ETV Bharat / bharat

ನಾಂದೇಡ್​ನಲ್ಲಿ ಖಲಿಸ್ತಾನ್​ನ ಉಗ್ರನ ಬಂಧನ - ಪಂಜಾಬ್‌ನ ಸಿಐಡಿ ತಂಡ ಹಾಗೂ ಮಹಾರಾಷ್ಟ್ರ ಪೊಲೀಸರ ಜಂಟಿ ಕಾರ್ಯಾಚರಣೆ

ಖಲಿಸ್ತಾನ್ ಪರ ಭಯೋತ್ಪಾದಕ ಸಂಘಟನೆಯೊಂದಿಗೆ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಖಲಿಸ್ತಾನ್ ಜಿಂದಾಬಾದ್​ನ ಸದಸ್ಯ ಸರಬ್ಜಿತ್ ಸಿಂಗ್ ಕಿರಾತ್ ಎಂಬಾತನನ್ನು ಸಿಐಡಿ ತಂಡ ಮಹಾರಾಷ್ಟ್ರದ ನಾಂದೇಡ್​ನಲ್ಲಿ ಬಂಧಿಸಿದೆ.

Pro-Khalistan terroris
ಖಲಿಸ್ತಾನ್
author img

By

Published : Feb 9, 2021, 11:33 AM IST

ನಾಂದೇಡ್(ಮಹಾರಾಷ್ಟ್ರ): ಜಿಲ್ಲೆಯಲ್ಲಿ ಖಲಿಸ್ತಾನ್ ಪರ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಖಲಿಸ್ತಾನ್ ಜಿಂದಾಬಾದ್​ನ ಸದಸ್ಯನೋರ್ವನನ್ನು ಸಿಐಡಿ ತಂಡ ಬಂಧಿಸಿದೆ.

ಪಂಜಾಬ್‌ನ ಲುಧಿಯಾನದ ಸರಬ್ಜಿತ್ ಸಿಂಗ್ ಕಿರಾತ್ ಬಂಧಿತ ಸದಸ್ಯ. ಪಂಜಾಬ್‌ನ ಸಿಐಡಿ ತಂಡ ಹಾಗೂ ಮಹಾರಾಷ್ಟ್ರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಈತನನ್ನು ಭಾನುವಾರ ಬಂಧಿಸಲಾಗಿದ್ದರೂ ಖಲಿಸ್ತಾನ್ ಪರ ಕಾರ್ಯಕರ್ತರ ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಸದ್ಯ ತನಿಖೆ ನಡೆಯುತ್ತಿರುವುದರಿಂದ ಆತನ ಬಂಧನದ ಸುದ್ದಿ ಬಹಿರಂಗಪಡಿಸಲಾಗಿಲ್ಲ.

ಸರಬ್ಜಿತ್ ಸಿಂಗ್ ಬೆಲ್ಜಿಯಂನೊಂದಿಗೆ ಸಂಯೋಜಿತವಾಗಿರುವ ಖಲಿಸ್ತಾನ್ ಪರ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದರು. ಅಲ್ಲಿಂದ ಅವರಿಗೆ ಭಯೋತ್ಪಾದಕ ಚಟುವಟಿಕೆಗಳಿಗೆ ಹಣದ ಹರಿವು ಬರುತ್ತಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.