ನವದೆಹಲಿ : ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಎರಡು ದಿನಗಳ ಕಾಲ ಅಸ್ಸೋಂಗೆ ಭೇಟಿ ನೀಡಲಿದ್ದಾರೆ. ಆರು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.
ನಿನ್ನೆಯಷ್ಟೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅಸ್ಸೋಂನಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಕಾಂಗ್ರೆಸ್ ನಾಯಕರ ಪ್ರಕಾರ, ಪ್ರಿಯಾಂಕಾ ಮಾರ್ಚ್ 21 ಹಾಗೂ 22ರಂದು ಅಸ್ಸೋಂಗೆ ಭೇಟಿ ನೀಡಲಿದ್ದಾರೆ.
ಅವರ ಭೇಟಿಯ ಸಮಯದಲ್ಲಿ ಅವರು ಆರು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಾರೆ ಮತ್ತು ಬೋರ್ಡೋವಾ ಸತ್ರದಲ್ಲಿರುವ ಶ್ರೀಮಂತ ಶಂಕರ್‌ದೇವ ಅವರ ಜನ್ಮಸ್ಥಳಕ್ಕೂ ಭೇಟಿ ನೀಡಲಿದ್ದಾರೆ.
ಮಾರ್ಚ್ 21ರಂದು ಪ್ರಿಯಾಂಕಾ ಗಾಂಧಿ ಜೋರ್ಹತ್, ನಜೀರಾ ಮತ್ತು ಖುಮ್ತೈನಲ್ಲಿ ಮೂರು ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸೋಮವಾರ ಅವರು ಶರೂಪಾಥರ್, ಕಲಿಯಾಬೋರ್ ಮತ್ತು ನಾಗಾನ್ನಲ್ಲಿ ಸಭೆಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಸೋಮವಾರ, ಅವರು ಬೋರ್ಡೋವಾ ಸತ್ರದಲ್ಲಿರುವ ಶಂಕರ್‌ದೇವ ಅವರ ಜನ್ಮಸ್ಥಳಕ್ಕೂ ಭೇಟಿ ನೀಡಲಿದ್ದಾರೆ. ಇದಕ್ಕೂ ಮೊದಲು ಪ್ರಿಯಾಂಕಾ ಗಾಂಧಿ ಮಾರ್ಚ್ 1 ಮತ್ತು 2ರಂದು ರಾಜ್ಯಕ್ಕೆ ಭೇಟಿ ನೀಡಿದ್ದರು.