ETV Bharat / bharat

ಯುಪಿಯಲ್ಲಿ 500ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದ ಪ್ರಿಯಾಂಕಾ ಗಾಂಧಿ.. ವರ್ಕೌಟ್​ ಆಗುತ್ತಾ ಕಾಂಗ್ರೆಸ್ ತಂತ್ರ? ​

author img

By

Published : Mar 9, 2022, 12:01 PM IST

UP assembly election-2022..ಕಾಂಗ್ರೆಸ್​ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಈವರೆಗೆ ಉತ್ತರ ಪ್ರದೇಶದಲ್ಲಿ ರ್ಯಾಲಿ, ರೋಡ್​ ಶೋ ಸೇರಿದಂತೆ ಸುಮಾರು 500 ಸಭೆಗಳನ್ನು ನಡೆಸಿ ಪಕ್ಷದ ಯಶಸ್ಸಿಗಾಗಿ ಶ್ರಮಿಸಿದ್ದಾರೆ.

Priyanka Gandhi Vadra
ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ

ಲಖನೌ(ಉತ್ತರಪ್ರದೇಶ): ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್‌ ಇನ್ನಿಲ್ಲದ ಕಸರತ್ತು ನಡೆಸಿದೆ. ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಈವರೆಗೆ ಉತ್ತರ ಪ್ರದೇಶದಲ್ಲಿ ಸುಮಾರು 500 ರ್ಯಾಲಿ, ರೋಡ್​ ಶೋ, ಸಭೆಗಳನ್ನು ನಡೆಸಿ ಪಕ್ಷದ ಯಶಸ್ಸಿಗಾಗಿ ಶ್ರಮಿಸಿದ್ದಾರೆ. ಆದ್ರೆ ನಾಳೆ ಚುನಾವಣಾ ಫಲಿತಾಂಶ ಹೊರ ಬೀಳಲಿದ್ದು, ಮತದಾರರ ಯಾರಿಗೆ ಮಣೆ ಹಾಕಿದ್ದಾರೆ ಎಂಬುದು ತಿಳಿಯಲಿದೆ.

ಪ್ರಿಯಾಂಕಾ ಗಾಂಧಿ ಅವರ ರ್ಯಾಲಿಗಳು, ರೋಡ್ ಶೋಗಳು ಮತ್ತು ಸಾರ್ವಜನಿಕ ಸಭೆಗಳನ್ನು ಲೆಕ್ಕ ಹಾಕುತ್ತಾ ಹೋದರೆ ಈ ಸಂಖ್ಯೆಯು ನೂರರ ಗಡಿ ದಾಟಿದೆ. ಕಳೆದ ಚುನಾವಣೆಗಿಂತ ಈ ಬಾರಿ ಪ್ರಚಾರದ ದೃಷ್ಟಿಯಿಂದ ಕಾಂಗ್ರೆಸ್ ಉತ್ತಮ ಸ್ಥಿತಿಯಲ್ಲಿದೆ. ಪ್ರಿಯಾಂಕಾ ಅವರ ಪ್ರಚಾರದ ಶ್ರಮ ಎಷ್ಟರ ಮಟ್ಟಿಗೆ ಸಫಲವಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಉತ್ತರ ಪ್ರದೇಶ ರಾಜ್ಯದ ಉಸ್ತುವಾರಿಯಾಗಿ ಪ್ರಿಯಾಂಕಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ಉತ್ತಮ ಫಲಿತಾಂಶ ತರಲು ಶ್ರಮಿಸಿದ್ದಾರೆ. ಇದೇ ವೇಳೆ ರಾಜ್ಯದ ಬಹುತೇಕ ವಿಧಾನಸಭಾ ಕ್ಷೇತ್ರಗಳಿಗೆ ತಲುಪುವ ಮೂಲಕ ಪಕ್ಷದ ಅಭ್ಯರ್ಥಿಗಳಿಗೆ ಗೆಲುವಿನ ಭರವಸೆ ಮೂಡಿಸಿದ್ದಲ್ಲದೇ, ಪಕ್ಷವನ್ನು ಅಧಿಕಾರದ ಗದ್ದುಗೆಗೆ ಕೊಂಡೊಯ್ಯಲು ಸರ್ವ ಪ್ರಯತ್ನ ಮಾಡಿದ್ದಾರೆ.

