ಹೈದರಾಬಾದ್: ಪುದುಚೇರಿಯಲ್ಲಿ ಮುಂದಿನ ರಾಜ್ಯಾಡಳಿತವನ್ನು ಯಾರು ಹೊರಲಿದ್ದಾರೆ.ಯಾರಿಗೆ ಎಷ್ಟು ಸೀಟು ಎಂಬುದನ್ನು ಸುದ್ದಿ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ಬಿಡುಗಡೆ ಮಾಡಿವೆ.
ಪುದುಚೇರಿ ವಿಧಾನಸಭೆಯ 30 ಸ್ಥಾನಗಳ ಚುನಾವಣೆಗಳು ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ನಡೆದವು. ಇನ್ನು ಮತದಾನದ ಎಣಿಕೆ ಕಾರ್ಯ ಮೇ 2 ರಂದು ನಡೆಯುತ್ತದೆ. ಚುನಾವಣೋತ್ತರ ಸಮೀಕ್ಷೆಗಳು ವಿಶಿಷ್ಟವಾಗಿ ಆಯ್ದ ಪ್ರದೇಶಗಳಲ್ಲಿನ ಸೀಮಿತ ಸಂಖ್ಯೆಯ ಮತದಾರರ ಪ್ರತಿಕ್ರಿಯೆಯನ್ನು ಆಧರಿಸಿ ಮಾಹಿತಿ ಬಿಡುಗಡೆ ಮಾಡಿವೆ. ಇಲ್ಲೂ ಕೂಡ 100 ಪ್ರತಿಶತದಷ್ಟು ನಿಖರತೆಯ ದಾಖಲೆಯನ್ನು ಹೊಂದಿಲ್ಲ.