ETV Bharat / bharat

ಇಂದು ರಾತ್ರಿ 11:30ಕ್ಕೆ ಪುನೀತ್ ಮಗಳು ಧೃತಿ ಆಗಮನ.. ಭಾನುವಾರ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿ - ಪುನೀತ್​ ರಾಜ್​ಕುಮಾರ್ ಮಗಳು

ಪವರ್​​ಸ್ಟಾರ್ ಪುನೀತ್​ ರಾಜ್​ಕುಮಾರ್​ ನಿಧನರಾಗಿದ್ದು, ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ. ಇದರ ಮಧ್ಯೆ ಅವರ ಮಗಳು ಅಮೆರಿಕದಿಂದ ಬರಬೇಕಾಗಿದ್ದು, ಲಭ್ಯವಾಗಿರುವ ಮಾಹಿತಿ ಪ್ರಕಾರ ರಾತ್ರಿ 11:30ಕ್ಕೆ ಬೆಂಗಳೂರಿಗೆ ಬರುವ ಸಾಧ್ಯತೆ ಇದೆ.

PUNEETH RAJKUMAR DAUGHTER
PUNEETH RAJKUMAR DAUGHTER
author img

By

Published : Oct 30, 2021, 6:36 AM IST

ಬೆಂಗಳೂರು: ಸ್ಯಾಂಡಲ್​ವುಡ್​ನ ಯುವರಾಜ ಪುನೀತ್​ ರಾಜ್​ಕುಮಾರ್​ ದಿಢೀರ್ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದು, ನಾಳೆ ಸಕಲ ಸರ್ಕಾರ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಯಲಿದೆ. ಇದರ ಬೆನ್ನಲ್ಲೇ ವಿದೇಶದಲ್ಲಿರುವ ಪುನೀತ್ ರಾಜ್​ಕುಮಾರ್​ ಮಗಳು ಧೃತಿ ಆಗಮನದಲ್ಲಿ ಸ್ವಲ್ಪ ತಡವಾಗಲಿದೆ ಎಂದು ಹೇಳಲಾಗುತ್ತಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಧೃತಿ ಭಾರತೀಯ ಕಾಲಮಾನದ ಪ್ರಕಾರ ಸಂಜೆ 4ರಿಂದ 4:30ರೊಳಗೆ ಬೆಂಗಳೂರಿಗೆ ಆಗಮಿಸಬೇಕಾಗಿತ್ತು. ಆದರೆ, ಇದೀಗ ಅವರು ಸುಮಾರು 5-6 ಗಂಟೆಗಳ ಕಾಲ ತಡವಾಗಿ ಆಗಮಿಸುವ ಸಾಧ್ಯತೆ ಇರುವ ಕಾರಣ ರಾತ್ರಿ 11ರ ಬಳಿಕ ಬೆಂಗಳೂರಿಗೆ ಬರಲಿದ್ದಾರೆ. ಹೀಗಾಗಿ ಭಾನುವಾರ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿರಿ: ಪುನೀತ್ ಅಸ್ತಂಗತ: ರಾತ್ರಿ ಪೂರ್ತಿ ತಂಡೋಪ ತಂಡವಾಗಿ ಹರಿದು ಬಂದ ಅಭಿಮಾನಿಗಳು

ಒಂದು ವೇಳೆ ಧೃತಿ ನಾಲ್ಕು ಗಂಟೆಯ ವೇಳೆ ಸರಿಯಾಗಿ ಬಂದರೆ ಇಂದೇ ಪುನೀತ್ ಅವರ ಅಂತ್ಯಕ್ರಿಯೆ ಮಾಡುವ ಸಾಧ್ಯತೆಯೂ ಹೆಚ್ಚಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿತ್ತು. ಆದರೆ, ಇದೀಗ ತಡವಾಗುತ್ತಿರುವ ಕಾರಣ ನಾಳೆ ಸ್ಯಾಂಡಲ್​ವುಡ್​​ ನಟನ ಅಂತ್ಯಕ್ರಿಯೆ ನಡೆಯಲಿದೆ. ಪುನೀತ್ ರಾಜ್​​ಕುಮಾರ್​ಗೆ ಇಬ್ಬರು ಮಕ್ಕಳಿದ್ದು ಅವರೇ ವಂದಿತಾ, ಧೃತಿ. ಧೃತಿ ಅಮೆರಿಕಾದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.