ETV Bharat / bharat

ಪಂಜಾಬ್​ ಸಿಎಂ ಬಹಿರಂಗ ಚರ್ಚೆ: ​ಸಾಲದ ಬಗ್ಗೆ ಇಂಚಿಂಚು ವಿವರಣೆ: 1200 ಸಾಮರ್ಥ್ಯದ ಹಾಲ್​ಗೆ​ 2500 ಪೊಲೀಸರ ಭದ್ರತೆ - etv bharat kannada

ಪಂಜಾಬ್​ ಸಿಎಂ ಬಹಿರಂಗ ಚರ್ಚೆ ಹಿನ್ನೆಲೆ 1200 ಜನ ಸಾಮರ್ಥ್ಯವಿರುವ ಹಾಲ್​ನ ಭದ್ರತೆಗಾಗಿ 2500 ಜನ ಪೊಲೀಸರನ್ನು ನೇಮಕ ಮಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ನಿನ್ನೆಯೇ ಪ್ರತಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದವು. ಒಂದು ಆಯ್ದ ಜನರಿಗೆ ಮಾತ್ರ ಸರ್ಕಾರ ಚರ್ಚೆಗೆ ಅವಕಾಶ ನೀಡಿದೆ ಎಂದು ಪ್ರತಿಪಕ್ಷಗಳ ನಾಯಕರು ಆರೋಪಿಸಿದ್ದಾರೆ.

ಪಂಜಾಬ್​ ಸಿಎಂ ಬಹಿರಂಗ ಚೆರ್ಚೆ
ಪಂಜಾಬ್​ ಸಿಎಂ ಬಹಿರಂಗ ಚೆರ್ಚೆ
author img

By ETV Bharat Karnataka Team

Published : Nov 1, 2023, 10:06 PM IST

Updated : Nov 1, 2023, 10:19 PM IST

ಚಂಡೀಗಢ: ಪಂಜಾಬ್ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಇಂದು ಲೂಧಿಯಾನದಲ್ಲಿ ಬಹಿರಂಗ ಚರ್ಚೆಯನ್ನು ಆಯೋಜಿಸಿದ್ದರು. ಈ ಚರ್ಚೆಯಲ್ಲಿ ರಾಜ್ಯದ ಸಮಸ್ಯೆಗಳ ಕುರಿತು ಚರ್ಚಿಸಲು ವಿಪಕ್ಷದ ನಾಯಕರಿಗೆ ಆಹ್ವಾನಿಸಲಾಗಿತ್ತು. ಆದರೆ ಇಂದಿನ ಚರ್ಚೆಗೆ ವಿಪಕ್ಷ ನಾಯಕರು ಯಾರೊಬ್ಬರು ಭಾಗಿಯಾಗಲಿಲ್ಲ. ವಿಪಕ್ಷ ನಾಯಕರ ಗೈರಿನ ನಡುವೆ ಮುಖ್ಯಮಂತ್ರಿ ಭಗವಂತ ಮಾನ್ ಅವರು ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದು. ಹಿಂದಿನ ಸರ್ಕಾರ ಮಾಡಿರುವ ಸಾಲದ ಕುರಿತು ಅಂಕಿ - ಅಂಶಗಳ ಸಮೇತವಾಗಿ ಜನರ ಮುಂದಿಟ್ಟರು.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ರಾಜ್ಯದ ಸಾಲ ದ್ವಿಗುಣ: ಚರ್ಚೆಯಲ್ಲಿ ರಾಜ್ಯದ ಸಾಲದ ಕುರಿತು ಮಾತನಾಡಿದ ಅವರು, 2012ರಿಂದ ಪಂಜಾಬ್ ಖಜಾನೆಯ ಮೇಲೆ ಸಾಲದ ಹೊರೆ ಬೀಳಲು ಪ್ರಾರಂಭಿಸಿತು ಎಂದು ಹೇಳಿದರು. 2012ರಲ್ಲಿ 83,099 ಸಾವಿರ ಕೋಟಿ ರೂ.ಗಳಷ್ಟಿದ್ದ ರಾಜಯ್ದ ಸಾಲ 2017ರಲ್ಲಿ ಏಕಾಏಕಿ 1 ಲಕ್ಷದ 82 ಸಾವಿರ ಕೋಟಿಗೆ ಏರಿಕೆಯಾಗಿದೆ. ಇದಾದ ಬಳಿಕ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸರ್ಕಾರ ಬಂದಿದ್ದು ಇನ್ನೂ 1 ಲಕ್ಷ ಕೋಟಿ ಹೆಚ್ಚಾಳವಾಯಿತು. 10 ವರ್ಷಗಳಲ್ಲಿ ಪಂಜಾಬ್ 2 ಲಕ್ಷ ಕೋಟಿ ಸಾಲ ಮಾಡಿದೆ. ಸಾಲ ಮಾಡಿದರೂ ಈ ಅವಧಿಯಲ್ಲಿ ಯಾವುದೇ ಸರ್ಕಾರಿ ಕಾಲೇಜು ಅಥವಾ ವಿಶ್ವವಿದ್ಯಾನಿಲಯವನ್ನು ನಿರ್ಮಿಸಲಾಗಿಲ್ಲ, ಉದ್ಯೋಗವನ್ನೂ ನೀಡಲಾಗಿಲ್ಲ. ಹಾಗಾದರೆ 2 ಲಕ್ಷ ಕೋಟಿ ಸಾಲ ಹೇಗಾಯಿತು ಮತ್ತು ಆ ಹಣ ಎಲ್ಲಿಗೆ ಹೋಯಿತು, ಎಲ್ಲಿ ಹೂಡಿಕೆ ಮಾಡಿದರು ಎಂದು ಪ್ರಶ್ನಿಸಿದರು.

