ಚಂಡೀಗಢ(ಪಂಜಾಬ್): ಮುಂದಿನ ವರ್ಷ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆಡಳಿತ ಪಕ್ಷ ಕಾಂಗ್ರೆಸ್ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಸಿಹಿಸುದ್ದಿ ನೀಡಿದೆ. ಸರ್ಕಾರಿ ನೌಕರರ ಮೂಲ ವೇತನದ ಮೇಲೆ ಶೇ.15 ರಷ್ಟು ಹೆಚ್ಚಿಸಿ 2015ರ ಡಿಸೆಂಬರ್ 31 ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಇದಕ್ಕಾಗಿ 1,500 ರೂಪಾಯಿಗಳ ಬಂಪರ್ ಕೊಡುಗೆ ಘೋಷಿಸಿದೆ.
ಸಿಎಂ ಕ್ಯಾಪ್ಟನ್ ಅಮರೀಂದರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆದೇಶದಿಂದ ಪ್ರತಿ ಸರ್ಕಾರಿ ಉದ್ಯೋಗಿ ಹಾಗೂ ಪಿಂಚಣಿದಾರರಿಗೆ ವಾರ್ಷಿಕವಾಗಿ ಸರಾಸರಿ 1.05 ಲಕ್ಷ ರೂಪಾಯಿ ವೇತನ ಹೆಚ್ಚಳವಾಗಲಿದೆ. ಈ ಹಿಂದೆ ಸರ್ಕಾರ 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಮಾಡಿತ್ತು.
ಇದನ್ನೂ ಓದಿ: 'ಭಾರತಕ್ಕಾಗಿ ರಕ್ತ ಹರಿಸುವವರನ್ನು ಗೇಲಿ ಮಾಡಿದಂತೆ'.. ಸಿಧು ಸಲಹೆಗಾರರ ಹೇಳಿಕೆಗೆ ತಿವಾರಿ ಆಕ್ರೋಶ
ಸಿಎಂ ಸಿಂಗ್ ನೇತೃತ್ವದಲ್ಲಿ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೂ ಮುನ್ನ ಸಚಿವರು, ಸಂಬಂಧಪಟ್ಟ ಕಾರ್ಯದರ್ಶಿಗಳು ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳಲ್ಲಿನ ನೌಕರರ ಬೇಡಿಕೆಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದರು. ಪರಿಹಾರಾತ್ಮಕವಾಗಿ ನೌಕರರ ವೇತನವನ್ನು ಹೆಚ್ಚಿಸಲಾಗುತ್ತಿದೆ. ಒಂದು ವೇಳೆ ಯಾರಾದರೂ ಪ್ರತಿಭಟನೆಗೆ ಮುಂದಾದರೆ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಎಚ್ಚರಿಕೆ ನೀಡಿದ್ದಾರೆ.