ETV Bharat / bharat

ಜನರ ಮೇಲೆ ಮನಸೋಇಚ್ಛೆ ಗುಂಡಿನ ದಾಳಿ.. ಸೈಕೋ ಕಿಲ್ಲರ್​ಗಳ ಕೃತ್ಯಕ್ಕೆ​ ಓರ್ವ ಬಲಿ, 10 ಮಂದಿಗೆ ಗಾಯ - ಸಾಮೂಹಿಕ ಗುಂಡಿನ ದಾಳಿ

ಸಾರ್ವಜನಿಕರ ಮೇಲೆ ಗುಂಡಿನ ದಾಳಿ: ಬೈಕ್‌ನಲ್ಲಿ ಬಂದ ಸೈಕೋ ಕಿಲ್ಲರ್​ಗಳಿಬ್ಬರು ಬಿಹಾರದಲ್ಲಿ​ ಸಾರ್ವಜನಿಕರ ಮೇಲೆ ಏಕಾಏಕಿ ಮನಸೋಇಚ್ಛೆ ಗುಂಡು ಹಾರಿಸಿದ್ದು, ಪರಿಣಾಮ ಒಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಿಂದ 10 ಮಂದಿ ಗಾಯಗೊಂಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಗುಂಡಿನ ದಾಳಿ
psycho killers shoot at random people in bihar
author img

By

Published : Sep 14, 2022, 10:57 AM IST

ಪಾಟ್ನಾ(ಬಿಹಾರ): ರಾಜ್ಯದಲ್ಲಿ ಸೈಕೋ ಕಿಲ್ಲರ್​ಗಳ ಹಾವಳಿ ಹೆಚ್ಚಾಗುತ್ತಿದೆ. ಬೈಕ್‌ನಲ್ಲಿ ಬಂದ ವ್ಯಕ್ತಿಗಳಿಬ್ಬರು ಏಕಾಏಕಿ ರಸ್ತೆಯಲ್ಲಿದ್ದ ಜನರ ಮೇಲೆ ಗುಂಡು ಹಾರಿಸಿ ವಿಕೃತಿ ಮೆರೆದಿದ್ದು, ಓರ್ವ ಮೃತಪಟ್ಟು 10 ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ಚಂದನ್ ಕುಮಾರ್ (30) ಮೃತ ವ್ಯಕ್ತಿ. ಈ ಸಾಮೂಹಿಕ ಗುಂಡಿನ ದಾಳಿ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಬೇಗುಸರಾಯ್ ಜಿಲ್ಲೆಯ ಮಲ್ಹಿಪುರದಲ್ಲಿ ಇಬ್ಬರು, ಬರೌನಿ ಥರ್ಮಲ್ ಚೌಕ್‌ನಲ್ಲಿ ಮೂವರು, ಬರೌನಿಯಲ್ಲಿ ಇಬ್ಬರು, ತೆಘ್ರಾದಲ್ಲಿ ಇಬ್ಬರು ಮತ್ತು ಬಚ್ವಾರಾದಲ್ಲಿ ಇಬ್ಬರ ಮೇಲೆ ಗುಂಡು ಹಾರಿಸಲಾಗಿದೆ. ಗಾಯಗೊಂಡವರಲ್ಲಿ ಕೆಲವರನ್ನು ಅಮರಜೀತ್ ಕುಮಾರ್, ಗೌತಮ್ ಕುಮಾರ್, ನಿತೀಶ್ ಕುಮಾರ್, ವಿಶಾಲ್ ಕುಮಾರ್ ಮತ್ತು ದೀಪಕ್ ಕುಮಾರ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಗನ್ ಜೊತೆ ಆಟವಾಡುತ್ತಾ 1, 2 ವರ್ಷದ ಕಂದಮ್ಮಗಳಿಗೆ ಗುಂಡು ಹಾರಿಸಿದ 8ರ ಬಾಲಕ.. ಒಂದು ಮಗು ಸಾವು, ಮೊತ್ತೊಂದು ಗಂಭೀರ!

ಈ ಕುರಿತು ಮಾಹಿತಿ ನೀಡಿರುವ ಬೇಗುಸರಾಯ್ ಎಸ್ ​ಪಿ ಯೋಗೇಂದ್ರ ಕುಮಾರ್, 'ಇಬ್ಬರು ಬೈಕ್‌ನಲ್ಲಿ ಬಂದ ಶೂಟರ್‌ಗಳು ಜನ ಸಾಮಾನ್ಯರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ. ಮೇಲ್ನೋಟಕ್ಕೆ ಇಬ್ಬರೂ 'ಸೈಕೋ ಕಿಲ್ಲರ್‌ಗಳಂತೆ' ತೋರುತ್ತಿದ್ದಾರೆ. ಈಗಾಗಲೇ ಎಲ್ಲಾ ಪೊಲೀಸ್ ಠಾಣೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಆರೋಪಿಗಳ ಪತ್ತೆಗೆ ಪ್ರತ್ಯೇಕ ತಂಡ ರಚಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪರಿಶೀಲಿಸಲಾಗುತ್ತಿದೆ' ಎಂದರು.

ಇದನ್ನೂ ಓದಿ: ತ್ರಿಪುರ: ಗುಂಡಿಕ್ಕಿ ಬಿಜೆಪಿ ನಾಯಕನ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.