ETV Bharat / bharat

ಇಂದು ಸಿಂಘು ಗಡಿಯಲ್ಲಿ SKM​ ಸಭೆ : ರೈತರ ಆಂದೋಲನದ ಕುರಿತು ಮುಂದಿನ ಕ್ರಮ ಸಾಧ್ಯತೆ

ರೈತ ಸಂಘದ ಘಟಕವಾದ ಸಂಯುಕ್ತ ಕಿಸಾನ್ ಮೋರ್ಚಾ ಇಂದು ಸಿಂಘು ಗಡಿಯಲ್ಲಿ ನಡೆಯಲಿರುವ ಸಭೆಯಲ್ಲಿ ನಡೆಯುತ್ತಿರುವ ರೈತರ ಆಂದೋಲನದ ಕುರಿತು ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

Samyukt Kisan Morcha Meeting today
ಇಂದು ಸಿಂಘು ಗಡಿಯಲ್ಲಿ ಎಸ್​ಕೆಎಮ್​ ಸಭೆ
author img

By

Published : Dec 4, 2021, 3:59 PM IST

ನವದೆಹಲಿ: ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ಇಂದು ಸಿಂಘು ಗಡಿಯಲ್ಲಿ ನಡೆಸಲಿರುವ ಸಭೆಯಲ್ಲಿ ರೈತರ ಹೋರಾಟದ ಕುರಿತಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ.

ನವೆಂಬರ್​​.21ರಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್​​ಕೆಎಮ್​​) ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ ಕೇಂದ್ರ ಸರ್ಕಾರವು ಎಲ್ಲ ಬೇಡಿಕೆಗಳಿಗೆ ಪ್ರತಿಕ್ರಿಯಿಸುವವರೆಗೂ ಕಾಯಲು ನಿರ್ಧರಿಸಿತ್ತು.

ಅದರಂತೆ ನವೆಂಬರ್​​​. 29 ರಂದು ಹಮ್ಮಿಕೊಂಡಿದ್ದ ಸಂಸತ್ತಿನವರೆಗೆ ಟ್ರ್ಯಾಕ್ಟರ್​ಗಳ ಮೆರವಣಿಗೆ (ಟ್ರ್ಯಾಕ್ಟರ್ ಮಾರ್ಚ್) ಯನ್ನು ಸ್ಥಗಿತಗೊಳಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಸಮಯ ನೀಡಿತ್ತು. ಅದರಂತೆ ಇಂದು ನಿಗದಿಯಾಗಿರುವ ಸಭೆಯಲ್ಲಿ ಕಿಸಾನ್​ ಮೋರ್ಚಾ ತನ್ನ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಿದೆ ಎನ್ನಲಾಗುತ್ತಿದೆ.

ನವೆಂಬರ್ .29 ರಂದು CKM​ ಹಮ್ಮಿಕೊಂಡಿದ್ದ ಸಂಸತ್​​​ ಪಾದಯಾತ್ರೆಯನ್ನು ಮುಂದೂಡುವ ಮೂಲಕ ಡಿಸೆಂಬರ್​.04 ರವೆರೆಗೆ ಅಂತಿಮ ನಿರ್ಧಾರ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಸಮಯ ನೀಡಿದ್ದೇವೆ. ಡಿಸೆಂಬರ್​​.04 ರಂದು ಸಮಿತಿ ನಡೆಸುವ ಸಭೆಯಲ್ಲಿ ರೈತರ ಹೋರಾಟದ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು (ನವೆಂಬರ್​​ .27 ರಂದು) ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದರು.

ಗುರುನಾನಕ್ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿಯವರು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರವು ಅಗತ್ಯ ಮಸೂದೆಗಳನ್ನು ತರಲಿದೆ ಎಂದು ಘೋಷಿಸಿದ್ದರು. ಕನಿಷ್ಠ ಬೆಂಬಲ ಬೆಲೆ (ಎಂ​ಎಸ್​​ಪಿ) ಗಾಗಿ ಹೊಸ ಚೌಕಟ್ಟಿನ ಮೇಲೆ ಕೆಲಸ ಮಾಡಲು ಸರ್ಕಾರವು ಸಮಿತಿಯನ್ನು ರಚಿಸುತ್ತದೆ ಎಂದು ಪ್ರಧಾನಿ ಹೇಳಿದ್ದರು.

ಇದನ್ನೂ ಓದಿ : 1,123 ಕೆ.ಜಿ ಈರುಳ್ಳಿ ಮಾರಿದ ರೈತನಿಗೆ ಉಳಿದದ್ದು ಕೇವಲ 13 ರೂಪಾಯಿ ಮಾತ್ರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.