ETV Bharat / bharat

Pune Crime: ಪತ್ನಿ, ಸೋದರಳಿಯನ ಗುಂಡಿಕ್ಕಿ ಕೊಂದು ಆತ್ಮಹತ್ಯೆಗೆ ಶರಣಾದ ಸಹಾಯಕ ಪೊಲೀಸ್​ ಕಮಿಷನರ್​! - ಈಟಿವಿ ಭಾರತ ಕನ್ನಡ

Pune Crime: ಪುಣೆಯ ಸಹಾಯಕ ಪೊಲೀಸ್​ ಕಮಿಷನರ್​ ತನ್ನ ಪತ್ನಿ ಮತ್ತು ಸೋದರಳಿಯನನ್ನು ಗುಂಡಿಕ್ಕಿ ಕೊಂದು, ತಾನೂ ಆತ್ಮಹತ್ಮೆ ಮಾಡಿಕೊಂಡಿದ್ದಾರೆ.

ಪತ್ನಿ, ಸೋದರಳಿಯನ ಕೊಂದು ಪೊಲೀಸ್​ ಕಮಿಷನರ್​ ಆತ್ಮಹತ್ಯೆ

author img

By

Published : Jul 24, 2023, 1:21 PM IST

Updated : Jul 24, 2023, 1:27 PM IST

ಪುಣೆ (ಮಹಾರಾಷ್ಟ್ರ): ಸಹಾಯಕ ಪೊಲೀಸ್ ಕಮಿಷನರ್​ರೊಬ್ಬರು (ಎಸಿಪಿ) ತನ್ನ ಪತ್ನಿ ಮತ್ತು ಸೋದರಳಿಯನನ್ನು ಗುಂಡು ಹಾರಿಸಿ ಹತ್ಯೆಗೈದು ಬಳಿಕ ತಾವೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ (ಇಂದು) ಬೆಳಗ್ಗೆ 4 ಗಂಟೆಯ ಸುಮಾರಿಗೆ ಪುಣೆ ನಗರದಲ್ಲಿ ನಡೆದಿದೆ. ಪೊಲೀಸ್ ಸಹಾಯಕ ಕಮಿಷನರ್ ಭರತ್ ಗಾಯಕ್ವಾಡ್ (54), ಮೋನಿ ಗಾಯಕ್ವಾಡ್ (44) ಮತ್ತು ದೀಪಕ್ ಗಾಯಕ್ವಾಡ್ (35) ಮೃತರೆಂದು ಗುರುತಿಸಲಾಗಿದೆ.

ಭರತ್ ಗಾಯಕ್ವಾಡ್ ಅವರು ಅಮರಾವತಿ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕುಟುಂಬ ಪುಣೆಯಲ್ಲಿ ನೆಲೆಸಿತ್ತು. ಗಾಯಕ್ವಾಡ್ ಅವರ ಈ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಭರತ್ ಗಾಯಕ್ವಾಡ್ ಅವರ ಕುಟುಂಬ ಪುಣೆಯ ಬಾಲೆವಾಡಿ ಪ್ರದೇಶದಲ್ಲಿ ವಾಸವಿತ್ತು. ಶನಿವಾರ ರಜೆಯ ಮೇಲೆ ಪುಣೆಗೆ ಆಗಮಿಸಿದ್ದರು ಎಂಬ ಮಾಹಿತಿ ದೊರೆತಿದೆ. ಇಂದು ಬೆಳಗಿನ ಜಾವ 3:30ರ ಹೊತ್ತಿಗೆ ಮೊದಲಿಗೆ ಪತ್ನಿಯ ತಲೆಗೆ ಗುಂಡು ಹಾರಿಸಿದ್ದಾರೆ. ಗುಂಡಿನ ಸದ್ದು ಕೇಳಿ ಪುತ್ರ ಹಾಗೂ ಸೋದರಳಿಯ ಓಡಿ ಬಂದಿದ್ದಾರೆ. ಕೋಣೆಯ ಬಾಗಿಲು ತೆರೆಯುತ್ತಿದ್ದಂತೆ ಸೋದರಳಿಯ ದೀಪಕ್ ಮೇಲೂ ಗುಂಡು ಹಾರಿಸಿದ್ದಾರೆ. ದೀಪಕ್ ಎದೆಗೆ ಗುಂಡು ತಗುಲಿದ್ದು ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಇದಾದ ಬಳಿಕ ಗಾಯಕ್ವಾಡ್ ತಾನೂ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ.

ಪೊಲೀಸ್ ಅಧಿಕಾರಿ ತನ್ನ ಪತ್ನಿ ಮತ್ತು ಸೋದರಳಿಯನನ್ನು ಗುಂಡಿಕ್ಕಿ ಕೊಂದು ತಾವೂ ಆತ್ಮಹತ್ಯೆ ಮಾಡಿಕೊಂಡಿರುವುದರ ಹಿಂದಿನ ಕಾರಣ ತಿಳಿದು ಬಂದಿಲ್ಲ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಚತುಃಶೃಂಗಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಘಟನೆಯ ಬಗ್ಗೆ ಚಾತುಃಶೃಂಗಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ನಿರೀಕ್ಷಕ ಮಾಹಿತಿ ನೀಡಿ, "ಅಮರಾವತಿ ಪೊಲೀಸ್ ಪಡೆಯ ಸಹಾಯಕ ಪೊಲೀಸ್ ಕಮಿಷನರ್ ಭರತ್ ಗಾಯಕ್ವಾಡ್ ಅವರು ತಮ್ಮ ಪತ್ನಿ ಮೋನಿ ಗಾಯಕ್ವಾಡ್ ಅವರ ಮೇಲೆ ಮುಂಜಾನೆ ಗುಂಡು ಹಾರಿಸಿದ್ದಾರೆ. ಇದನ್ನು ತಡೆಯಲು ಮಗ ಮತ್ತು ಸೋದರಳಿಯ ಹೋದಾಗ, ಸೋದರಳಿಯನ ಮೇಲೂ ಗುಂಡು ಹಾರಿಸಿದ್ದಾರೆ. ಬಳಿಕ ಗಾಯಕ್ವಾಡ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ" ಎಂದು ಹೇಳಿದರು.

ಇದನ್ನೂ ಓದಿ: ಹುಬ್ಬಳ್ಳಿ: ಆತ್ಮಹತ್ಯೆಗೆ ಶರಣಾದ ಪೊಲೀಸ್ ಕಾನ್ಸ್‌ಸ್ಟೇಬಲ್

Last Updated : Jul 24, 2023, 1:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.