ಹೈದರಾಬಾದ್: ಗೌರವೆಲ್ಲಿ ಜಲಾಶಯದ ಯೋಜನೆಯ ಕುರಿತು ಭೂ ನಿರಾಶ್ರಿತರು ಭಾನುವಾರ ಪ್ರತಿಭಟನೆ ನಡೆಸಿದ್ದಾರೆ. ಮಂಗಳವಾರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಸಿದ್ದಿಪೇಟ್ನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಗುಡತಿಪಲ್ಲಿ ಗ್ರಾಮದ ನಿವಾಸಿಗಳು ಮೊದಲಿಗೆ ಸ್ಥಳೀಯ ಶಾಸಕರ ಕ್ಯಾಂಪ್ ಕಚೇರಿ ಎದುರು ಪ್ರತಿಭಟನೆ ಪ್ರಾರಂಭಿಸಿದ್ದರು.
ನಂತರ ಅಲ್ಲಿ ಬಂದಿದ್ದ ಟಿಆರ್‌ಎಸ್ ಕಾರ್ಯಕರ್ತರ ಮೇಲೆ ಪ್ರತಿಭಟನಾಕಾರರು ಹಲ್ಲೆ ಮಾಡಿದ್ದಾರೆ. ಅದನ್ನು ತಡೆಯಲು ಪೊಲೀಸರು ಮಧ್ಯಪ್ರವೇಶಿಸಿದಾಗ ಅವರ ಮೇಲೂ ಹಲ್ಲೆ ನಡೆಸಿದ್ದು, ಎಸಿಪಿ ಸೇರಿದಂತೆ ಕೆಲವು ಪೊಲೀಸ್ ಸಿಬ್ಬಂದಿಗಳು ಮತ್ತು ಗ್ರಾಮಸ್ಥರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ಪೈಪ್‌ನಿಂದ ಹೊಡೆದ ಪರಿಣಾಮ ಎಸಿಪಿ ತಲೆಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಲಾಠಿ ಚಾರ್ಜ್ ಮಾಡಿಲ್ಲ ಮತ್ತು ಯಾವುದೇ ರೀತಿಯ ಬಲಪ್ರಯೋಗವನ್ನೂ ಮಾಡಿಲ್ಲ, ಶಾಂತಿಯುತ ಪ್ರತಿಭಟನೆಗೆ ಅನುಕೂಲ ಮಾಡಿಕೊಟ್ಟಿದ್ದರೂ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಿದ್ದಿಪೇಟೆ ಪೊಲೀಸ್ ಆಯುಕ್ತ ಎನ್.ಶ್ವೇತಾ ತಿಳಿಸಿದ್ದಾರೆ.
ಪರಿಹಾರಕ್ಕಾಗಿ ಒತ್ತಾಯಿಸಿ ನಡೆದಿದ್ದ ಪ್ರತಿಭಟನೆ: ಗೌರವೆಳ್ಳಿ ಜಲಾಶಯ ಯೋಜನೆಯ ಸಂತ್ರಸ್ಥರಿಗೆ ಸರಕಾರದಿಂದ ಪರಿಹಾರ ನೀಡಬೇಕು ಹಾಗೆ ಪುನರ್ವಸತಿಗೆ ಸಂಬಂಧಿಸಿದ ತಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು. ಅಧಿಕಾರಿಗಳ ಪ್ರಕಾರ ಬಹುತೇಕ ಒತ್ತುವರಿದಾರರಿಗೆ ಪರಿಹಾರ ನೀಡಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಗೌರವೆಲ್ಲಿ ಯೋಜನೆಯ ಸರ್ವೆ ಕಾರ್ಯ ಮತ್ತು ಪ್ರಾಯೋಗಿಕ ಚಾಲನೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಗುಡತಿಪಲ್ಲಿ ಗ್ರಾಮದ ಕೆಲವು ನಿವಾಸಿಗಳನ್ನು ಪೊಲೀಸರು ಸೋಮವಾರ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇದಾದ ನಂತರ ಇತರ ಗ್ರಾಮಸ್ಥರು ಹುಸ್ನಾಬಾದ್‌ಗೆ ತೆರಳಿ ಧರಣಿ ನಡೆಸಿ, ಬಂಧನಕ್ಕೆ ಒಳಗಾದವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಪೊಲೀಸ್ ಆಯುಕ್ತೆ ಶ್ವೇತಾ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ:ನ್ಯಾಷನಲ್ ಹೆರಾಲ್ಡ್ ಕೇಸ್ : ಮೂರನೇ ದಿನ ಇಡಿ ಮುಂದೆ ಹಾಜರಾದ ರಾಹುಲ್ ಗಾಂಧಿ