ನವದೆಹಲಿ: ದೇಶದಾದ್ಯಂತ ಎಲ್‌ಪಿಜಿ ಹಾಗೂ ಇಂಧನ ಬೆಲೆ ಏರಿಕೆಯಾಗುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಳೆದ ಮೂರು ತಿಂಗಳುಗಳಿಂದ ದೇಶೀಯ ಎಲ್ಪಿಜಿಯ ಬೆಲೆ 200 ರೂ.ಗಳಷ್ಟು ಹೆಚ್ಚಾಗಿದ್ದು, ಪೆಟ್ರೋಲ್, ಡೀಸೆಲ್ ದರ 100ಕ್ಕೆ ತಲುಪುತ್ತಿದೆ. ಮೋದಿ ಸರ್ಕಾರವು ತಮ್ಮ ಬಿಲಿಯನೇರ್ ಸ್ನೇಹಿತರ ಹಿತಕ್ಕಾಗಿ ಮಾಡುತ್ತಿರುವ ಕಾರ್ಯದಿಂದಾಗಿ ಸಾಮಾನ್ಯ ಜನರು ಬಳಲುವಂತಾಗಿದೆ ಎಂದು ಹಿಂದಿಯಲ್ಲಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
पिछले तीन महीने में घरेलू गैस सिलेंडर पर 200 रुपए बढ़े।
— Priyanka Gandhi Vadra (@priyankagandhi) February 25, 2021 " class="align-text-top noRightClick twitterSection" data="
पेट्रोल डीजल शतक मारने की तरफ बढ़ ही चुके हैं।
अर्थव्यवस्था के दोनों छोरों पर खरबपति मित्रों के लिए बैटिंग करने वाली मोदी सरकार की पिच आमजनों के लिए कमरतोड़ महंगाई से भरी हुई है। pic.twitter.com/SsLb3C7Nnl
">पिछले तीन महीने में घरेलू गैस सिलेंडर पर 200 रुपए बढ़े।
— Priyanka Gandhi Vadra (@priyankagandhi) February 25, 2021
पेट्रोल डीजल शतक मारने की तरफ बढ़ ही चुके हैं।
अर्थव्यवस्था के दोनों छोरों पर खरबपति मित्रों के लिए बैटिंग करने वाली मोदी सरकार की पिच आमजनों के लिए कमरतोड़ महंगाई से भरी हुई है। pic.twitter.com/SsLb3C7Nnlपिछले तीन महीने में घरेलू गैस सिलेंडर पर 200 रुपए बढ़े।
— Priyanka Gandhi Vadra (@priyankagandhi) February 25, 2021
पेट्रोल डीजल शतक मारने की तरफ बढ़ ही चुके हैं।
अर्थव्यवस्था के दोनों छोरों पर खरबपति मित्रों के लिए बैटिंग करने वाली मोदी सरकार की पिच आमजनों के लिए कमरतोड़ महंगाई से भरी हुई है। pic.twitter.com/SsLb3C7Nnl
ಡಿಸೆಂಬರ್‌ನಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ತಲಾ 100 ರೂರಂತೆ ಏರಿಕೆಯಾಗಿದೆ. ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ 50 ರೂ.ಗಳಷ್ಟು ಬೆಲೆಯನ್ನು ಹೆಚ್ಚಿಸಿವೆ ಎಂದು ಕಿಡಿಕಾರಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 90.93 ರೂ ಮತ್ತು ಡೀಸೆಲ್ ಲೀಟರ್ಗೆ 81.32 ರೂ ಆಗಿದೆ. ಹೀಗಾದರೆ ಸಾಮಾನ್ಯ ಜನರ ಪರಿಸ್ಥಿತಿ ಏನು ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.