ವಿದ್ಯುತ್​ ಸಾಲವನ್ನು ತೀರುಸುತ್ತೇವೆ: ಹಿಂದಿನ ಸರ್ಕಾರಗಳ ಅವಧಿಯಲ್ಲಿ ವಿದ್ಯುತ್ ಮಂಡಳಿ ಮೇಲೆ ಮಾಡಿರುವ ಸಾಲ 1009 ಕೋಟಿ ಇದೆ. ಅದನ್ನೂ ನಮ್ಮ ಆಪ್​ ಸರ್ಕಾರ ತೀರಿಸುತ್ತದೆ. ಜತೆಗೆ ನಾವು ನುಡಿದಂತೆ ಯಾವುದೇ ನಯಾ ಪೈಸೆ ಪಡೆಯದೇ ರಾಜ್ಯದ ಜನರಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ರಾಜ್ಯದಲ್ಲಿ ಕಳೆದ 25 ವರ್ಷಗಳಿಂದ ಯಾವುದೇ ನೇಮಕಾತಿ ನಡೆದಿಲ್ಲ. ಚುನಾವಣೆಯ ಸಮಯದಲ್ಲಿ ನೇಮಕಾತಿ ಪ್ರಕಟಣೆಗಳನ್ನು ಮಾಡಲಾಗಿತ್ತು ಆದರೆ, ಅವು ಪೂರ್ಣಗೊಂಡಿಲ್ಲ. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗಿತ್ತು. ಇದೀಗ ನಮ್ಮ ಆಪ್​ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿವಿಧ ಇಲಾಖೆಗಳಲ್ಲಿ ಬರೋಬ್ಬರಿ 37,946 ಉದ್ಯೋಗಗಳನ್ನು ನೀಡಿದ್ದೇವೆ. ಇದೀಗ ಪಂಜಾಬ್‌ನಲ್ಲಿ ಟಾಟಾ ಸ್ಟೀಲ್‌ನ ಎರಡನೇ ಅತಿ ದೊಡ್ಡ ಸ್ಥಾವರ ಸ್ಥಾಪನೆಯಾಗಲಿದ್ದು, ಅಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಠಿಯಾಗಲಿವೆ ಎಂದು ಹೇಳಿದ ಅವರು, ಪಂಜಾಬ್‌ನಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಆದ ಬದಲಾವಣೆಯ ಕುರಿತು ಮಾತನಾಡಿದರು.

