ETV Bharat / bharat

ಹೀರಾಬೆನ್​ ಇನ್ನಿಲ್ಲ.. ಶತಾಯುಷಿ ತಾಯಿಯ ಜೀವನ ಹೀಗಿತ್ತು! - ಹೀರಾಬೆನ್​ ಕುಟುಂಬ

ಪ್ರಧಾನಿ ಮಾತೋಶ್ರೀ ಇನ್ನಿಲ್ಲ - ಶತಾಯುಷಿ ಹೀರಾಬೆನ್​ ನಿಧನ - ಅಹಮದಾಬಾದ್​ಗೆ ಪ್ರಧಾನಿ ಆಗಮನ - ಗಣ್ಯರ ಕಂಬನಿ - ಹೀಗಿತ್ತು ಹೀರಾಬೆನ್​​ 100 ವರ್ಷಗಳ ತುಂಬು ಜೀವನ

Profile Story Of PM Modi Mother Heeraba
ಹೀರಾಬೆನ್​ ಇನ್ನಿಲ್ಲ.. ಶತಾಯುಷಿ ತಾಯಿಯ ಜೀವನ ಹೀಗಿತ್ತು!
author img

By

Published : Dec 30, 2022, 8:20 AM IST

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್​ ಮೋದಿ ಅವರ ತಾಯಿ ಇಂದು ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಕಳೆದ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ. ಮೋದಿ ಪ್ರಧಾನಿ ಆಗಿದ್ದರೂ ತಾಯಿ ಹೀರಾಬೆನ್​ ಮೋದಿ ಅತ್ಯಂತ ಸರಳ ಜೀವನ ನಡೆಸುತ್ತಿದ್ದರು. ಹೀರಾಬೆನ್​ಗೆ ಇತ್ತೀಚೆಗಷ್ಟೇ 100 ವರ್ಷ ತುಂಬಿತ್ತು. ಶತಾಯುಷಿ ಆಗಿದ್ದ ಅವರು ಈಗ ಇಲ್ಲ. ಗಾಂಧಿನಗರದಲ್ಲಿರುವ ತಮ್ಮ ಕಿರಿಯ ಮಗ ಪಂಕಜ್ ಮೋದಿ ನಿವಾಸದಲ್ಲಿ ಹೀರಾಬೆನ್​ ವಾಸಿಸುತ್ತಿದ್ದರು.

ಹೀರಾಬೆನ್​​​​​​​​​​​​ ಮೋದಿ ಜೀವನ: ಮೋದಿ ತಾಯಿ ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡಿದ್ದರು. ಮೆಹ್ಸಾನಾ ಬಳಿಯ ವಡ್ನಗರದ ದಾಮೋದರದಾಸ್ ಮೂಲಚಂದ್ ಮೋದಿ ಅವರನ್ನು ವಿವಾಹವಾಗಿದ್ದರು. ದಾಮೋದರದಾಸ್ ವಡ್ನಗರ ರೈಲು ನಿಲ್ದಾಣದಲ್ಲಿ ಟೀ ಅಂಗಡಿ ನಡೆಸುತ್ತಿದ್ದರು. ಮನೆಯ ಆರ್ಥಿಕ ಸ್ಥಿತಿ ಅಷ್ಟೇನು ಚನ್ನಾಗಿರಲಿಲ್ಲ. ಹೀಗಾಗಿ ಮೋದಿ ತಾಯಿ ಮನೆಗೆಲಸ ಮಾಡುತ್ತಿದ್ದರು. ಈ ಮೂಲಕ ಸಂಸಾರದ ನೊಗ ಸಾಗಿಸಲು ಅವರು ಕೆಲಸ ಮಾಡಿ, ಪತಿಗೆ ಸಹಾಯ ಮಾಡುತ್ತಿದ್ದರು. ಹೀಗಿರುವಾಗಲೇ ಪತಿ ದಾಮೋದರ್​ ದಾಸ್​ ಚಿಕ್ಕ ವಯಸ್ಸಿನಲ್ಲಿಯೇ ಕಾನ್ಸರ್​​​ನಿಂದ ನಿಧನರಾಗಿದ್ದರು.

