ETV Bharat / bharat

ದೀಪಾವಳಿಗೆ ಎಲ್ಲಾ ಕುಟುಂಬಗಳಿಗೂ ಗಿಫ್ಟ್ ನೀಡಲು ಪುದುಚೇರಿ ಸರ್ಕಾರ ನಿರ್ಧಾರ - ಪುದುಚೇರಿ ಸರ್ಕಾರದಿಂದ ದೀಪಾವಳಿಗೆ ಕೊಡುಗೆ

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಈ ಬಾರಿ ದೀಪಾವಳಿಗೆ ಎಲ್ಲಾ ಕುಟುಂಬಗಳಿಗೂ ಅಕ್ಕಿ ಮತ್ತು ಸಕ್ಕರೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ.

Puducherry Govt announces Diwali gift for family card holders
ದೀಪಾವಳಿಗೆ ಎಲ್ಲಾ ಕುಟುಂಬಗಳಿಗೂ ಗಿಫ್ಟ್ ನೀಡಲು ಪುದುಚೇರಿ ಸರ್ಕಾರ ನಿರ್ಧಾರ
author img

By

Published : Oct 26, 2021, 7:56 AM IST

ಪುದುಚೇರಿ: ಈ ಬಾರಿ ದೀಪಾವಳಿ ಹಬ್ಬಕ್ಕೆ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಸರ್ಕಾರ ಅಲ್ಲಿನ ನಾಗರಿಕರಿಗೆ ಕೊಡುಗೆಯೊಂದನ್ನು ನೀಡುತ್ತಿದೆ. ಪ್ರತಿ ಕುಟುಂಬಕ್ಕೂ 10 ಕೆ.ಜಿ ಅಕ್ಕಿ ಮತ್ತು ಎರಡು ಕೆ.ಜಿ ಸಕ್ಕರೆಯನ್ನು ಉಚಿತವಾಗಿ ನೀಡಲು ನಿರ್ಧಾರ ಮಾಡಲಾಗಿದೆ.

ಸೋಮವಾರ ಪುದುಚೇರಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಪಡಿತರ ಅಂಗಡಿಗಳ ಮೂಲಕ ಎಲ್ಲಾ ಕುಟುಂಬಗಳಿಗೆ 10 ಕೆ.ಜಿ ಅಕ್ಕಿ ಮತ್ತು ಎರಡು ಕೆ.ಜಿ ಸಕ್ಕರೆ ನೀಡಲು ನಿರ್ಧಾರ ಮಾಡಲಾಗಿದೆ.

ಇದಕ್ಕೂ ಮೊದಲು ದೀಪಾವಳಿ ಅಂಗವಾಗಿ ಕಡಿಮೆ ಬೆಲೆಯಲ್ಲಿ ಜನರಿಗೆ ಪಟಾಕಿಗಳನ್ನು ನೀಡಲು ಸರ್ಕಾರದ ಏಜೆನ್ಸಿಯಾದ ಪ್ಯಾಪ್ಸೋ ನಿರ್ಧಾರ ಮಾಡಿತ್ತು. ಸಬ್ಸಿಡಿ ಆಧಾರದಲ್ಲಿ ಪಟಾಕಿಗಳನ್ನು ನೀಡುವುದಾಗಿ ಸರ್ಕಾರ ಹೇಳಿತ್ತು.

ಇನ್ನು 2011ರ ಜನಗಣತಿಯಂತೆ 3,02,450 ಕುಟುಂಬಗಳು ಪುದುಚೇರಿಯಲ್ಲಿದ್ದು, 30,24,500 ಕೆಜಿ ಅಕ್ಕಿಯನ್ನು, 6,04,900 ಕೆಜಿ ಸಕ್ಕರೆಯನ್ನು ಈ ಬಾರಿಯ ದೀಪಾವಳಿಗೆ ಉಚಿತವಾಗಿ ನೀಡಲಿದೆ.

ಇದನ್ನೂ ಓದಿ: ನೈಜೀರಿಯಾದಲ್ಲಿ ಮಸೀದಿ ಮೇಲೆ ಬಂದೂಕುಧಾರಿಗಳ ದಾಳಿ, ಕನಿಷ್ಠ 18 ಜನರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.