ವಿಪಕ್ಷ ನಾಯಕರ ಗೈರು ಬಗ್ಗೆ ಪ್ರತಿಕ್ರಿಯೆ: ವಿಪಕ್ಷ ನಾಯಕರ ಗೈರು ಬಗ್ಗೆ ಮಾತನಾಡಿದ ಅವರು, ಚರ್ಚೆಗೆ ಆಹ್ವಾನಿಸಿದ 25 ದಿನಗಳಿಂದ ಈ ನಾಯಕರಿಗೆ ನನ್ನ ಮತ್ತು ನನ್ನ ಸರ್ಕಾರದ ವಿರುದ್ಧ ಒಂದೇ ಒಂದು ಲೋಪವೂ ಕಂಡು ಬರಲಿಲ್ಲ. ಪಂಜಾಬಿನ ವಿಚಾರದಲ್ಲಿ ನನ್ನನ್ನು ಎದುರಿಸುವ ಧೈರ್ಯ ಅವರಿಗೆ ಇರಲಿಲ್ಲ. ಜನರು ಈ ನಾಯಕರನ್ನು ಸೋಲಿಸಿ ಮನೆಯಲ್ಲಿ ಕೂರಿಸಿದ್ದಾರೆ ಎಂದರೆ ಪಂಜಾಬ್‌ಗೆ ಈ ನಾಯಕರು ಮಾಡಿದ ದ್ರೋಹವನ್ನು ಅರಿತಿದ್ದಾರೆ ಎಂದರ್ಥವಲ್ಲ. ಈ ರಾಜಕೀಯ ನಾಯಕರು ನಿಮ್ಮ ಬಳಿ ಬಂದಾಗಲೆಲ್ಲ ಬಹಿರಂಗ ಚರ್ಚೆಗೆ ಏಕೆ ಗೈರಾಗಿ ಓಡಿ ಹೋದದ್ದು ಏಕೆ ಎಂದು ಕೇಳಬೇಕು ಎಂದು ಹೇಳಿದರು.

ಮತ್ತೊಂದೆಡೆ ಗೈರಾದ ವಿಪಕ್ಷನಾಯಕರು ಬಹಿರಂಗ ಚರ್ಚೆ ಕೇವಲ ಅವರು ಆಯ್ಕೆ ಮಾಡಿಕೊಂಡ ವಿಷಯಗಳ ಮೇಲೆ ಆಗಿದ್ದು ಆದ ಕಾರಣ ಇದಿರಂದ ಹಿಂದೆ ಸರಿಯಲಾಗಿದೆ ಎಂಬ ಮಾತುಗಳನ್ನು ಆಡಿದ್ದಾರೆ.

ಸಿಎಂರ ಬಹಿರಂಗ ಚರ್ಚೆ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. 1200 ಜನ ಸಾಮರ್ಥ್ಯವಿರುವ ಹಾಲ್​ಗೆ ಭದ್ರತೆಗಾಗಿ 2500 ಜನ ಪೊಲೀಸರನ್ನು ನೇಮಕ ಮಾಡಲಾಗಿತ್ತು ಎಂಬ ಅಂಶ ಹೊರ ಬಿದ್ದಿದೆ.

ಇದನ್ನೂ ಓದಿ: ಎರಡನೇ ಬಾರಿಗೆ ದಾಖಲೆಯ 1.72 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ: ಕರ್ನಾಟಕದಿಂದ ಎಷ್ಟು ಕಲೆಕ್ಷನ್​​ ಗೊತ್ತಾ?​

Last Updated : Nov 1, 2023, 10:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.