ETV Bharat / bharat

ಅಜಯ್​ ದೇವಗನ್​ To ಅಭಿಷೇಕ್​ ಬಚ್ಚನ್... ಪುನೀತ್​ ನಿಧನಕ್ಕೆ ಬಾಲಿವುಡ್ ಕಂಬನಿ​​​ - ಅಭಿಷೇಕ್​ ಬಚ್ಚನ್​

ಕನ್ನಡ ಚಿತ್ರರಂಗದ ಅಪ್ಪು ಖ್ಯಾತಿಯ ಪುನೀತ್ ರಾಜ್​ಕುಮಾರ್ ನಿಧನಕ್ಕೆ ಬಾಲಿವುಡ್​​ನ ಅನೇಕರು ಕಂಬನಿ ಮಿಡಿದಿದ್ದು, ನಟನ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

Puneeth Rajkumar death
Puneeth Rajkumar death
author img

By

Published : Oct 30, 2021, 1:58 AM IST

Updated : Oct 30, 2021, 5:57 AM IST

ಹೈದರಾಬಾದ್​: ಸ್ಯಾಂಡಲ್​ವುಡ್​ನ ಮೇರುನಟ ಪುನೀತ್ ರಾಜ್​ಕುಮಾರ್​(46) ಮರಳಿ ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಅವರ ದಿಢೀರ್​​​ ನಿಧನಕ್ಕೆ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಬಾಲಿವುಡ್​ ಸೇರಿದಂತೆ ಪರಭಾಷೆಯ ಚಿತ್ರರಂಗದ ಕಲಾವಿದರು ಕಂಬನಿ ಮಿಡಿದಿದ್ದಾರೆ.

ಪವರ್​​ ಸ್ಟಾರ್​​ನ ಅಕಾಲಿಕ ನಿಧನಕ್ಕೆ ಬಾಲಿವುಡ್​ನ ಅನಿಲ್​ ಕಪೂರ್​​, ಅಜಯ್​ ದೇವಗನ್​​, ಅಭಿಷೇಕ್​ ಬಚ್ಚನ್​​, ತಾಪ್ಸಿ ಪನ್ನು ಸೇರಿದಂತೆ ಅನೇಕರು ಟ್ವೀಟ್ ಮಾಡಿದ್ದಾರೆ.

ಅನಿಲ್​ ಕಪೂರ್​​

ನಟನ ನಿಧನಕ್ಕೆ ಕಂಬನಿ ಮಿಡಿದಿರುವ ಬಾಲಿವುಡ್​ನ ಹಿರಿಯ ನಟ ಅನಿಲ್ ಕಪೂರ್​, ಸಾವಿನ ಸುದ್ದಿ ಆಘಾತಕಾರಿ ಮತ್ತು ಅತ್ಯಂತ ದುಃಖಕರ. ಮೃತನ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ದೇವರು ನೀಡಲಿ. ಹೃದಯಪೂರ್ವಕ ಸಂತಾಪ ಎಂದಿದ್ದಾರೆ.

ಅಭಿಷೇಕ್​ ಬಚ್ಚನ್​

  • Heartbreaking news! Gone too soon. #PuneethRajkumar
    My condolences to his family and his fans. You will be missed.

    — Abhishek Bachchan (@juniorbachchan) October 29, 2021 " class="align-text-top noRightClick twitterSection" data=" ">

ಹೃದಯವಿದ್ರಾವಕ ಸುದ್ದಿ. ಪುನೀತ್ ರಾಜ್​ ಕುಮಾರ್​ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನನ್ನ ಸಂತಾಪಗಳು. ನಿಮ್ಮನ್ನೂ ಮಿಸ್ ಮಾಡಿಕೊಳ್ಳಲಿದ್ದೇವೆ.

