ಲಕ್ನೋ (ಉತ್ತರಪ್ರದೇಶ): ನಾಲ್ಕನೇ ಹಂತದ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಲಕ್ನೋದ ಮಾರಿ ಮಾತಾ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಇದಕ್ಕೂ ಮುನ್ನ ಲಕ್ನೋದಲ್ಲಿ ನಡೆದಿದ್ದ ಱಲಿಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಅವರು, "ಸರ್ಕಾರದ ಪಡಿತರಕ್ಕಾಗಿ ನಮ್ಮ ಮಕ್ಕಳು ಅವರ ಜೀವನವಿಡಿ ಕಾಯಲು ಬಿಡುವುದಿಲ್ಲ. ಸ್ವಲ್ಪ ಹಣ ಮತ್ತು ಉಚಿತ ಪಡಿತರ ಜನರನ್ನು ಆತ್ಮನಿರ್ಭರ ಮಾಡುವುದಿಲ್ಲ ಎಂದಿದ್ದರು.
ಇದನ್ನೂ ಓದಿ: UP Polls: ನಾಲ್ಕನೇ ಹಂತದ ಚುನಾವಣೆಯಲ್ಲಿ ಹೀಗಿದೆ ರಾಜಕೀಯ ಲೆಕ್ಕಾಚಾರ
ಈ ನಡುವೆ ಉತ್ತರ ಪ್ರದೇಶ ತನ್ನ ಮೂರು ಹಂತದ ಚುನಾವಣೆಗಳನ್ನು ಪೂರ್ಣಗೊಳಿಸಿದೆ. ಇಂದು ರಾಜ್ಯದಲ್ಲಿ ನಾಲ್ಕನೇ ಹಂತದ ಮತದಾನ ನಡೆಯುತ್ತಿದ್ದು, ಇಂದು ಲಕ್ನೋ, ಉನ್ನಾವ್, ರಾಯ್ ಬರೇಲಿ, ಫತೇಪುರ್, ಬಂದಾ, ಪಿಲಿಭಿತ್, ಲಖಿಂಪುರ ಖೇರಿ, ಸೀತಾಪುರ್ ಮತ್ತು ಹರ್ದೋಯ್ ಜಿಲ್ಲೆಗಳನ್ನು ಒಳಗೊಂಡಿದೆ. ಆದಾಗ್ಯೂ, ಉಳಿದ ಹಂತಗಳಿಗೆ ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ.