ಚಂಡಿಗಢ (ಪಂಜಾಬ್) : ಪಂಜಾಬ್ ಕಾಂಗ್ರೆಸ್ನಲ್ಲಿ ಆಂತರಿಕ ಸಂಘರ್ಷ ತಾರಕಕ್ಕೇರಿದೆ. ಇದರ ಪರಿಣಾಮ ಪಿಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ ಬೆನ್ನಲ್ಲೇ ರಜಿಯಾ ಸುಲ್ತಾನ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಅಚ್ಚರಿಗೆ ಕಾರಣವಾಗಿದಾರೆ.
ಕಳೆದೆರಡು ದಿನಗಳ ಹಿಂದೆ ಪಂಜಾಬ್ನಲ್ಲಿ ನೂತನ ಸಚಿವ ಸಂಪುಟ ರಚನೆಗೊಂಡಿದೆ. ರಜಿಯಾ ಸುಲ್ತಾನ್ ಕೂಡ ಅವಕಾಶ ಗಿಟ್ಟಿಸಿಕೊಂಡಿದ್ದರು. ಆದರೆ, ಇದೀಗ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡುತ್ತಿದ್ದಂತೆ ತಾವೂ ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿದ್ದು ಸಾಹೇಬ್, ತತ್ವ ಸಿದ್ಧಾಂತಗಳ ವ್ಯಕ್ತಿಯಾಗಿದಾರೆ. ಪಂಜಾಬ್ ಮತ್ತು ಪಂಜಾಬಿಯತ್ಗಾಗಿ ಹೋರಾಡುತ್ತಿದ್ದರು ಎಂದು ಹೇಳಿಕೊಂಡಿದಾರೆ.
-
Razia Sultana, who took as a Cabinet Minister of Punjab two days ago, resigns "in solidarity with Navjot Singh Sidhu", who stepped down as Punjab Congress president earlier today
— ANI (@ANI) September 28, 2021 " class="align-text-top noRightClick twitterSection" data="
She says, "Sidhu Sahab is a man of principles. He is fighting for Punjab and Punjabiyat." pic.twitter.com/XyL1fY4Ysq
">Razia Sultana, who took as a Cabinet Minister of Punjab two days ago, resigns "in solidarity with Navjot Singh Sidhu", who stepped down as Punjab Congress president earlier today
— ANI (@ANI) September 28, 2021
She says, "Sidhu Sahab is a man of principles. He is fighting for Punjab and Punjabiyat." pic.twitter.com/XyL1fY4YsqRazia Sultana, who took as a Cabinet Minister of Punjab two days ago, resigns "in solidarity with Navjot Singh Sidhu", who stepped down as Punjab Congress president earlier today
— ANI (@ANI) September 28, 2021
She says, "Sidhu Sahab is a man of principles. He is fighting for Punjab and Punjabiyat." pic.twitter.com/XyL1fY4Ysq
ಇದನ್ನೂ ಓದಿರಿ: ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ ನೀಡುತ್ತಿದ್ದಂತೆ ಈ ರೀತಿ ಕಾಲೆಳೆದ ಕ್ಯಾ. ಅಮರೀಂದರ್ ಸಿಂಗ್!
ನವಜೋತ್ ಸಿಂಗ್ ಸಿಧು ಹಾಗೂ ರಜಿಯಾ ಸುಲ್ತಾನ್ ರಾಜೀನಾಮೆ ನೀಡುತ್ತಿದ್ದಂತೆ ಪಂಜಾಬ್ನಲ್ಲಿ ತುರ್ತು ಕ್ಯಾಬಿನೆಟ್ ಸಭೆ ನಡೆಯುತ್ತಿರುವುದಾಗಿ ತಿಳಿದು ಬಂದಿದೆ. ಕಳೆದ ಕೆಲ ತಿಂಗಳಿಂದ ಪಂಜಾಬ್ ಕಾಂಗ್ರೆಸ್ನಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದೆ.
ಕಳೆದ ಜುಲೈ ತಿಂಗಳಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಸಿಧು ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಾರೆ. ಪಂಜಾಬ್ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರ ಮಧ್ಯೆ ಕಾಂಗ್ರೆಸ್ನಲ್ಲಿ ಈ ಬಿಕ್ಕಟ್ಟು ಉದ್ಭವಗೊಂಡಿದೆ.