ನವದೆಹೆಲಿ: ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸದ್ನ ಸಮಾರಂಭಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಎಡಪಂಥೀಯ ಪಕ್ಷಗಳು ದ್ವೇಷದ ವಿರುದ್ಧ ಒಗ್ಗಟ್ಟು( United Against Hate) ಎಂಬ ಘೋಷಣೆಯ ಅಡಿಯಲ್ಲಿ ನವದೆಹಲಿಯ ಉತ್ತರಾಖಂಡ್ ಹೌಸ್ ಬಳಿ ಪ್ರತಿಭಟನೆ ನಡೆಸಿವೆ.
ಧರ್ಮ ಸಂಸದ್ನ ಸಮಾರಂಭದಲ್ಲಿ ಮುಸ್ಲಿಮರ ಮಾರಣಹೋಮ, ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಹೇಳಿಕೆಗಳು ಬಂದಿದ್ದವು. ಈ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಎಡಪಂಥೀಯ ಪಕ್ಷಗಳು ಪ್ರತಿಭಟನೆ ನಡೆಸಿವೆ.
ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಇಕ್ಬಾಲ್ ತನ್ಹಾ ಈಟಿವಿ ಭಾರತದೊಂದಿಗೆ ಮಾತನಾಡಿ, ಮುಸ್ಲಿಮರ ವಿರುದ್ಧ ಧರ್ಮ ಸಂಸದ್ನಲ್ಲಿ ಇಷ್ಟೆಲ್ಲಾ ದ್ವೇಷಪೂರಿತ ಭಾಷಣ ಮತ್ತು ಬೆದರಿಕೆಗಳು ಹರಿದಾಡಿದ್ದರೂ, ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಷ್ಟೇ ಅಲ್ಲದೇ ಧರ್ಮ ಸಂಸದ್ನ ನಡೆ ಭಾರತೀಯ ಪ್ರಜಾಪ್ರಭುತ್ವಕ್ಕೆ ಮಾರಕ. ದ್ವೇಷ ಪೂರಿತ ಹೇಳಿಕೆ ಮತ್ತು ಬೆದರಿಕೆ ಒಡ್ಡಿದ ವ್ಯಕ್ತಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲೇಬೇಕೆಂದು ಇಕ್ಬಾಲ್ ತನ್ಹಾ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: 2022ರ ಹೊಸ್ತಿಲಲ್ಲಿ ನಾವು: 2021ರಲ್ಲಿ ನಡೆದ ಅಂತಾರಾಷ್ಟ್ರೀಯ ಘಟನೆಗಳ ಕ್ವಿಕ್ಲುಕ್ ಇಲ್ಲಿದೆ.