ETV Bharat / bharat

ಜುಗಾರು ರೆಹ್ಡಿ ಮೋಟಾರ್ ಬೈಕ್‌ಗಳ ಬಳಕೆಯನ್ನು ನಿಷೇಧಿಸಿದ ಪಂಜಾಬ್ ಸರಕಾರ - ಜುಗಾರು ರೆಹ್ಡಿ ಮೋಟಾರ್ ಬೈಕ್ ಗಳ ಬಳಕೆಯನ್ನು ನಿಷೇಧಿಸಿದ ಪಂಜಾಬ್ ಸರಕಾರ

ಪಂಜಾಬ್‌ನಲ್ಲಿ ಜುಗಾರು ರೆಹ್ಡಿ ಮೋಟಾರ್ ಬೈಕ್‌ಗಳ ಬಳಕೆ ನಿಷೇಧಿಸಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲೆಗಳ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶ ನೀಡಲಾಗಿದೆ..

punjab-govt-orders-closure-of-jugaroo-motorcycle-lines
ಜುಗಾರು ರೆಹ್ಡಿ ಮೋಟಾರ್ ಬೈಕ್ ಗಳ ಬಳಕೆಯನ್ನು ನಿಷೇಧಿಸಿದ ಪಂಜಾಬ್ ಸರಕಾರ
author img

By

Published : Apr 23, 2022, 12:40 PM IST

ಚಂಡೀಗಢ : ಪಂಜಾಬ್‌ನಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಹಲವು ಬದಲಾವಣೆಗಳು ಜಾರಿಯಾಗುತ್ತಿವೆ. ಈ ನಡುವೆ ಪಂಜಾಬ್ ಪೊಲೀಸರು ಮತ್ತೊಂದು ನಿರ್ದೇಶನ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಮೋಡಿಫೈಡ್ ಮೋಟಾರ್‌ಸೈಕಲ್ ಬಳಕೆಯನ್ನು ನಿಷೇಧಿಸಿದೆ. ಅಂದರೆ ಜುಗಾರು ರೆಹ್ಡಿ ಮೋಟಾರ್ ಬೈಕ್‌ಗಳ ಬಳಕೆಯನ್ನು ನಿಷೇಧಿಸಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲೆಗಳ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶ ನೀಡಲಾಗಿದೆ.

punjab-govt-orders-closure-of-jugaroo-motorcycle-lines
ಜುಗಾರು ರೆಹ್ಡಿ ಬಳಕೆ ನಿಷೇಧಿಸಿ ಪಂಜಾಬ್ ಸರಕಾರ ಆದೇಶ

ಜುಗಾರು ಮೋಟಾರು ಸೈಕಲ್ ವಾಹನದ ಸಂಖ್ಯೆಯಲ್ಲಿ ಹೆಚ್ಚಳ : ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಜುಗಾರು ಮೋಟರ್ ಸೈಕಲ್ ಸಂಖ್ಯೆ ಹೆಚ್ಚಾಗಿದ್ದು, ಸಾಮಾನ್ಯ ರಸ್ತೆಗಳಲ್ಲಿ ಸರಕುಗಳನ್ನು ಸಾಗಿಸುವುದು ಅಥವಾ ಪ್ರಯಾಣಿಕರನ್ನು ಸಾಗಿಸಲು ಇದು ಬಳಕೆಯಾಗುತ್ತಿದೆ. ಚಾಲಕರ ನಿರ್ಲಕ್ಷ್ಯದ ಚಾಲನೆಯಿಂದ ಜನ ಸಾಮಾನ್ಯರ ಪ್ರಾಣಕ್ಕೆ ಕುತ್ತು ಬಂದರೂ ಚಾಲಕರು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗಿದೆ.

ಈ ಜುಗಾರು ರೆಹ್ಡಿ ಮೋಟಾರ್ ಬೈಕ್‌ಗಳಿಂದ ವಾಹನ ಸಂಚಾರ ದುಸ್ತರವಾಗಿದೆ. ಈ ವಾಹನಗಳು ಜನರನ್ನು ಒಂದು ನಗರದಿಂದ ಇನ್ನೊಂದು ನಗರಕ್ಕೆ ಸಾಗಿಸಲು ಬಳಸಲಾಗುತ್ತಿದ್ದು, ಇದರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜನರಿಗೆ ತೊಂದರೆ ಉಂಟಾಗುತ್ತಿರುವುದಾಗಿ ಹೇಳಲಾಗಿದೆ.

ಕೆಲವು ಸಮಯದಲ್ಲಿ ಈ ಮೋಟಾರ್ ವಾಹನದ ಚಾಲಕರು ತಮ್ಮ ವಾಹನದ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಮತ್ತು ಸರಕುಗಳನ್ನು ಸಾಗಿಸುವುದರಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಹೇಳಲಾಗಿದೆ.

ಅನೇಕ ಕುಟುಂಬದ ಆದಾಯದ ಮೂಲ : ಈ ವಾಹನಗಳು ಅನೇಕ ಕುಟುಂಬಗಳನ್ನು ಸಾಕುತ್ತಿವೆ. ಈ ವಾಹನವನ್ನೇ ನಂಬಿಕೊಂಡು ಜೀವನ ನಡೆಸುವವರ ಬದುಕು ದುಸ್ತರವಾಗಲಿದೆ.

ಓದಿ : ಹುಚ್ಚನಂತೆ ಓಡೋಡಿ ಬಂದು ಮಕ್ಕಳೆದುರೇ ತಾಯಿಯನ್ನು ಬರ್ಬರವಾಗಿ ಕೊಂದ ಕೊಲೆಗಾರ!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.