ಪುದುಚೇರಿ : ದೇಶದಲ್ಲಿ ಕೊರೊನಾ ಮೂರನೇ ಅಲೆ ಸಂಭವಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪುದುಚೇರಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಕೋವಿಡ್-19 ಲಸಿಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ಪುದುಚೇರಿ ಆರೋಗ್ಯ ಕಾಯ್ದೆ-1973ಯ ಸೆಕ್ಷನ್ 8 ಮತ್ತು ಸೆಕ್ಷನ್ 54 (1)ರಡಿಯಲ್ಲಿ ವ್ಯಾಕ್ಸಿನೇಷನ್ ಕಡ್ಡಾಯಗೊಳಿಸಲಾಗಿದೆ. ನಿಯಮ ಉಲ್ಲಂಘಿಸಿದವರು ಕಾನೂನಿನ ಪ್ರಕಾರ ದಂಡ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: 2 ಡೋಸ್ ಕೋವಿಡ್ ಲಸಿಕೆ ಪಡೆದಿದ್ದರೆ ಮಾತ್ರ ಮಾಲ್ಗಳಿಗೆ ಪ್ರವೇಶ: ಇಂದಿನಿಂದಲೇ ಚೆಕ್ಕಿಂಗ್ ಆರಂಭ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುದುಚೇರಿ ಆರೋಗ್ಯ ನಿರ್ದೇಶಕ ಜಿ.ಶ್ರೀರಾಮುಲು, ಕೇಂದ್ರಾಡಳಿತ ಪ್ರದೇಶದಲ್ಲಿ ನಾವು ಕಡ್ಡಾಯ ಕೋವಿಡ್-19 ಲಸಿಕೆಯನ್ನು ಜಾರಿಗೊಳಿಸಿದ್ದೇವೆ. ಲಸಿಕೆಗೆ ಅರ್ಹರಾದ 10 ಲಕ್ಷಕ್ಕೂ ಅಧಿಕ ಜನಸಂಖ್ಯೆಯಲ್ಲಿ 7.74 ಲಕ್ಷ ಜನರಿಗೆ ಮಾತ್ರ ಲಸಿಕೆ ಹಾಕಲಾಗಿದೆ. ಇನ್ನೂ 2 ಲಕ್ಷ ಜನರು ಲಸಿಕೆ ಪಡೆದಿಲ್ಲ.
ಪುದುಚೇರಿಯಲ್ಲಿ ಶನಿವಾರ 28 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿವೆ. ಅದರಲ್ಲೊಬ್ಬರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 1,29,056 ಹಾಗೂ ಮೃತರ ಸಂಖ್ಯೆ 1,875ಕ್ಕೆ ಏರಿಕೆಯಾಗಿದೆ.