ಪವರ್ಸ್ಟಾರ್ ಪುನೀತ್ ರಾಜಕುಮಾರ್ ವಿಧಿವಶರಾದ ದಿನದಿಂದಲೂ ಕನ್ನಡಿಗರಲ್ಲಿ ದುಃಖ ಮಡುಗಟ್ಟಿದೆ. ಪುನೀತ್ ಅಗಲಿಕೆಗೆ ಸ್ಯಾಂಡಲ್ವುಡ್ ಮಾತ್ರವಲ್ಲದೇ ಬಾಲಿವುಡ್, ಟಾಲಿವುಡ್, ಕಾಲಿವುಡ್ ನಟರೂ ಕೂಡಾ ಸಂತಾಪ ಸೂಚಿಸಿ, ಭಾವುಕರಾಗಿದ್ದಾರೆ.
ಈಗ ತೆಲುಗು ಕಾಮಿಡಿ ರಿಯಾಲಿಟಿ ಶೋ 'ಶ್ರೀದೇವಿ ಡ್ರಾಮಾ ಕಂಪನಿ' ಪುನೀತ್ ರಾಜಕುಮಾರ್ಗೆ ಶ್ರದ್ಧಾಂಜಲಿ ಸಲ್ಲಿಸಿದೆ. ಮುಂದಿನ ಭಾನುವಾರ ಪ್ರಸಾರವಾಗಲಿರುವ ಎಪಿಸೋಡ್ ಅನ್ನು ಪುನೀತ್ ರಾಜಕುಮಾರ್ಗೆ ಅರ್ಪಿಸಲಾಗಿದೆ.
- " class="align-text-top noRightClick twitterSection" data="">
ಈಗ ಆ ಎಪಿಸೋಡ್ಗೆ ಸಂಬಂಧಿಸಿದ ಪ್ರೋಮೋ ಬಿಡುಗಡೆಯಾಗಿದೆ. ಪಿಲ್ಲಲ ಸಂದಡಿ (ಮಕ್ಕಳ ಹಬ್ಬ) ಹೆಸರಿನಲ್ಲಿ ಈ ಎಪಿಸೋಡ್ ಪ್ರಸಾರವಾಗಲಿದ್ದು, ಎಂದಿನಂತೆ ಗೆಟಪ್ ಶ್ರೀನು, ರಾಂಪ್ರಸಾದ್ ಮುಂತಾದವರ ಜೊತೆಗೆ ಮಕ್ಕಳು ಪಾಲ್ಗೊಳ್ಳಲಿದ್ದಾರೆ. ನವೆಂಬರ್ 14ರಂದು ಈಟಿವಿಯಲ್ಲಿ ಎಪಿಸೋಡ್ ಪ್ರಸಾರವಾಗಲಿದೆ.
ಇದನ್ನೂ ಓದಿ: ಪುನೀತ್ ಸರ್ಗೆ ಶೀಘ್ರ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ಕೊಡಲಿ: ನಟ ಪ್ರೇಮ್