ಪಣಜಿ(ಗೋವಾ): ಮುಂದಿನ ವರ್ಷದ ಆರಂಭದಲ್ಲೇ ಪಂಜಾಬ್,ಉತ್ತರ ಪ್ರದೇಶ ಜೊತೆ ಗೋವಾದಲ್ಲೂ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಪಕ್ಷವನ್ನ ಅಧಿಕಾರಕ್ಕೆ ತರಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದಿನಿಂದ ಗೋವಾ ಪ್ರಚಾರದಲ್ಲಿ ನಿರತರಾಗಿದ್ದಾರೆ.
-
Smt. @priyankagandhi joins the tribal women of Morpirla village during a phenomenal performance of their folk dance.#PriyankaGandhiWithGoa pic.twitter.com/p0ae6mKM9x
— Congress (@INCIndia) December 10, 2021 " class="align-text-top noRightClick twitterSection" data="
">Smt. @priyankagandhi joins the tribal women of Morpirla village during a phenomenal performance of their folk dance.#PriyankaGandhiWithGoa pic.twitter.com/p0ae6mKM9x
— Congress (@INCIndia) December 10, 2021Smt. @priyankagandhi joins the tribal women of Morpirla village during a phenomenal performance of their folk dance.#PriyankaGandhiWithGoa pic.twitter.com/p0ae6mKM9x
— Congress (@INCIndia) December 10, 2021
ಗೋವಾದ ಮೋರ್ಪಿರ್ಲಾ ಗ್ರಾಮಕ್ಕೆ ತೆರಳಿ ಅಲ್ಲಿನ ಬುಡಕಟ್ಟು ಸಮುದಾಯದವರೊಂದಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ಕೆಲಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಅಲ್ಲಿನ ಮಹಿಳೆಯರ ಜೊತೆ ವಿಶಿಷ್ಟ ಡ್ಯಾನ್ಸ್ನಲ್ಲಿ ಹೆಜ್ಜೆ ಹಾಕಿದರು.
ಗೋವಾ ಚುನಾವಣೆಗೋಸ್ಕರ ಮೋರ್ಪಿರ್ಲಾದಿಂದಲೇ ಕಾಂಗ್ರೆಸ್ ಪ್ರಚಾರ ಆರಂಭ ಮಾಡಿದ್ದು, ಬುಡಕಟ್ಟು ಜನಾಂಗದ ಮಹಿಳೆಯರೊಂದಿಗೆ ಪ್ರಿಯಾಂಕಾ ಡ್ಯಾನ್ಸ್ ಮಾಡಿದ್ದು, ಇದರ ವಿಡಿಯೋ ತುಣುಕವೊಂದನ್ನ ಕಾಂಗ್ರೆಸ್ ಹಂಚಿಕೊಂಡಿದೆ. ಇನ್ನು ಪ್ರಿಯಾಂಕಾ ಗಾಂಧಿ ಗೋವಾಗೆ ಭೇಟಿ ನೀಡಿರುವ ಬೆನ್ನಲ್ಲೇ ಕೆಲ ಕಾಂಗ್ರೆಸ್ ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿರಿ: ರಸ್ತೆ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ದುರ್ಮರಣ.. CCTVಯಲ್ಲಿ ದೃಶ್ಯ ಸೆರೆ
ಈ ಹಿಂದೆ ಅಸ್ಸೋಂ ವಿಧಾನಸಭೆ ಚುನಾವಣೆ ವೇಳೆ ಲಿಖಿಂಪುರಕ್ಕೆ ಭೇಟಿ ನೀಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಬುಡಕಟ್ಟು ಸಮುದಾಯದವರೊಂದಿಗೆ ಹೆಜ್ಜೆ ಹಾಕಿದ್ದರು.