ನವದೆಹಲಿ: ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಟ್ವಿಟರ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಕಳೆದ ಕೆಲ ದಿನಗಳಿಂದ ನಿರಂತರವಾಗಿ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗುತ್ತಿದ್ದು, ಕಳೆದ ಕೆಲ ತಿಂಗಳಿಂದ ವ್ಯಾಪಾರವಿಲ್ಲದೇ ಜನರ ಬಳಿ ಗ್ಯಾಸ್ ತುಂಬಿಸಿಕೊಳ್ಳಲು ಹಣವಿಲ್ಲ. ಮಹಿಳೆಯರು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ. ಅವರ ನೋವಿನ ಬಗ್ಗೆ ಯಾವಾಗ ಮಾತನಾಡುವುದು? ಎಂದು ಪ್ರಶ್ನೆ ಮಾಡಿದ್ದಾರೆ. ತಮ್ಮ ಟ್ವಿಟರ್ನಲ್ಲಿ ಜನಸಾಮಾನ್ಯರು ಹೇಳಿಕೊಂಡಿರುವ ಕಷ್ಟದ ಮಾತುಗಳ ವಿಡಿಯೋ ಹಂಚಿಕೊಳ್ಳುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
-
महंगाई बढ़ती जा रही है।
— Priyanka Gandhi Vadra (@priyankagandhi) August 23, 2021 " class="align-text-top noRightClick twitterSection" data="
सिलेंडर भराने के पैसे नहीं हैं।
काम-धंधे बंद हैं।
ये आम महिलाओं की पीड़ा है। इनकी पीड़ा पर कब बात होगी?
महंगाई कम करो। pic.twitter.com/uWTjuOxAgI
">महंगाई बढ़ती जा रही है।
— Priyanka Gandhi Vadra (@priyankagandhi) August 23, 2021
सिलेंडर भराने के पैसे नहीं हैं।
काम-धंधे बंद हैं।
ये आम महिलाओं की पीड़ा है। इनकी पीड़ा पर कब बात होगी?
महंगाई कम करो। pic.twitter.com/uWTjuOxAgIमहंगाई बढ़ती जा रही है।
— Priyanka Gandhi Vadra (@priyankagandhi) August 23, 2021
सिलेंडर भराने के पैसे नहीं हैं।
काम-धंधे बंद हैं।
ये आम महिलाओं की पीड़ा है। इनकी पीड़ा पर कब बात होगी?
महंगाई कम करो। pic.twitter.com/uWTjuOxAgI
ಈಗಾಗಲೇ ಮೋದಿ ಸರ್ಕಾರ ಆಗಸ್ಟ್ 10ರಂದು ಬಡವರಿಗೋಸ್ಕರ ಪಿಎಂ ಉಜ್ವಲ ಯೋಜನೆ 2.0 ಜಾರಿಗೊಳಿಸಿದ್ದು, ಇದರ ಮೂಲಕ ದೇಶದ ಬಡವರಿಗೆ ಉಚಿತ ಗ್ಯಾಸ್ ವಿತರಣೆ ಮಾಡಲಾಗುತ್ತಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಆಗಸ್ಟ್ 11ರಂದು ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದ ಪ್ರಿಯಾಂಕಾ ಗಾಂಧಿ, ಪ್ರಧಾನಮಂತ್ರಿ ಉಜ್ವಲ ಯೋಜನೆ 2.0 ಮೂಲಕ ಬಡವರಿಗೆ ಉಚಿತವಾಗಿ ಸಿಲಿಂಡರ್ ನೀಡುತ್ತಿದೆಯಾ? ಎಂದು ಪ್ರಶ್ನೆ ಮಾಡಿದ್ದರು.
ಇದನ್ನೂ ಓದಿರಿ: ನಟಿ ಐಶ್ವರ್ಯ ರೈ ಮತ್ತೊಮ್ಮೆ ಗರ್ಭಿಣಿ.. ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸುತ್ತಿವೆ ಈ ಫೋಟೋ!
ಕಳೆದ ಕೆಲ ದಿನಗಳ ಹಿಂದೆ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 25 ರೂ. ಏರಿಕೆ ಮಾಡುವ ಮೂಲಕ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಮಾಡಲಾಗಿದ್ದು, ಇದೇ ವಿಚಾರವನ್ನಿಟ್ಟುಕೊಂಡು ಪ್ರಿಯಾಂಕಾ ಕೇಂದ್ರವನ್ನ ಪ್ರಶ್ನೆ ಮಾಡಿದ್ದಾರೆ.