ್​ ಸಿಎಂ ಚರಣ್​ಜಿತ್​ ಸಿಂಗ್​ ಚನ್ನಿ ಕೂಡ ಈ ವಿಷಯವಾಗಿ ಪ್ರಸ್ತಾಪ ಮಾಡಿದ್ದರು.

  • Due to delay in monsoon, Central Govt had postponed start of procurement of paddy & millet to Oct 11 from Oct 1 this year... There are demands for an early start. The procurement will start tomorrow: Haryana CM ML Khattar after meeting MoS Food & Consumer Affairs Ashwini Choubey pic.twitter.com/q3AKe3fr7L

ಇದನ್ನೂ ಓದಿರಿ: 10 ತಿಂಗಳ ಮಗುವಿಗೆ ಮನೆ ಕೆಲಸದಾಕೆಯ ಚಿತ್ರಹಿಂಸೆ.. ವಿಡಿಯೋ ವೈರಲ್​

ನಿನ್ನೆ, ಹೊಸ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಚನ್ನಿ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಕೃಷಿ ಕಾನೂನುಗಳ ಬಗ್ಗೆ ಚರ್ಚಿಸಲು ಮತ್ತು ಕೇಂದ್ರಕ್ಕೆ ಭತ್ತ ಮತ್ತು ರಾಗಿ ಖರೀದಿಯನ್ನು ಆರಂಭಿಸಲು ಕೇಳಿದರು. ಇಂದು ಬೆಳಗ್ಗೆ ಹರಿಯಾಣ ಸಿಎಂ ಮನೋಹರ್​ಲಾಲ್ ಖಟ್ಟರ್​ ನಿವಾಸದ ಮುಂದೆ ದೊಡ್ಡ ಪ್ರಮಾಣದ ಪ್ರತಿಭಟನೆ ಸಹ ನಡೆದಿತ್ತು. ಇದರ ಬೆನ್ನಲ್ಲೇ ಮಹತ್ವದ ಸಭೆ ನಡೆದಿತ್ತು.

Paddy
ಭತ್ತ ಖರೀದಿಗೆ ಕೇಂದ್ರ ಒಪ್ಪಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.