ETV Bharat / bharat

ಪಂಜಾಬ್​ನಲ್ಲಿ ಸಿಧು v/s ಕಾಂಗ್ರೆಸ್​: ಕ್ರಮಕ್ಕೆ ಆಗ್ರಹಿಸಿದ ನಾಯಕರ ವಿರುದ್ಧ ನವಜೋತ್​ ಟ್ವೀಟ್​ ಪ್ರಹಾರ

author img

By

Published : May 4, 2022, 4:06 PM IST

ಪಂಜಾಬ್​ ಕಾಂಗ್ರೆಸ್​ ವಿರುದ್ಧವೇ ತಿರುಗಿ ಬಿದ್ದಿರುವ ಪಕ್ಷದ ಮಾಜಿ ಅಧ್ಯಕ್ಷ ನವಜೋತ್​ ಸಿಂಗ್​ ಸಿಧು ವಿರುದ್ಧ ಕ್ರಮಕ್ಕೆ ಸ್ಥಳೀಯ ನಾಯಕರು ಹೈಕಮಾಂಡ್​ಗೆ ಪತ್ರ ಬರೆದಿದ್ದಾರೆ. ಇದಕ್ಕೆ ನಾನು ಜಗ್ಗಲ್ಲ ಎಂಬುದನ್ನು ಸಿಧು ಟ್ವೀಟ್​ ಮೂಲಕವೇ ಎದುರೇಟು ಕೊಟ್ಟಿದ್ದಾರೆ.

punjab-congress
ನವಜೋತ್

ಚಂಡೀಗಢ: ಪಕ್ಷದಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಪಂಜಾಬ್​ನಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್​ ಅಧಿಕಾರ ಕಳೆದುಕೊಂಡರೂ, ಈವರೆಗೂ ಭಿನ್ನಮತ ಶಮನವಾಗಿಲ್ಲ. ರಾಜ್ಯ ಕಾಂಗ್ರೆಸ್​ನಿಂದ ದೂರವಾಗಿ ಏಕಾಂಗಿಯಾಗಿ ಗುರುತಿಸಿಕೊಂಡಿರುವ ಪಕ್ಷದ ಮಾಜಿ ಅಧ್ಯಕ್ಷ ನವಜೋತ್​ ಸಿಂಗ್​ ಸಿಧು, ಸ್ಥಳೀಯ ನಾಯಕರ ಬಗ್ಗೆ ಗೌರವ ಹೊಂದಿಲ್ಲ.

ಈ ಬಗ್ಗೆ ಪಂಜಾಬ್​ ಕಾಂಗ್ರೆಸ್​ ಉಸ್ತುವಾರಿ ಹರೀಶ್ ಚೌಧರಿ ಅವರು ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಎರಡು ದಿನಗಳ ಹಿಂದೆ ಪತ್ರ ಬರೆದಿದ್ದು, ನವಜೋತ್​ ಸಿಂಗ್ ಸಿಧು ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದೀಗ ಈ ಬಗ್ಗೆ ನವಜೋತ್​ ಸಿಂಗ್​ ಸಿಧು ಕಾವ್ಯಾತ್ಮಕವಾಗಿ ಟ್ವೀಟ್​ ಮಾಡುವ ಮೂಲಕ ಮೌನ ಮುರಿದಿದ್ದಾರೆ. ಅಲ್ಲದೇ ತಮ್ಮ ಬಂಡಾಯವನ್ನು ಈ ಟ್ವೀಟ್​ನಲ್ಲಿ ವ್ಯಕ್ತಪಡಿಸಿದ್ದಾರೆ. 'ನಾನು ಆಗಾಗ್ಗೆ ನನ್ನ ವಿರುದ್ಧದ ವಿಷಯಗಳನ್ನು ಮೌನವಾಗಿ ಕೇಳುತ್ತೇನೆ. ಕಾಲಕಾಲಕ್ಕೆ ಉತ್ತರಿಸುವ ಹಕ್ಕನ್ನು ನಾನು ಕಾಯ್ದಿರಿಸಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಸಿಧು ತಮ್ಮ ವಿರುದ್ಧ ಸೆಟೆದು ನಿಂತಿರುವ ಸ್ಥಳೀಯ ನಾಯಕರಿಗೆ ಸೊಪ್ಪು ಹಾಕಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ನವಜೋತ್ ಸಿಂಗ್ ಸಿಧು ಅವರ ಈ ಟ್ವೀಟ್​ ಮೂಲಕ ಅವರು ಯಾರ ಮಾತನ್ನೂ ಕೇಳುತ್ತಿಲ್ಲ ಮತ್ತು ಪಂಜಾಬ್ ಪ್ರದೇಶ ಸಮಿತಿಯೊಂದಿಗೆ ಹೊಂದಿಕೊಂಡು ಹೋಗಲು ಸಿದ್ಧರಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಪಂಜಾಬ್ ಕಾಂಗ್ರೆಸ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಹೈಕಮಾಂಡ್​ಗೆ ಆಗ್ರಹಿಸಿದೆ.

ಓದಿ: ಹುಟ್ಟೂರಿಗೆ ಭೇಟಿ ನೀಡಿ ತಾಯಿ ಆಶೀರ್ವಾದ ಪಡೆದ ಯೋಗಿ.. ಪ್ರಧಾನಿ ಮೋದಿ ಜೊತೆ ಹೋಲಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.