ಯಮುನಾನಗರ (ಹರಿಯಾಣ): ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿ ರೈತರ ಪ್ರತಿಭಟನೆ ಮುಂದುವರೆದಿದ್ದು, ಹರಿಯಾಣದ ಯಮುನಾನಗರದಲ್ಲಿ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ನಡೆದಿದೆ.
ಯಮುನಾನಗರದಲ್ಲಿ ಸಚಿವರಾದ ಕನ್ವರ್ಪಾಲ್ ಗುರ್ಜಾರ್ ಮತ್ತು ಮತ್ತು ಮೂಲಚಂದ್ ಶರ್ಮ ಎಂಬುವವರು ಸಭೆ ನಡೆಸುವ ವೇಳೆ, ಸಭೆಗೆ ಅಡ್ಡಿಪಡಿಸಲು ರೈತರು ಮುಂದಾಗಿ ಬ್ಯಾರಿಕೇಡ್ಗಳನ್ನು ಮುರಿದಿದ್ದಾರೆ. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ಸಂಭವಿಸಿದೆ.
ರೈತರ ಪ್ರತಿಭಟನೆಯ ಮಧ್ಯೆ ಕನ್ವರ್ಪಾಲ್ ಗುರ್ಜಾರ್ ಮತ್ತು ಮತ್ತು ಮೂಲಚಂದ್ ಶರ್ಮ ಸಭೆಯನ್ನು ಮುಂದುವರೆಸಿದ್ದಾರೆ. ಇದೇ ವೇಳೆ ರೈತ ಮುಖಂಡರಾದ ಸುಭಾಷ್ ಗುರ್ಜಾರ್, ಸಹಾಬ್ ಸಿಂಗ್ ಗುರ್ಜಾರ್, ಸುಮನ್ ವಾಲ್ಮೀಕಿ ಸೇರಿದಂತೆ ಹಲವಾರು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು 2020ರ ನವೆಂಬರ್ನಿಂದ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಪ್ರತಿಭಟನೆಗಳು ನಡೆಯುತ್ತಿದ್ದು, ಕೇಂದ್ರ ಸರ್ಕಾರ ಈ ಕಾಯ್ದೆಗಳು ರೈತ ಪರ ಎಂದು ಹೇಳುತ್ತಿವೆ.
ಇದನ್ನೂ ಓದಿ: ಕಾಂಟ್ರೋವರ್ಸಿ ಇಷ್ಟವಿಲ್ಲ, ವಿವಾದಕ್ಕೆ ಅವರೇ ಅಂತ್ಯವಾಡಿದ್ರೆ ನಂಗೆ ಸಂತೋಷ : ಸಂಸದೆ ಸುಮಲತಾ ಅಂಬಿ