ETV Bharat / bharat

2024 ರೊಳಗೆ ಎಲ್ಲರಿಗೂ ಕೋವಿಡ್​ ಲಸಿಕೆ; ಡೋಸ್​ಗೆ 1000 ರೂ.

ಸಾಮಾನ್ಯ ಜನತೆಗೆ ನೀಡಲಾಗುವ ಕೋವಿಡ್​ ಲಸಿಕೆಯ ಪ್ರತಿ ಡೋಸ್​ಗೆ ಗರಿಷ್ಠ 1000 ರೂಪಾಯಿ ದರ ನಿಗದಿಯಾಗಬಹುದು. ಟ್ರಯಲ್ಸ್​ನ ಅಂತಿಮ ಪರಿಣಾಮಗಳು ಹಾಗೂ ವೈದ್ಯಕೀಯ ನಿಯಂತ್ರಣ ಪ್ರಾಧಿಕಾರದ ಸೂಚನೆಯ ಮೇರೆಗೆ ಲಸಿಕೆಯ ದರ ನಿಗದಿಯಾಗಲಿದೆ.

by 2024, every Indian will get vaccinated

author img

By

Published : Nov 20, 2020, 7:09 PM IST

ನವದೆಹಲಿ: 2024 ರೊಳಗೆ ಬಹುತೇಕ ಎಲ್ಲ ಭಾರತೀಯರೂ ಕೋವಿಡ್​ ಲಸಿಕೆ ಪಡೆಯಲಿದ್ದಾರೆ ಎಂದು ಸೇರಮ್ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾದ ಸಿಇಓ ಆದಾರ್ ಪೂನಾವಾಲಾ ಹೇಳಿದ್ದಾರೆ.

ಮಾಧ್ಯಮ ಕುರಿತಾದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಆಕ್ಸ್​ಫರ್ಡ್​ ಆಸ್ಟ್ರಾಝೆನೆಕಾ ಕೋವಿಡ್​-19 ಲಸಿಕೆಯು ಫೆಬ್ರವರಿ 2021 ರೊಳಗೆ ಆರೋಗ್ಯ ಕಾರ್ಯಕರ್ತರು ಹಾಗೂ ಹಿರಿಯ ನಾಗರಿಕರಿಗೆ ಲಭ್ಯವಾಗಲಿದೆ. ಹಾಗೆಯೇ 2021ರ ಏಪ್ರಿಲ್​ ಹೊತ್ತಿಗೆ ದೇಶದ ಇತರ ಎಲ್ಲರಿಗೂ ಈ ಲಸಿಕೆ ಲಭ್ಯವಾಗುವ ಸಾಧ್ಯತೆಯಿದೆ ಎಂದು ಪೂನಾವಾಲಾ ವಿಶ್ವಾಸ ವ್ಯಕ್ತಪಡಿಸಿದರು.

ಸಾಮಾನ್ಯ ಜನತೆಗೆ ನೀಡಲಾಗುವ ಕೋವಿಡ್​ ಲಸಿಕೆಯ ಪ್ರತಿ ಡೋಸ್​ಗೆ ಗರಿಷ್ಠ 1000 ರೂಪಾಯಿ ದರ ನಿಗದಿಯಾಗಬಹುದು. ಟ್ರಯಲ್ಸ್​ನ ಅಂತಿಮ ಪರಿಣಾಮಗಳು ಹಾಗೂ ವೈದ್ಯಕೀಯ ನಿಯಂತ್ರಣ ಪ್ರಾಧಿಕಾರದ ಸೂಚನೆಯ ಮೇರೆಗೆ ಲಸಿಕೆಯ ದರ ನಿಗದಿಯಾಗಲಿದೆ ಎಂದು ಅವರು ಹೇಳಿದರು.

ಪ್ರತಿಯೊಬ್ಬ ಭಾರತೀಯನಿಗೂ ಕೋವಿಡ್​ ಲಸಿಕೆ ನೀಡಲು ಬಹುಶಃ 2 ರಿಂದ 3 ವರ್ಷ ಬೇಕಾಗಬಹುದು. ಕೇವಲ ಸರಕು ಸಾಗಾಣಿಕೆಯ ಸಮಸ್ಯೆ ಮಾತ್ರವಲ್ಲದೆ ಬಜೆಟ್, ಮೂಲಭೂತ ಸೌಕರ್ಯ ಹಾಗೂ ಸ್ವ ಇಚ್ಛೆಯಿಂದ ಎಲ್ಲರೂ ಲಸಿಕೆ ಪಡೆಯುವ ಕಾರಣಗಳಿಂದ ಇಷ್ಟೊಂದು ಅವಧಿ ಬೇಕಾಗಬಹುದು ಎಂದು ಆದಾರ್ ಪೂನಾವಾಲಾ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.