ಫರೀದ್‌ಕೋಟ್ (ಪಂಜಾಬ್): ಜೈಲುಗಳಲ್ಲಿ ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡಲು ಪಂಜಾಬ್ ಸರ್ಕಾರ ಮುಂದಾಗಿದೆ. ಕೈದಿಗಳ ಬಳಿ ಮೊಬೈಲ್ ಸೇರಿ ಯಾವುದೇ ವಸ್ತುಗಳು ಕಂಡಬಂದರೆ ಜೈಲಿನ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿದೆ. ಇದರಲ್ಲಿ ಈಗ ಫರೀದ್‌ಕೋಟ್ ಜೈಲಿನ ಅಧೀಕ್ಷಕನ ತಲೆ ತಂಡವಾಗಿದೆ.
ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಸರ್ಕಾರವು ಮಾರ್ಚ್ 16ರಿಂದ ಮೇ 10ರವರೆಗೆ ಜೈಲುಗಳಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿದೆ. ಈ ಕಾರ್ಯಾಚರಣೆಯಲ್ಲಿ 710 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ನಡುವೆ ಫರೀದ್‌ಕೋಟ್ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಕೈದಿಯೊಬ್ಬನ ವಿಡಿಯೋ ವೈರಲ್ ಆಗಿತ್ತು. ಹೀಗಾಗಿ ಜೈಲಿನ ಅಧೀಕ್ಷಕ ಜೋಗಿಂದರ್ ಪಾಲ್ ಅವರನ್ನು ಅಮಾನತುಗೊಳಿಸಲಾಗಿದೆ.
-
Our Govt. is on a mission to free Jails of Mobiles & Drugs.
— Harjot Singh Bains (@harjotbains) May 26, 2022 " class="align-text-top noRightClick twitterSection" data="
Hon’ble CM @BhagwantMann ji has made it clear that “Sudhar Ghar’s will be made Sudhar Ghar’s in true spirits.”
Any incidents of Use of Mobile Phones or Corruption in jails, Jail Supdt.’s will be held accountable.
">Our Govt. is on a mission to free Jails of Mobiles & Drugs.
— Harjot Singh Bains (@harjotbains) May 26, 2022
Hon’ble CM @BhagwantMann ji has made it clear that “Sudhar Ghar’s will be made Sudhar Ghar’s in true spirits.”
Any incidents of Use of Mobile Phones or Corruption in jails, Jail Supdt.’s will be held accountable.Our Govt. is on a mission to free Jails of Mobiles & Drugs.
— Harjot Singh Bains (@harjotbains) May 26, 2022
Hon’ble CM @BhagwantMann ji has made it clear that “Sudhar Ghar’s will be made Sudhar Ghar’s in true spirits.”
Any incidents of Use of Mobile Phones or Corruption in jails, Jail Supdt.’s will be held accountable.
ಈ ಬಗ್ಗೆ ಸ್ವತಃ ಕಾರಾಗೃಹ ಸಚಿವ ಹರ್ಜೋತ್ ಬೈನ್ಸ್ ಟ್ವೀಟ್ ಮಾಡಿದ್ದು, 'ಜೈಲಿನಲ್ಲಿ ಕೈದಿಯ ವಿಡಿಯೋ ವೈರಲ್ ಆದ ಪ್ರಕರಣ ಸಂಬಂಧ ಜೈಲ್ ಸೂಪರಿಂಟೆಂಡೆಂಟ್ನ್ನು ಅಮಾನತುಗೊಳಿಸಲಾಗಿದೆ. ಈಗಾಗಲೇ ಆಪ್ ಸರ್ಕಾರ ಜೈಲುಗಳಲ್ಲಿ ಮೊಬೈಲ್ ಫೋನ್ ಬಳಕೆ ನಿಲ್ಲಿಸಲು ಕಟ್ಟುನಿಟ್ಟಿನ ಆದೇಶ ನೀಡಿದೆ ಎಂದು ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಕಮಿಷನ್ ವಿಚಾರ ಸದ್ದು ಮಾಡ್ತಿದ್ದಂತೆ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಸಂಪುಟದಿಂದ ದಿಢೀರ್ ಕಿತ್ತಾಕಿದ್ದರು. ತಮ್ಮ ಇಲಾಖೆಯಲ್ಲಿ ಗುತ್ತಿಗೆ ಪಡೆದ ಅಧಿಕಾರಿಗಳಿಂದ ವಿಜಯ್ ಸಿಂಗ್ಲಾ ಶೇ.1ರಷ್ಟು ಕಮಿಷನ್ ಕೇಳಿದ್ದರು ಎಂಬ ಆರೋಪ ಕೇಳಿಬಂದಿತ್ತು. ಬಳಿಕ ಅವರನ್ನು ಬಂಧಿಸಲಾಗಿದೆ. ಈ ನಡೆಗೆ ಆಪ್ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸಿಎಂ ಮಾನ್ ನಿರ್ಧಾರವನ್ನು ಕೊಂಡಾಡಿದ್ದರು.
ಇದನ್ನೂ ಓದಿ: ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಸೇನೆ ಮೇಲೆ ದಾಳಿ: ಪ್ರಮುಖ ಆರೋಪಿ ಬಂಧನ