ಚಂಡೀಗಢ(ಪಂಜಾಬ್) : ಪಂಜಾಬ್‌ನಲ್ಲಿ ಹೊಸದಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಭಗವಂತ್ ಮಾನ್ ನೇತೃತ್ವದ ಸರ್ಕಾರ ಪ್ರತಿದಿನ ಒಂದಿಲ್ಲೊಂದು ಹೊಸ ನಿರ್ಧಾರ ಕೈಗೊಳ್ಳುತ್ತಿದೆ.
ಈಗಾಗಲೇ ಭ್ರಷ್ಟಾಚಾರ ತಡೆಗೆ ರಾಜ್ಯದ ಜನರಿಗೆ ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಆರಂಭ ಮಾಡಿರುವ ಆಮ್ ಆದ್ಮಿ, ಇಂದಿನ ಚೊಚ್ಚಲ ಸಚಿವ ಸಂಪುಟದಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.
ಭಗವಂತ್ ಮಾನ್ ಕ್ಯಾಬಿನೆಟ್ಗೆ ಇಂದು ಬೆಳಗ್ಗೆ 10 ಶಾಸಕರು ಸಚಿವರಾಗಿ ಸೇರ್ಪಡೆಯಾಗಿದ್ದು, ಇದರ ಬೆನ್ನಲ್ಲೇ ಅವರೊಂದಿಗೆ ಚೊಚ್ಚಲ ಸಚಿವ ಸಂಪುಟ ಸಭೆ ನಡೆಸಲಾಯಿತು.
ಈ ವೇಳೆ, ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 10 ಸಾವಿರ ಹುದ್ದೆ ಹಾಗೂ ಇತರೆ ಇಲಾಖೆಯಲ್ಲಿನ 15 ಸಾವಿರ ಹುದ್ದೆ ಸೇರಿ ಒಟ್ಟು 25 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿ ಪ್ರಸ್ತಾವನೆಯನ್ನ ಕ್ಯಾಬಿನೆಟ್ನಲ್ಲಿ ಅಂಗೀಕಾರ ಮಾಡಲಾಗಿದೆ. ಹೀಗಾಗಿ, ಮುಂದಿನ ಕೆಲ ದಿನಗಳಲ್ಲೇ ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.
-
The Cabinet has passed the proposal of providing a total of 25,000 govt jobs, including 10,000 vacancies in the Punjab Police department & 15,000 vacancies in other govt departments: Punjab CM Bhagwant Mann, after his first cabinet meeting
— ANI (@ANI) March 19, 2022 " class="align-text-top noRightClick twitterSection" data="
(Source: CMO) pic.twitter.com/hJgn4TVppa
">The Cabinet has passed the proposal of providing a total of 25,000 govt jobs, including 10,000 vacancies in the Punjab Police department & 15,000 vacancies in other govt departments: Punjab CM Bhagwant Mann, after his first cabinet meeting
— ANI (@ANI) March 19, 2022
(Source: CMO) pic.twitter.com/hJgn4TVppaThe Cabinet has passed the proposal of providing a total of 25,000 govt jobs, including 10,000 vacancies in the Punjab Police department & 15,000 vacancies in other govt departments: Punjab CM Bhagwant Mann, after his first cabinet meeting
— ANI (@ANI) March 19, 2022
(Source: CMO) pic.twitter.com/hJgn4TVppa
ಸಚಿವ ಸಂಪುಟದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ ಭಗವಂತ್ ಮಾನ್ ಈ ಮಾಹಿತಿ ಹಂಚಿಕೊಂಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಪಂಜಾಬ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 117 ಕ್ಷೇತ್ರಗಳ ಪೈಕಿ ಒಟ್ಟು 92 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿ ಸರ್ಕಾರ ರಚನೆ ಮಾಡಿದೆ.
ಈಗಾಗಲೇ ಕಾರ್ಯೋನ್ಮುಖರಾಗಿರುವ ಭಗವಂತ್ ಮಾನ್, ರಾಜ್ಯದ ಮಾಜಿ ಸಚಿವರು, ಶಾಸಕರು ತಾವು ಉಳಿದುಕೊಂಡಿರುವ ಸರ್ಕಾರಿ ಬಂಗಲೆ, ಫ್ಲ್ಯಾಟ್ ಖಾಲಿ ಮಾಡುವಂತೆ ಸೂಚನೆ ನೀಡಿದ್ದಾರೆ. ಇದಕ್ಕೂ ಮೊದಲು ರಾಜ್ಯದಲ್ಲಿನ ವಿಐಪಿ ಸಂಸ್ಕೃತಿ ತೆಗೆದು ಹಾಕುವ ಉದ್ದೇಶದಿಂದ ಪ್ರಮುಖರಿಗೆ ನೀಡಲಾಗಿದ್ದ ಭದ್ರತೆ ವಾಪಸ್ ಪಡೆದುಕೊಂಡಿದ್ದಾರೆ.