ಶ್ರೀಹರಿಕೋಟಾ (ಆಂಧ್ರಪ್ರದೇಶ): ಹಲವಾರು ದಿನಗಳ ನಂತರ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇದೇ ತಿಂಗಳ 14 ರಂದು ಮತ್ತೊಂದು ರಾಕೆಟ್ ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಮುಂದಾಗಿದ್ದಾರೆ.
ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್-C52 (PSLV) ರಾಕೆಟ್ ಅನ್ನು ಫೆಬ್ರವರಿ 14ರ ಬೆಳಗ್ಗೆ 5.59ಕ್ಕೆ ಉಡಾವಣೆ ಮಾಡಲಾಗುವುದು. ಕೋವಿಡ್ ಸವಾಲುಗಳ ನಡುವೆ ಇಸ್ರೋದಿಂದ ಉಡಾವಣೆಗೊಳ್ಳುತ್ತಿರುವ ಈ ವರ್ಷದ ಮೊದಲ ಉಪಗ್ರಹ ಇದಾಗಲಿದೆ. 1,710 ಕೆಜಿ ರಾಡಾರ್ ಇಮೇಜಿಂಗ್ ಉಪಗ್ರಹವು ಇನ್ನೂ ಎರಡು ಸಣ್ಣ ಬಾಹ್ಯಾಕಾಶ ನೌಕೆಗಳನ್ನು ತನ್ನೊಂದಿಗೆ ಹೊತ್ತೊಯ್ಯಲಿದೆ.
ಇದನ್ನೂ ಓದಿ: ಭಾರತದಲ್ಲಿ ಹೈಡ್ರೋಪೋನಿಕ್ಸ್ ಕೃಷಿ.. ಮತ್ತೊಂದು ಹಸಿರುಕ್ರಾಂತಿಗೆ ಅಡಿಪಾಯವಾಗಲಿದೆಯಾ ಹೊಸ ತಂತ್ರಜ್ಞಾನ?
ಇದರ ಜೊತೆಯಲ್ಲಿ ಭಾರತ ಮತ್ತು ಭೂತಾನ್ ಜಂಟಿಯಾಗಿ ನಿರ್ಮಿಸಿದ INS-2B ಉಪಗ್ರಹ InspireSat-1 ಅನ್ನು ಸಹ ಭಾರತೀಯ ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಸಂಸ್ಥೆ (IIST) ಉಡಾವಣೆ ಮಾಡಲಿದೆ. ಇಂದು ಬೆಳಗ್ಗೆ ಕೆಲ ವಿಜ್ಞಾನಿಗಳು ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರಸ್ವಾಮಿ ಆಶೀರ್ವಾದ ಪಡೆದರು. ಪ್ರತಿಬಾರಿಯೂ ಶ್ರೀಹರಿಕೋಟಾದಿಂದ ರಾಕೆಟ್ ಉಡಾವಣೆ ಮಾಡುವ ತಿಮ್ಮಪ್ಪನ ಆಶೀರ್ವಾದ ಪಡೆಯುವುದು ವಾಡಿಕೆಯಾಗಿದೆ.