ಯುಪಿ ಜೊತೆಗೆ ಇತರೆ ರಾಜ್ಯಗಳ ಚುನಾವಣೆಗಳಲ್ಲಿ ಸಕ್ರಿಯರಾಗಿದ್ದರು. ಮತ್ತು ಅಲ್ಲಿಯೂ ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸಿದರು. ಆದರೆ ಅವರ ಪ್ರಮುಖ ಗಮನವು ಸಂಪೂರ್ಣವಾಗಿ ಉತ್ತರ ಪ್ರದೇಶದ ಮೇಲೆ ಇತ್ತು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಿಯಾಂಕಾ ಗಾಂಧಿ ಅವರು ಮನೆ ಮನೆ ಪ್ರಚಾರದ ಜೊತೆಗೆ ಭೌತಿಕ ಸಭೆಗಳು, ಸಾರ್ವಜನಿಕ ಸಭೆಗಳು, ಬೀದಿ ಸಭೆಗಳು ಮತ್ತು ವರ್ಚುವಲ್ ರ್ಯಾಲಿಗಳನ್ನು ನಡೆಸಿದ್ದರು. ಇವೆಲ್ಲವನ್ನೂ ಒಟ್ಟುಗೂಡಿಸಿದರೆ, ಈ ಸಂಖ್ಯೆ 500ರ ಆಸುಪಾಸಿಗೆ ತಲುಪಿದೆ. ಇಲ್ಲಿ ಪ್ರಚಾರದ ಸಮಯದಲ್ಲಿ ಪ್ರಿಯಾಂಕಾ ಗಾಂಧಿ ಒಟ್ಟು 42 ರೋಡ್ ಶೋಗಳನ್ನು ಮಾಡಿದ್ದಾರೆ. 167 ರ್ಯಾಲಿಗಳು ಮತ್ತು 291ಕ್ಕೂ ಹೆಚ್ಚು ವರ್ಚುವಲ್ ರ್ಯಾಲಿಗಳ ಮೂಲಕ ಸುಮಾರು 340 ಕ್ಷೇತ್ರಗಳನ್ನು ತಲುಪಿದ್ದಾರೆ. ಈ ಅವಧಿಯಲ್ಲಿ ಅವರು ಪಂಜಾಬ್​ಗೆ ಎರಡು ಬಾರಿ, ಉತ್ತರಾಖಂಡಕ್ಕೆ ಎರಡು ಮತ್ತು ಗೋವಾಕ್ಕೆ ಎರಡು ಬಾರಿ ಹೋಗಿದ್ದಾರೆ.

ಇದನ್ನೂ ಓದಿ: Election Result 2022: ಇವಿಎಂ ಮೂಲಕ ಮತ ಎಣಿಕೆ ಹೇಗೆ, ಸಂಪೂರ್ಣ ಪ್ರಕ್ರಿಯೆ ಹೇಗಿರುತ್ತೆ?

2017ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 403 ಕ್ಷೇತ್ರಗಳ ಪೈಕಿ 312ರಲ್ಲಿ ಗೆಲುವು ದಾಖಲಿಸಿ ಅಧಿಕಾರಕ್ಕೆ ಬಂದಿತ್ತು. ಉಳಿದಂತೆ ಎಸ್​ಪಿ 47, ಬಿಎಸ್​ಪಿ 19 ಹಾಗೂ ಕಾಂಗ್ರೆಸ್ ಕೇವಲ 7ಕಡೆ ಗೆಲುವು ಸಾಧಿಸಿತ್ತು. ಇದೀಗ ಕಾಂಗ್ರೆಸ್​ ನಾಯಕಿಯ ಪ್ರಚಾರದ ನಂತರ ಪಕ್ಷದಲ್ಲಿ ಹೊಸ ಭರವಸೆ ಮೂಡಿದೆ.

ಫಲಿತಾಂಶ: ಉತ್ತರ ಪ್ರದೇಶ ಜೊತೆಗೆ ಗೋವಾ, ಉತ್ತರಾಖಂಡ, ಪಂಜಾಬ್, ಮಣಿಪುರದಲ್ಲೂ ಮತದಾನ ನಡೆದಿದ್ದು, ಎಲ್ಲ ರಾಜ್ಯದ ಫಲಿತಾಂಶ ನಾಳೆ ಬಹಿರಂಗಗೊಳ್ಳಲಿದೆ. ಹೀಗಾಗಿ ಎಲ್ಲರ ಚಿತ್ತ ಇದೀಗ ಫಲಿತಾಂಶದತ್ತ ನೆಟ್ಟಿದೆ. ಕಾಂಗ್ರೆಸ್​ ಪ್ರಚಾರ ಫಲಪ್ರದವಾಗಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.