ಹೀರಾಬೆನ್​ ಕುಟುಂಬ: ದೇಶದ ಪ್ರಧಾನಿ ತಾಯಿ ಹೀರಾಬೆನ್​ಗೆ 5 ಗಂಡು ಮತ್ತು ಒಬ್ಬ ಮಗಳು ಇದ್ದಾರೆ. ಅಂದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ 4 ಸಹೋದರರಿದ್ದಾರೆ ಮತ್ತು ಒಬ್ಬ ಸಹೋದರಿ ಕೂಡಾ ಇದ್ದಾರೆ. ಹೀರಾಬೆನ್​ ಅವರ ಹಿರಿಯ ಮಗ ಸೋಭಾಯ್ ಮೋದಿ ಗುಜರಾತ್‌ನ ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ಆಗಿದ್ದಾರೆ. ಅವರಿಗಿಂತ ಕಿರಿಯ ಅಮೃತ್ ಮೋದಿ ಲೇಥ್ ಮಷಿನ್ ಆಪರೇಟರ್ ಆಗಿದ್ದರು. ಅವರೀಗ ನಿವೃತ್ತರಾಗಿದ್ದಾರೆ.

ಅವರಿಗಿಂತ ಕಿರಿಯ ಪ್ರಹ್ಲಾದ್ ಮೋದಿ ಅವರು ನ್ಯಾಯಬೆಲೆ ಅಂಗಡಿಯನ್ನು ಹೊಂದಿದ್ದಾರೆ. ನಾಲ್ಕನೆಯವರೇ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರಾಗಿದ್ದಾರೆ. ಇನ್ನು ಪಂಕಜ್ ಮೋದಿ, ಪ್ರಧಾನಿಗಿಂತ ಚಿಕ್ಕವರು. ಅವರು ಗುಜರಾತ್ ಸರ್ಕಾರದ ಮಾಹಿತಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀರಾಬೆನ್​ ಅವರಿಗೆ ವಸಂತಿಭಾನ್ ಎಂಬ ಮಗಳೂ ಕೂಡಾ ಇದ್ದಾರೆ.

ಮೋದಿ ಮದುವೆ: ಹೀರಾಬೆನ್​ ಏಕೆ ಹೆಮ್ಮೆಪಡುತ್ತಾರೆ ಎಂದರೆ ನರೇಂದ್ರ ಮೋದಿಯವರಿಗೆ ಆಗ 13 ವರ್ಷ. ಈ ವೇಳೆ ಜಶೋದಾಬೆನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ನರೇಂದ್ರ ಮೋದಿಯವರು 18ನೇ ವಯಸ್ಸಿನಲ್ಲೇ ವಿವಾಹವಾದರು. ಆದರೆ, ಆ ಬಳಿಕ ನರೇಂದ್ರ ಮೋದಿ ಹಿಮಾಲಯಕ್ಕೆ ಹೋದರು. ನರೇಂದ್ರ ಮೋದಿಯವರು ಬಾಲ್ಯದಿಂದಲೂ ಸಂಘದ ಕಾರ್ಯಕರ್ತರಾಗಿದ್ದು, ಅದರ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದರು. ಅಲ್ಲಿಯೇ ಸೇವೆ ಸಲ್ಲಿಸುತ್ತಿದ್ದ ಅವರು ಅಂತಿಮವಾಗಿ ರಾಜಕೀಯಕ್ಕೆ ಧುಮುಕಿದರು. ಆ ಬಳಿಕ ಸಿಎಂ ಆಗಿ ದೇಶದ ಗಮನ ಸೆಳೆದಿದ್ದು ಎಲ್ಲರಿಗೂ ಗೊತ್ತೇ ಇದೆ.

