ETV Bharat / bharat

ಜೆಎನ್‌ಯುನಲ್ಲಿ ವಿದ್ಯಾರ್ಥಿನಿಯರಿಗೆ 10 ಸಾವಿರ ದಂಡ: ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳಿಂದ ಪ್ರತಿಭಟನೆ - Jawaharlal Nehru University

JNU students Protest: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವು ವಿದ್ಯಾರ್ಥಿನಿಯರಿಗೆ ದಂಡ ವಿಧಿಸಿದ್ದು, ಈ ದಂಡ ರದ್ದುಗೊಳಿಸುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

JNU students Protest
JNU students Protest
author img

By

Published : Aug 19, 2023, 11:30 AM IST

Updated : Aug 19, 2023, 12:01 PM IST

ದಂಡ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್ ಸೇರಿದಂತೆ ಮೂವರು ವಿದ್ಯಾರ್ಥಿನಿಯರಿಗೆ 10,000 ರೂಪಾಯಿ ದಂಡ ವಿಧಿಸಲಾಗಿದೆ. ಕಾಲೇಜು ಆಡಳಿತ ಮಂಡಳಿ, ಶಿಪ್ರಾ ಹಾಸ್ಟೆಲ್‌ ವಾರ್ಡನ್ ಜೊತೆ ವಿದ್ಯಾರ್ಥಿನಿಯರು ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಈ ದಂಡ ವಿಧಿಸಿದೆ.

ಆದರೆ, ಕಾಲೇಜು ಆಡಳಿತ ಮಂಡಳಿಯಿಂದ ದಂಡದ ಸೂಚನೆ ಬಂದಿದ್ದು ಇದಕ್ಕೆ ವಿದ್ಯಾರ್ಥಿ ಸಂಘಟನೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ವಿವಿ ಆಡಳಿತವು ಏಪ್ರಿಲ್ ತಿಂಗಳಿನಲ್ಲಿ ರಾತ್ರಿ 1 ರಿಂದ 3:30 ರವರೆಗೆ ನಡೆಸಿದ ತನಿಖೆಯೇ ತಪ್ಪಿನಿಂದ ಕೂಡಿದೆ, ಹೀಗಾಗಿ ವಿದ್ಯಾರ್ಥಿನಿಯ ಮೇಲೆ ಹಾಕಿರುವ ದಂಡವನ್ನು ರದ್ದುಗೊಳಿಸಿ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದ್ದಾರೆ.

ಏನಿದು ಘಟನೆ?: ಏಪ್ರಿಲ್ ತಿಂಗಳಿನಲ್ಲಿ ಶಿಪ್ರಾ ಹಾಸ್ಟೆಲ್​ನಲ್ಲಿ ವಾರ್ಡನ್​ ತಪಾಸಣೆ ನಡೆಸಿರುತ್ತಾರೆ. ಆದರೆ ಯಾವುದೇ ಮಾಹಿತಿ ನೀಡದೇ ತಪಾಸಣೆ ನಡೆಸಿದ್ದಾರೆಂದು ಆ ದಿನ ವಿದ್ಯಾರ್ಥಿನಿಯರು ವಾರ್ಡ್​ನ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ಹಾಸ್ಟೆಲ್​ ವಾರ್ಡನ್​ ಅವರನ್ನು ಪ್ರಶ್ನಿಸಿದ್ದರಿಂದ ಆ ವಿದ್ಯಾರ್ಥಿನಿಯರಿಗೆ ಆಡಳಿತ ಮಂಡಳಿ ದಂಡ ವಿಧಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಮಾತನಾಡಿದ್ದು, ವಾರ್ಡನ್ ಏಪ್ರಿಲ್ ತಿಂಗಳಿನಲ್ಲಿ ರಾತ್ರಿ 1 ರಿಂದ 3:30 ರವರೆಗೆ ನಡೆಸಿದ ತನಿಖೆಯೇ ಸರಿಯಾಗಿ ಇಲ್ಲ. ತಡರಾತ್ರಿ ತನಿಖೆ ನಡೆಸುವ ಅವಸರವೇನಿತ್ತು ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ವಿದ್ಯಾರ್ಥಿನಿಯರಿಗೆ ದಂಡ ವಿಧಿಸಿರುವುದು ತಪ್ಪು ಎಂದಿದ್ದಾರೆ. ತನಿಖೆ ವಿರೋಧಿಸಿ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಸೇರಿದಂತೆ ವಿದ್ಯಾರ್ಥಿಗಳು ಶುಕ್ರವಾರ ರಾತ್ರಿ ಶಿಪ್ರಾ ಹಾಸ್ಟೆಲ್‌ನ ವಾರ್ಡನ್ ಮನೆ ಮುಂದೆ ಜಮಾಯಿಸಿ ತೀವ್ರ ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿಗಳ ಮೇಲೆ ವಿಧಿಸಿರುವ ದಂಡವನ್ನು ರದ್ದುಗೊಳಿಸಬೇಕು, ಇದನ್ನು ಮಾತುಕತೆಯ ಮೂಲಕ ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಇದಕ್ಕೆ ವಾರ್ಡನ್‌ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗೂ ಸಂಧಾನಕ್ಕೂ ಯಾರೂ ಬರದೇ ಇರುವುದರಿಂದ ವಿದ್ಯಾರ್ಥಿಗಳೆಲ್ಲ ಪ್ರತಿಭಟನೆ ನಡೆಸಿದ್ದಾರೆ. ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡಲು ಸಾಧ್ಯವೇ ಇಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.

ವಿದ್ಯಾರ್ಥಿನಿಯರಿಗೆ ವಿಧಿಸಿರುವ ದಂಡದ ಮೊತ್ತವನ್ನು ವಾಪಸ್ ನೀಡಬೇಕು. ಇಲ್ಲವಾದಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ವ್ಯಾಪಕಗೊಳಿಸಲಾಗುವುದು ಎಂದು ಅಂತಿಮ ಎಚ್ಚರಿಕೆಯನ್ನು ವಿದ್ಯಾರ್ಥಿಗಳು ನೀಡಿದ್ದಾರೆ. ಹಾಗೆ ವಿಶ್ವವಿದ್ಯಾಲಯ ವಿಧಿಸಿರುವ ದಂಡವನ್ನು ರದ್ದುಗೊಳಿಸುವಂತೆ ಪಟ್ಟು ಹಿಡಿದಿದ್ದಾರೆ. ಇನ್ನು ಕೆಲವೇ ದಿನದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ಕೂಡ ನಡೆಯಲಿದ್ದು, ಪ್ರತಿಭಟನೆಯಿಂದ ಕಾಲೇಜು ವಾತವರಣವೇ ಬದಲಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಜೆಎನ್‌ಯು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯರ ಅಪಹರಣಕ್ಕೆ ಯತ್ನ: ದೂರು ದಾಖಲು

Last Updated : Aug 19, 2023, 12:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.