ಹೈದರಾಬಾದ್: ಕೇಂದ್ರ ತಂದಿರುವ ಹೊಸ ಅಗ್ನಿಪಥ್ ಯೋಜನೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಕಾವು ಹೆಚ್ಚಾಗುತ್ತಿದೆ. ಈ ಪ್ರತಿಭಟನೆಯ ಅಗ್ನಿ ಈಗ ಹೈದರಾಬಾದ್ಗೂ ತಟ್ಟಿದೆ. ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಯುವಕರು ರೈಲಿಗೆ ಬೆಂಕಿ ಹಚ್ಚಿ ಧರಣಿ ಮುನ್ನಡೆಸುತ್ತಿದ್ದ ಸಂದರ್ಭದಲ್ಲಿ ಯುವಕನೊಬ್ಬ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಇದೇ ವೇಳೆ, 8 ಮಂದಿಗೆ ಬುಲೆಟ್ ತಗುಲಿದೆ ಎಂದು ವರದಿಯಾಗಿದೆ.
ರೈಲ್ವೆ ಹಳಿಗಳ ಮೇಲೆ ಪಾರ್ಸೆಲ್ ಲಗೇಜ್ ಸುಟ್ಟು ಪ್ರತಿಭಟಿಸಿದರು. ಕೇಂದ್ರ ಸರ್ಕಾರ ತಕ್ಷಣವೇ ಈ ಹೊಸ ಸೇನಾ ಯೋಜನೆಯನ್ನು ಹಿಂತೆಗೆದುಕೊಂಡು ಮೊದಲಿನ ರೀತಿಯಲ್ಲೇ ಸೇನಾ ನೇಮಕಾತಿ ಮಾಡಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿ ಉಗ್ರರೂಪದ ಪ್ರತಿಭಟನೆ ಕೈಗೊಂಡರು.
ಈ ವೇಳೆ ಯುವಕರ ಒಂದು ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತು. ಹೀಗಾಗಿ ಪೊಲೀಸರು ಯುವಕರನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಇದರಿಂದ ಭಯಭೀತಗೊಂಡ ಯುವಕರು ಓಡಿಹೋಗಲು ಯತ್ನಿಸಿದ್ದಾರೆ. ನೂಕು ನುಗ್ಗಲು ಆದ ಸಂದರ್ಭದಲ್ಲಿ ಯುವಕನೊಬ್ಬ ತನ್ನ ಪ್ರಾಣವನ್ನು ಕಳೆದುಕೊಂಡಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಿದ್ದಾರೆ.
ಓದಿ: ಅಗ್ನಿಪಥ್ ಯೋಜನೆಗೆ ವಿರೋಧ: ಬಿಹಾರ, ಉತ್ತರಪ್ರದೇಶದಲ್ಲಿ ಟ್ರೈನ್ಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು!
ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಎಚ್ಚೆತ್ತ ರೈಲ್ವೆ ಪೊಲೀಸರು ಬೆಂಕಿ ನಂದಿಸಿದರು. ಬಳಿಕ ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡರು. ಐಟಿ ಸಚಿವ ಕೆಟಿಆರ್ ಅವರು ಟ್ವಿಟರ್ನಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ದೇಶದಲ್ಲಿ ನಿರುದ್ಯೋಗಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.
ಆರಂಭದಲ್ಲಿ ರೈತರಿಗೆ ಕಿರುಕುಳ ನೀಡಿದ ಮೋದಿ ಸರ್ಕಾರ ಈಗ ಯುವಕರಲ್ಲಿ ಗೊಂದಲ ಮೂಡಿಸಿದೆ ಎಂದು ಆರೋಪಿಸಿದರು. ‘ಒನ್ ರ್ಯಾಂಕ್ ಒನ್ ಪಿಂಚಣಿ’ಯಿಂದ ‘ನೋ ರ್ಯಾಂಕ್-ನೋ ಪಿಂಚಣಿ’ಗೆ ತರಲಾಗಿದೆ ಎಂದು ಕೆಟಿಆರ್ ಲೇವಡಿ ಮಾಡಿದರು.
-
The violent protests against #AgniveerScheme is an eye-opener & acute indicator of the magnitude of unemployment crisis in the country
— KTR (@KTRTRS) June 17, 2022 " class="align-text-top noRightClick twitterSection" data="
Pehle Desh ke Kisan Ke Saath खिलवाड़ Aur Ab Desh ke Jawan Ke Saath खिलवाड़
From One Rank - One Pension to proposed No Rank - No Pension!
">The violent protests against #AgniveerScheme is an eye-opener & acute indicator of the magnitude of unemployment crisis in the country
— KTR (@KTRTRS) June 17, 2022
Pehle Desh ke Kisan Ke Saath खिलवाड़ Aur Ab Desh ke Jawan Ke Saath खिलवाड़
From One Rank - One Pension to proposed No Rank - No Pension!The violent protests against #AgniveerScheme is an eye-opener & acute indicator of the magnitude of unemployment crisis in the country
— KTR (@KTRTRS) June 17, 2022
Pehle Desh ke Kisan Ke Saath खिलवाड़ Aur Ab Desh ke Jawan Ke Saath खिलवाड़
From One Rank - One Pension to proposed No Rank - No Pension!