ಸಂಜಯ್​ ದತ್​

ನಾನು ಭೇಟಿಯಾಗಿರುವ ಅತ್ಯಂತ ಕರುಣಾಮಯಿ ಮತ್ತು ಸರಳ ವ್ಯಕ್ತಿಗಳಲ್ಲಿ ನೀವು ಪ್ರಮುಖರು. ಜಗತ್ತು ಮತ್ತೊಂದು ರತ್ನ ಕಳೆದುಕೊಂಡಿದೆ. ನಿಮ್ಮ ಕುಟುಂಬ ಹಾಗೂ ಸ್ನೇಹಿತರಿಗೆ ನನ್ನ ಹೃತ್ಪೂರ್ವಕ ಸಂತಾಪ.

ಅಜಯ್​ ದೇವಗನ್

  • Your legacy will live on. RIP Puneeth. Heartfelt condolences to his family & fans.#PuneethRajkumar

    — Ajay Devgn (@ajaydevgn) October 29, 2021 " class="align-text-top noRightClick twitterSection" data=" ">

ನಿಮ್ಮ ನಟನೆ ಜೀವಂತವಾಗಿರಲಿದೆ.RIP ಪುನೀತ್​. ನಿಮ್ಮ ಕುಟುಂಬ ಮತ್ತು ಅಭಿಮಾನಿಗಳಿಗೆ ಹೃತ್ಪೂರ್ವಕ ಸಂತಾಪ

ಜನಿಲಿ, ರಿತೇಶ್ ದೇಶ್​ಮುಖ್​, ಸುನೀಲ್ ಶೆಟ್ಟಿ

ನಟ ಪುನೀತ್ ರಾಜ್​ಕುಮಾರ್ ನಿಧನಕ್ಕೆ ನಟಿ ಜನಿಲಿ ಹಾಗೂ ರಿತೇಶ್ ದೇಶ್​ಮುಖ್​ ಆಘಾತ ವ್ಯಕ್ತಪಡಿಸಿದ್ದಾರೆ. ಜೊತೆಗೆ ಟ್ವೀಟ್ ಮಾಡಿರುವ ನಟ ಸುನೀಲ್ ಶೆಟ್ಟಿ ಪುನೀತ್ ರಾಜ್​ ಕುಮಾರ್ ಸಾವನ್ನಪ್ಪಿದ್ದಾರೆಂಬ ಸುದ್ದಿ ನಂಬಲು ಅಸಾಧ್ಯ. ನಿಮ್ಮ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ ಎಂದಿದ್ದಾರೆ

ಖುಷ್ಬೂ ಸುಂದರ್​

ನಿಮ್ಮ ನಮ್ರತೆ, ನಿಮ್ಮ ಮಾನವೀಯತೆ. ನಿಮ್ಮ ಜೀವನ ಪ್ರೀತಿ ಯಶಸ್ವಿಯಾಗಲು ಬಯಸುವವರಿಗೆ ಪಾಠವಾಗಿದೆ.

ಇದನ್ನೂ ಓದಿರಿ: ನಟ ಪುನೀತ್​ ನಿಧನಕ್ಕೆ ದೆಹಲಿ ಸಿಎಂ ಕೇಜ್ರಿವಾಲ್ ಸಂತಾಪ, ಶ್ರದ್ಧಾಂಜಲಿ ಸಲ್ಲಿಸಿದ AAP​

ಉಳಿದಂತೆ ಚೀರಜೀವಿ, ಮಹೇಶ್ ಬಾಬು, ಅರ್ಮಾನ್ ಮಲಿಕ್​,ಅನುಪಮ್ ಖೇರ್​,ಸಿದ್ಧಾರ್ಥ್ ಪ್ರಕಾಶ್ ರಾಜ್​,ತಮ್ಮನ್ನಾ ಭಾಟಿಯಾ, ಶ್ರೇಯಾ ಘೋಷಲ್​,ಅದಿತಿ ರಾವ್​ ಟ್ವೀಟ್ ಮಾಡಿ ಕಂಬನಿ ಮಿಡಿದಿದ್ದಾರೆ.

Last Updated : Oct 30, 2021, 5:57 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.