ಸತತವಾಗಿ ತಾಯಿ ಆಶೀರ್ವಾದ ಪಡೆಯುತ್ತಿದ್ದ ಮೋದಿ: 2001ರಲ್ಲಿ ಗುಜರಾತ್​ ಸಿಎಂ ಆಗಿದ್ದ ಮೋದಿ, 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ತಮ್ಮ ನೇತೃತ್ವದಲ್ಲೇ ಬಿಜೆಪಿ ಗೆಲ್ಲಿಸಿ ಪ್ರಧಾನಿ ಗಾದಿಗೆ ಏರಿದ್ದರು. 16 ಮೇ 2014 ರಂದು ಚುನಾವಣೆಯಲ್ಲಿ ಗೆದ್ದ ನಂತರ, ನರೇಂದ್ರ ಮೋದಿ ಅವರು ತಾಯಿ ಹೀರಾಬೆನ್​ ಆಶೀರ್ವಾದ ಪಡೆಯಲು ಅಹಮದಾಬಾದ್​ಗೆ ತೆರಳಿದ್ದರು. ಅವರ ಪಾದಗಳಿಗೆ ಬಿದ್ದು ಆಶೀರ್ವಾದ ಪಡೆದರು. ಅವರ ಈ ಚಿತ್ರ ಎಲ್ಲರ ಮನಸ್ಸಿನಲ್ಲಿದೆ. ದೇಶಕ್ಕೆ ಪ್ರಧಾನಿ ಆದರೂ, ತಾಯಿಗೆ ಮೋದಿ ಮಗನಾಗೇ ಇದ್ದರು. ಈ ಕ್ಷಣಗಳು ದೇಶಾದ್ಯಂತ ಸದ್ದು ಮಾಡಿದ್ದು, ಎಲ್ಲರ ಮನಸುಗಳಲ್ಲಿ ಅಚ್ಚಳಿಯೇ ಉಳಿದಿವೆ. ಇನ್ನು 26 ಮೇ 2014 ರಂದು ನರೇಂದ್ರ ಮೋದಿ ಅವರು ಭಾರತದ 14 ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ರೇಸ್​ಕೋರ್ಸ್​ನಲ್ಲಿ ಹೀರಾಬೆನ್​: ಮೇ 16, 2016 ರಂದು ಹೀರಾಬೆನ್​ ದೆಹಲಿ 7 ರೇಸ್ ಕೋರ್ಸ್ ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿದ್ದರು. ತಮ್ಮ ತಾಯಿ ಹೀರಾಬೆನ್​ಗೆ ಪ್ರಧಾನಿ 7 ರೇಸ್ ಕೋರ್ಸ್ ತೋರಿಸಿ ಧನ್ಯತೆ ಮೆರೆದಿದ್ದರು. ಪ್ರಧಾನಿ ಮೋದಿ ತಮ್ಮ ಟ್ವಿಟರ್‌ ಖಾತೆ ಮೂಲಕ ಹೀರಾಬೆನ್​ ಉದ್ಯಾನದ ಸುತ್ತಲೂ ನಡೆಯುವ ಚಿತ್ರಗಳನ್ನು ಹಂಚಿಕೊಂಡಿದ್ದರು.

ಮೋದಿಗೆ ಬೆಂಬಲವಾಗಿ ನಿಂತಿದ್ದ ಮಹಾತಾಯಿ: 2017 ರ ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿಯವರು ನೋಟು ಅಮಾನ್ಯೀಕರಣದ ನಿರ್ಧಾರ ಕೈಗೊಂಡಿದ್ದರು. ಹೀರಾಬೆನ್ ಮಗನ ನಿರ್ಧಾರ ಸಮರ್ಥಿಸುವಂತೆ​ ಅವರೇ ಬ್ಯಾಂಕ್‌ಗೆ ಹೋಗಿ ನೋಟು ಬದಲಾಯಿಸಿಕೊಂಡಿದ್ದರು.

ಇದನ್ನು ಓದಿ: ಪಿಎಂ ಮೋದಿ ತಾಯಿ ಹೀರಾಬೆನ್ ನಿಧನ.. ಗಣ್ಯರ ಕಂಬನಿ.. ಅಹಮದಾಬಾದ್​​ನತ್ತ ಪ್ರಧಾನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.