ಪುದುಕ್ಕೊಟ್ಟೈ(ತಮಿಳುನಾಡು) : ಜಲ್ಲಿಕಟ್ಟು ಕ್ರೀಡೆ ತಮಿಳುನಾಡಿನ ಒಂದು ಪ್ರಮುಖ ಆಚರಣೆಯಾಗಿದೆ. ಇದು ಹೋರಿಗಳೊಂದಿಗೆ ಸೆಣಸಾಡುವ ಅಪಾಯಕಾರಿ ಆಟ. ಪುದುಕೊಟ್ಟೈ ಜಿಲ್ಲೆಯ ತಚ್ಚಂಕುರಿಚಿಯಲ್ಲಿ ನಿನ್ನೆ (ಗುರುವಾರ) ನಡೆದ ಜಲ್ಲಿಕಟ್ಟು ಕ್ರೀಡೆಯಲ್ಲಿ 44 ಮಂದಿ ಗಾಯಗೊಂಡಿದ್ದಾರೆ.
2022ರ ಮೊದಲ ಜಲ್ಲಿಕಟ್ಟು ತಚ್ಚಂಕುರಿಚಿಯಲ್ಲಿ ನಿನ್ನೆ (ಜ.13) ನಡೆಯಿತು. ಇದರಲ್ಲಿ 600 ಹೋರಿಗಳು ಹಾಗೂ 300 ಗೋರಕ್ಷಕರು ಭಾಗವಹಿಸಿದ್ದರು. ಜಲ್ಲಿಕಟ್ಟು ಸ್ಪರ್ಧೆಯನ್ನು ಕಾನೂನು ಸಚಿವ ರಘುಪತಿ, ಪರಿಸರ ಸಚಿವ ಮೇಯ್ಯನಾಥನ್ ಮತ್ತು ಜಿಲ್ಲಾಧಿಕಾರಿ ಕವಿತಾ ರಾಮು ಉದ್ಘಾಟಿಸಿದರು.
2 ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಹಾಗೂ ಆರ್ಟಿಪಿಸಿಆರ್ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿತ್ತು. ಹಿಂದಿನಿಂದ ಓಡಿಸುತ್ತಿದ್ದವರ ವಿರುದ್ಧ ಹೋರಿಗಳು ತಿರುಗಿಬಿದ್ದ ಪರಿಣಾಮ 44 ಮಂದಿ ಗಾಯಗೊಂಡಿದ್ದಾರೆ. ನಂತರ ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಜಲ್ಲಿಕಟ್ಟು ಸ್ಪರ್ಧೆಯನ್ನು ನಿಷೇಧ ಮಾಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದ್ದರೂ, ಸಹ ಸಂಪ್ರದಾಯ ಮುರಿಯಲು ಒಪ್ಪದ ತಮಿಳುನಾಡಿನ ಜನ ಪ್ರತಿವರ್ಷ ಈ ಕ್ರೀಡೆಯನ್ನು ಆಯೋಜನೆ ಮಾಡುತ್ತಾರೆ.
ಇದನ್ನೂ ಓದಿ: ಮಹಾರಾಷ್ಟ್ರದ ಆಸ್ಪತ್ರೆಯೊಂದರ ಬಯೋ ಗ್ಯಾಸ್ ಯುನಿಟ್ನಲ್ಲಿ ಭ್ರೂಣದ 11 ತಲೆಬುರುಡೆ, ಮೂಳೆಗಳು ಪತ್ತೆ