ನವದೆಹಲಿ: ರಿಷಿ ಸುನಕ್ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ಅವರ ಯಶಸ್ಸನ್ನು ಸದಾ ಬಯಸುತ್ತೇವೆ ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಸಂತಸ ವ್ಯಕ್ತಪಡಿಸಿದ್ದಾರೆ.
ಭಾರತೀಯ ಮೂಲದ ಬ್ರಿಟನ್‌ನ ಮೊದಲ ಪ್ರಧಾನಿ ಸುನಕ್ :42 ವರ್ಷದ ಸುನಕ್ ಅವರು ಕನ್ಸರ್ವೇಟಿವ್ ಪಕ್ಷದ ಪ್ರಧಾನಿ ಅಭ್ಯರ್ಥಿ ಆಯ್ಕೆಯಲ್ಲಿ ಗೆದ್ದಿದ್ದಾರೆ. ಈ ಮೂಲಕ ಭಾರತೀಯ ಮೂಲದ ಬ್ರಿಟನ್‌ನ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಯನ್ನು ರಿಷಿ ಸುನಕ್ ಅಲಂಕರಿಸಿದ್ದಾರೆ. ಅವರ ಈ ಸಾಧನೆ ಕುರಿತು ಮಾವ ಇನ್ಫೋಸಿಸ್ನ ನಾರಾಯಣ ಮೂರ್ತಿ ಅವರು ಪ್ರತಿಕ್ರಿಯೆ ನೀಡಿದ್ದು, ’’ಯುನೈಟೆಡ್ ಕಿಂಗ್‌ಡಂನ್ ಜನರಿಗಾಗಿ ರಿಷಿ ಸಾಧ್ಯವಾದಷ್ಟು ಉತ್ತಮ ಸೇವೆ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವೈದ್ಯನಾಗಿದ್ದ ತಂದೆ ಮತ್ತು ತಾಯಿಯ ಮಗನಾಗಿದ್ದ ಸುನಕ್ ಅವರು ಇಂಗ್ಲೆಂಡ್ನ ಪ್ರಸಿದ್ಧ ಮಿಂಚೆಸ್ಟರ್ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಹಾಗೂ ಆಕ್ಸ್‌ಫರ್ಡ್‌ನಲ್ಲಿ ಉನ್ನತ ಶಿಕ್ಷಣ ಪೂರೈಸಿದ್ದಾರೆ. ತಮ್ಮ ಶಿಕ್ಷಣದ ಮೂಲಕ ಗೋಲ್ಡ್‌ಮನ್ ಸ್ಯಾಕ್ಸ್ ಗ್ರೂಪ್ ಇಂಕ್‌ನಲ್ಲಿ ಸೇವೆ ಸಲ್ಲಿಸಿದ ಅನುಭವ ರಿಷಿಯವರಿಗಿದೆ.
ಇನ್ನು ಸುನಕ್ ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್‌ನಿಂದ ಎಂಬಿಎ ಪದವಿ ಸಹ ಪಡೆದಿದ್ದಾರೆ. ಆ ವೇಳೆ, ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿಯವರ ಪುತ್ರಿ ಅಕ್ಷತಾ ಪರಿಚಯವಾಗಿದ್ದರು. 2009 ರಲ್ಲಿ ಅಕ್ಷತಾ ಅವರನ್ನು ವಿವಾಹವಾದರು. ಈ ದಂಪತಿಗೆ ಈಗ ಕೃಷ್ಣ ಮತ್ತು ಅನುಷ್ಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಇದನ್ನೂ ಓದಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿರುವುದು ಅಭೂತಪೂರ್ವ ಮೈಲಿಗಲ್ಲು: ಬೈಡನ್ ಗುಣಗಾನ