ಚಂಡೀಗಢ(ಪಂಜಾಬ್): ಪಂಜಾಬ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಎದುರಿಸಿರುವ ಬೆನ್ನಲ್ಲೇ ಇದೀಗ ನೂತನ ಡಿಜಿಪಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಪಂಜಾಬ್ ಚುನಾವಣೆ ದಿನಾಂಕ ಘೋಷಣೆಯಾಗುವುದಕ್ಕೂ ಸ್ವಲ್ಪ ಗಂಟೆ ಮುಂಚಿತವಾಗಿ ಈ ಮಹತ್ವದ ನಿರ್ಧಾರ ಹೊರ ಬಿದ್ದಿದೆ.
ಪಂಜಾಬ್ ನೂತನ ಪೊಲೀಸ್ ಮುಖ್ಯಸ್ಥರಾಗಿ ಇದೀಗ ವಿರೇಶ್ ಕುಮಾರ್ ಭಾವ್ರಾ ನೇಮಕಗೊಂಡಿದ್ದಾರೆ. ಇವರು 1987ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದಾರೆ.
-
1987-batch IPS officer Viresh Kumar Bhawra assumes charge as Director General of Police, Punjab pic.twitter.com/d9XkuErKEb
— ANI (@ANI) January 8, 2022 " class="align-text-top noRightClick twitterSection" data="
">1987-batch IPS officer Viresh Kumar Bhawra assumes charge as Director General of Police, Punjab pic.twitter.com/d9XkuErKEb
— ANI (@ANI) January 8, 20221987-batch IPS officer Viresh Kumar Bhawra assumes charge as Director General of Police, Punjab pic.twitter.com/d9XkuErKEb
— ANI (@ANI) January 8, 2022
ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನೂತನ ಸಿಎಂ ಆಗಿರುವ ಚರಣ್ಜಿತ್ ಸಿಂಗ್ ಚನ್ನಿ ಅಧಿಕಾರ ಅವಧಿಯಲ್ಲಿ ಮೂರನೇ ಸಲ(100 ದಿನಗಳಲ್ಲಿ) ಡಿಜಿಪಿ ಬದಲಾವಣೆ ಮಾಡಲಾಗಿದೆ. ನಿರ್ಗಮಿತ ಪಂಜಾಬ್ ಡಿಜಿಪಿ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಇದೀಗ ವಿಕೆ ಭಾವ್ರಾ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ.
ಪಂಜಾಬ್ ಡಿಜಿಪಿ ರೇಸ್ನಲ್ಲಿ ದಿನಕರ್ ಗುಪ್ತಾ, ಪ್ರಬೋಧ್ ಕುಮಾರ್ ಹಾಗೂ ಭಾವ್ರಾ ಅವರ ಹೆಸರು ಕೇಳಿ ಬಂದಿತ್ತು. ಅಂತಿಮವಾಗಿ ವಿಕೆ ಭಾವ್ರಾ ಆಯ್ಕೆಯಾಗಿದ್ದು, ಮುಂದಿನ ಎರಡು ವರ್ಷಗಳ ಕಾಲ ಇವರ ಅಧಿಕಾರದ ಅವಧಿ ಇರಲಿದೆ.
ಕಳೆದ ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಭದ್ರತಾ ಲೋಪ ಎದುರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಡಿಜಿಪಿ ಆಗಿದ್ದ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಸೇರಿದಂತೆ 13 ಉನ್ನತಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು.