ETV Bharat / bharat

ಮಿಷನ್ ಯುಪಿ.. ಉತ್ತರಪ್ರದೇಶದ ವಿಧಾನಸಭಾ ಚುನಾವಣೆ ಗೆಲ್ಲೋಕೆ ಪ್ರಿಯಾಂಕಾ ಗಾಂಧಿ ತಂತ್ರ!

ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಸುಮಾರು ಒಂದು ವರ್ಷ ಬಾಕಿ ಇರುವಾಗ, ರಾಜ್ಯದ ಎಲ್ಲಾ ಹಂತಗಳಲ್ಲಿಯೂ ಕಾಂಗ್ರೆಸ್​ ಪಕ್ಷದ ಚಟುವಟಿಕೆಗಳನ್ನು ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ..

Priyanka Gandhi Vadra ready with Mission UP
ಪ್ರಿಯಾಂಕಾ ಗಾಂಧಿ ವಾದ್ರಾ ಸಿದ್ಧತೆ
author img

By

Published : Jan 4, 2021, 5:49 PM IST

ನವದೆಹಲಿ : ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಉತ್ತರಪ್ರದೇಶ ಘಟಕದ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 2022ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಿದ್ದು, 'ಮಿಷನ್ ಯುಪಿ'ಯನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ.

ಫೆಬ್ರವರಿಯಿಂದ ನಿಯಮಿತವಾಗಿ ಲಖನೌದಲ್ಲಿ ಶಿಬಿರ ನಡೆಸಲು ಪ್ರಿಯಾಂಕಾ ಗಾಂಧಿ ನಿರ್ಧರಿಸಿದ್ದಾರೆ. ಪ್ರಿಯಾಂಕಾ ಗಾಂಧಿಯವರ ಆಪ್ತ ಮೂಲಗಳ ಪ್ರಕಾರ, ಅವರು ಪಕ್ಷದ ಕಾರ್ಯಕರ್ತರನ್ನು ನ್ಯಾಯ ಪಂಚಾಯತ್‌ ಮಟ್ಟದಲ್ಲಿ ಬಲಪಡಿಸಲು, ಅದಕ್ಕಾಗಿ ಸಮಿತಿಗಳನ್ನು ರಚಿಸಿ ಸಭೆಗಳನ್ನು ನಡೆಸುವಂತೆ ಕೇಳಿಕೊಂಡಿದ್ದಾರೆ. ಇದರೊಂದಿಗೆ ರಾಜ್ಯ ಪದಾಧಿಕಾರಿಗಳನ್ನು ವೀಕ್ಷಕರಾಗಿ ನೇಮಿಸಲಾಗಿದೆ.

Priyanka Gandhi Vadra ready with Mission UP
ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ವಾದ್ರಾ ಸಿದ್ಧತೆ

ಇದನ್ನೂ ಓದಿ: ಜ. 23ರಂದು 'ರಾಷ್ಟ್ರೀಯ ರಜೆ' ಘೋಷಣೆ ಮಾಡಿ: ಕೇಂದ್ರಕ್ಕೆ ಪತ್ರ ಬರೆದ ಮಮತಾ ಬ್ಯಾನರ್ಜಿ!

ವಿಧಾನಸಭಾ ಚುನಾವಣೆಗೆ ಸುಮಾರು ಒಂದು ವರ್ಷ ಬಾಕಿ ಇರುವಾಗ, ರಾಜ್ಯದ ಎಲ್ಲಾ ಹಂತಗಳಲ್ಲಿಯೂ ಕಾಂಗ್ರೆಸ್​ ಪಕ್ಷದ ಚಟುವಟಿಕೆಗಳನ್ನು ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಮುಖಂಡ ಪ್ರಮೋದ್ ತಿವಾರಿ ಸಮಿತಿಯ ನೇತೃತ್ವ ವಹಿಸುತ್ತಿದ್ದಾರೆ.

ಇತರ ಸಮಿತಿ ಸದಸ್ಯರಲ್ಲಿ ರಾಜ್ಯದ ಹಿರಿಯ ನಾಯಕರು ಸೇರಿದ್ದಾರೆ. ಎಲ್ಲಾ ಸದಸ್ಯರು ಆಯಾ ಸಮುದಾಯಗಳು ಮತ್ತು ಜಾತಿಗಳ ಸದಸ್ಯರು ಮತ್ತು ಮುಖಂಡರನ್ನು ತಲುಪಲು ತಿಳಿಸಲಾಗಿದೆ. ಪಕ್ಷವು ಜಿಲ್ಲಾ ಮಟ್ಟದಲ್ಲಿ ಹಸು ಸಂರಕ್ಷಣಾ ಯಾತ್ರೆಯನ್ನು ಪ್ರಾರಂಭಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.