ಚಂಢೀಗಢ(ಪಂಜಾಬ್): ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆಯ ಫಲಿತಾಂಶ ಒಂದೊಂದಾಗಿ ಹೊರಬರುತ್ತಿದ್ದು, ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಎಲ್ಲಾ ಪಕ್ಷಗಳನ್ನು ಹಿಂದಿಕ್ಕಿ ಮುನ್ನಡೆ ಸಾಧಿಸುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್‌ನ ಓರ್ವ ಮತ್ತು ಬಿಜೆಪಿಯ ಓರ್ವ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸೋಲನುಭವಿಸಿದ್ದಾರೆ.
ಕಪುರ್ತಲಾದಿಂದ ಕಾಂಗ್ರೆಸ್‌ನ ರಾಣಾ ಗುರ್ಜಿತ್ ಸಿಂಗ್ ಮತ್ತು ಪಠಾಣ್‌ಕೋಟ್‌ನಿಂದ ಬಿಜೆಪಿಯ ಅಶ್ವಿನಿ ಕುಮಾರ್ ಗೆದ್ದಿದ್ದಾರೆ. ಗುರ್ಜಿತ್ ಸಿಂಗ್ ಕ್ಷೇತ್ರದಲ್ಲಿ ರಾಣಾ ಗುರ್ಜಿತ್ ಸಿಂಗ್ 3400 ಮತಗಳಿಂದ ಗೆದ್ದಿದ್ದಾರೆ. ಆಮ್ ಆದ್ಮಿ ಪಕ್ಷದ ಮಂಜು ರಾಣಾ ಗುರ್ಜಿತ್ ಅವರ ವಿರುದ್ಧ ಸ್ಪರ್ಧಿಸಿದ್ದರು.
ಆಪ್ ಪಕ್ಷ ಮುನ್ನಡೆ ಭಾರಿ ಮುನ್ನಡೆ ಕಾಯ್ದುಕೊಂಡಿರುವಂತೆ ಟ್ವೀಟ್ ಮಾಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ 'ಈ ಕ್ರಾಂತಿಗಾಗಿ ಪಂಜಾಬ್ ಜನರಿಗೆ ಅಭಿನಂದನೆಗಳು' ಎಂದು ಧನ್ಯವಾದ ಸಲ್ಲಿಸಿದ್ದಾರೆ. ಈಗಿನ ಟ್ರೆಂಡ್ನಂತೆ 89 ಸ್ಥಾನಗಳಲ್ಲಿ ಆಪ್, 18 ಸ್ಥಾನಗಳಲ್ಲಿ ಕಾಂಗ್ರೆಸ್, ಶಿರೋಮಣಿ ಅಕಾಲಿದಳ 7, ಬಿಜೆಪಿ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.