ETV Bharat / bharat

'ಅಗ್ನಿಪಥ್' ಯೋಜನೆಗೆ​​ ಖಂಡನೆ: ಹರಿಯಾಣದಲ್ಲಿ ಡಿಸಿ ಮನೆಗೆ ಕಲ್ಲು, ವಾಹನಗಳಿಗೆ ಬೆಂಕಿ - ಹರಿಯಾಣದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

ಹರಿಯಾಣದಲ್ಲಿ ಕೇಂದ್ರದ ಅಗ್ನಿಪಥ್​​ ಯೋಜನೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಜಿಲ್ಲಾಧಿಕಾರಿ ನಿವಾಸದತ್ತ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಮೂರ್ನಾಲ್ಕು ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ.

pelting-stones-at-dc-residence in haryana
ಹರಿಯಾಣದಲ್ಲಿ ಡಿಸಿ ಮನೆಗೆ ಕಲ್ಲುತೂರಾಟ, ಪೊಲೀಸರಿಂದ ಗಾಳಿಯಲ್ಲಿ ಗುಂಡು
author img

By

Published : Jun 16, 2022, 5:30 PM IST

ಪಲ್ವಾಲ್ (ಹರಿಯಾಣ): ಸೇನಾ ಭರ್ತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಘೋಷಿಸಿರುವ ಹೊಸ ಅಗ್ನಿಪಥ್​​ ಯೋಜನೆಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಹರಿಯಾಣದಲ್ಲಿ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪಲ್ವಾಲ್​ನಲ್ಲಿ ಜಿಲ್ಲಾಧಿಕಾರಿ ನಿವಾಸದ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು.

ಹರಿಯಾಣದಲ್ಲಿ ಡಿಸಿ ಮನೆಗೆ ಕಲ್ಲುತೂರಾಟ, ಪೊಲೀಸರಿಂದ ಗಾಳಿಯಲ್ಲಿ ಗುಂಡು

ಅಲ್ಲದೇ, ಕಿಡಿಗೇಡಿಗಳು ಮೂರ್ನಾಲ್ಕು ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಕೆಲ ಪೊಲೀಸ್​ ಸಿಬ್ಬಂದಿ ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಮತ್ತು ಎಚ್ಚರಿಕೆಯ ಕ್ರಮವಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಇದನ್ನೂ ಓದಿ: ಅಗ್ನಿಪಥ್​ ಯೋಜನೆಗೆ ಭಾರೀ ವಿರೋಧ.. ಕಲ್ಲು ತೂರಾಟ, ರೈಲಿಗೆ ಬೆಂಕಿ ಹಚ್ಚಿ ಆಕ್ರೋಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.