ETV Bharat / bharat

50ನೇ ವಸಂತಕ್ಕೆ ಕಾಲಿಟ್ಟ ಪ್ರಿಯಾಂಕಾ ಗಾಂಧಿ: ರಣಥಂಬೋರ್‌ನಲ್ಲಿ ಹುಟ್ಟುಹಬ್ಬ ಆಚರಣೆ - 50ನೇ ವಸಂತಕ್ಕೆ ಕಾಲಿಟ್ಟ ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇಂದು 50 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಣಥಂಬೋರ್‌ನಲ್ಲಿ ಕುಟುಂಬದೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.

Priyanka Gandhi Birthday Celebration
ರಣತಂಬೋರ್‌ನಲ್ಲಿ ಪ್ರಿಯಾಂಕಾ ಗಾಂಧಿ ಹುಟ್ಟುಹಬ್ಬ ಆಚರಣೆ
author img

By

Published : Jan 12, 2022, 12:32 PM IST

Updated : Jan 12, 2022, 12:42 PM IST

ರಣಥಂಬೋರ್‌(ರಾಜಸ್ಥಾನದ): ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಯುಪಿ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಂದು ರಣಥಂಬೋರ್‌ನಲ್ಲಿ ತಮ್ಮ ಜನ್ಮದಿನವನ್ನು ಆಚರಿಸಲಿದ್ದಾರೆ. ಇದಕ್ಕಾಗಿ ಅವರು ಕುಟುಂಬ ಸಮೇತ ರಣಥಂಬೋರ್​​ನಲ್ಲಿ ಬೀಡು ಬಿಟ್ಟಿದ್ದಾರೆ.

  • Happy Birthday P…😍
    Your contagious laughter,enthusiasm, kindness & strength gives me, kids & others around you a reason to live each day in a better way.
    Wishing u good health,happiness and more strength in the years to come.Keep smiling and shining as you always do 😊🤗 pic.twitter.com/5JjG2OgoKj

    — Robert Vadra (@irobertvadra) January 12, 2022 " class="align-text-top noRightClick twitterSection" data=" ">

ಪ್ರಿಯಾಂಕಾ ಗಾಂಧಿ ರಣಥಂಬೋರ್‌ ರಾಷ್ಟ್ರೀಯ ಉದ್ಯಾನವನ ವೀಕ್ಷಿಸಲು ಆಗಾಗ ಭೇಟಿ ನೀಡುತ್ತಿರುತ್ತಾರೆ. ಕುಟುಂಬದೊಂದಿಗೆ ಇಲ್ಲಿ ಹೆಚ್ಚಿನ ಸಮಯವನ್ನು ಅವರು ಕಳೆಯುತ್ತಾರೆ. ಅವರ ಪತಿ ರಾಬರ್ಟ್ ವಾದ್ರಾ ಕೂಡ ಅವರೊಂದಿಗೆ ಹಾಜರಿದ್ದರು.

ರಣಥಂಬೋರ್‌ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ:

ಪ್ರಿಯಾಂಕಾ ಅವರು ಕುಟುಂಬ ಸಮೇತ ರಣಥಂಬೋರ್‌ ಹುಲಿ ಸಂರಕ್ಷಿತ ಪ್ರದೇಶ ವಲಯ 4ರ ಅರಣ್ಯಕ್ಕೆ ಭೇಟಿ ನೀಡಿ ಹುಲಿ ವೀಕ್ಷಿಸಿದರು.

ವಿಶೇಷ ಅತಿಥಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಣೆ:

ವಿಶ್ವಾಸಾರ್ಹ ಮೂಲಗಳ ಪ್ರಕಾರ, ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ತಮ್ಮ ಹುಟ್ಟುಹಬ್ಬವನ್ನು ಶೇರ್ ಬಾಗ್‌ ಹೋಟೆಲ್​​​ನಲ್ಲಿ ಆಚರಿಕೊಂಡರು. ಈ ವೇಳೆ, ಹೋಟೆಲ್ ನಿರ್ವಾಹಕ ಜೈಸಲ್ ಸಿಂಗ್ ಅವರ ಕುಟುಂಬದವರೂ ಇದ್ದರು ಎನ್ನಲಾಗಿದೆ. ಉಭಯ ಕುಟುಂಬಗಳು ಮತ್ತು ವಿಶೇಷ ಅತಿಥಿಗಳ ಸಮ್ಮುಖದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಹುಟ್ಟುಹಬ್ಬವನ್ನು ಆಚರಿಸಿಕೊಂಡರು ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ರಾಜಕೀಯ ಜಂಜಡ ಬಿಟ್ಟು ಕುಟುಂಬದೊಂದಿಗೆ ರಣಥಂಬೋರ್​ಗೆ ತೆರಳಿದ ಪ್ರಿಯಾಂಕಾ ವಾದ್ರಾ

Last Updated : Jan 12, 2022, 12:42 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.