ಅಮೃತಸರ (ಪಂಜಾಬ್): ಕುಟುಂಬದೊಂದಿಗೆ ಗುರುದ್ವಾರ ಸಾಹಿಬ್‌ಗೆ ತೆರಳುತ್ತಿದ್ದ ಅನಿವಾಸಿ ಭಾರತೀಯನ (ಎನ್ಆರ್ಐ) ಮೇಲೆ ದರೋಡೆಕೋರರು ಗುಂಡು ಹಾರಿಸಿ ಕೊಲೆ ಮಾಡಿರುವ ಪ್ರಕರಣ ಪಂಜಾಬ್‌ನ ಅಮೃತಸರದಲ್ಲಿ ನಡೆದಿದೆ. ಹರ್ಪಿಂದರ್ ಸಿಂಗ್ (35) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕೆಲವು ದಿನಗಳ ಹಿಂದೆ ದುಬೈನಿಂದ ಹರ್ಪಿಂದರ್ ಸಿಂಗ್ ಅಮೃತಸರಕ್ಕೆ ಮರಳಿದ್ದರು. ಭಾನುವಾರ ಬೆಳಗಿನ ಜಾವ 3.30ರ ಸುಮಾರಿಗೆ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಗುರುದ್ವಾರ ಸಾಹಿಬ್‌ಗೆ ತೆರಳಿದ್ದರು. ಈ ವೇಳೆ ಘನಪುರ್ ಕಾಳೆಯಲ್ಲಿ ಬೈಕ್ನಲ್ಲಿ ಇಬ್ಬರು ಲೂಟಿಕೋರರು ಬಂದಿದ್ದಾರೆ. ಹರ್ಪಿಂದರ್ ಸಿಂಗ್ ಕುಟಂಬದ ಬಳಯಿದ್ದ ವಸ್ತುಗಳನ್ನು ಲೂಟಿ ಮಾಡಲು ಖದೀಮರು ಯತ್ನಿಸಿದ್ದಾರೆ. ಆಗ ಹರ್ಪಿಂದರ್ ಸಿಂಗ್ ತಿರುಗಿ ಬಿದ್ದಿದ್ದಾರೆ. ಇದರಿಂದ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿದ್ದಾರೆ.
ಇತ್ತ, ಗುಂಡಿನ ಸದ್ದು ಕೇಳಿ ಸ್ಥಳೀಯರು ಸ್ಥಳಕ್ಕೆ ಓಡಿ ಬಂದು ಗಾಯಾಳು ಹರ್ಪಿಂದರ್ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಕೂಡ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಹರ್ಪಿಂದರ್ ಸಿಂಗ್ ಪತ್ನಿಯಿಂದ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಜೊತೆಗೆ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದ್ದು, ಹಂತಕರು ಬೈಕ್ನಲ್ಲಿ ಸಂಚರಿಸುತ್ತಿರುವ ದೃಶ್ಯ ಸೆರೆಯಾಗಿದೆ.
ಸತತ ಎರಡನೇ ದಿನ ಗುಂಡಿನ ದಾಳಿ: ಅಮೃತಸರದಲ್ಲಿ ಇದು ಸತತ ಎರಡನೇ ಗುಂಡಿನ ದಾಳಿಯಾಗಿದೆ. ಶನಿವಾರ ಬೆಳಗ್ಗೆ ಆಪ್ ಕಾರ್ಯಕರ್ತನೊಬ್ಬ ಪೊಲೀಸರ ಸಮ್ಮುಖದಲ್ಲಿ ಗುಂಡು ಹಾರಿಸಿದ್ದ. ಇದರಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದ. ಇದಾದ ಮರು ದಿನವೇ ಖದೀಮರು ಗುಂಡಿನ ದಾಳಿ ನಡೆಸಿ ಎನ್ಆರ್ಐ ಹರ್ಪಿಂದರ್ ಸಿಂಗ್ರನ್ನು ಕೊಲೆ ಮಾಡಿದ್ದಾರೆ.
ಇದನ್ನೂ ಓದಿ: ಸಚಿವರ ಪುತ್ರನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಯುವತಿ ಮೇಲೆ ಮಸಿ ದಾಳಿ!