ETV Bharat / bharat

COVID Case ಹೆಚ್ಚಳ: ಬಾಲಿವುಡ್​ ನಟ ಸುನಿಲ್​ ಶೆಟ್ಟಿ ವಾಸವಿರುವ ಅಪಾರ್ಟ್​ಮೆಂಟ್​ ಸೀಲ್​ಡೌನ್​ - Mumbai Pruthvi apartment news

ಬಾಲಿವುಡ್​ ನಟ ಸುನಿಲ್​ ಶೆಟ್ಟಿ ದಕ್ಷಿಣ ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ 'ಪೃಥ್ವಿ ಅಪಾರ್ಟ್​ಮೆಂಟ್'ನಲ್ಲಿ ವಾಸಿಸುತ್ತಿದ್ದಾರೆ. ಆ ಕಟ್ಟಡದಲ್ಲಿ 5 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಬಿಎಂಸಿ ಸೀಲ್​ಡೌನ್​ ಮಾಡಿದೆ.

sunil-shetty
ನಟ ಸುನಿಲ್​ ಶೆಟ್ಟಿ
author img

By

Published : Jul 12, 2021, 1:08 PM IST

ಮುಂಬೈ(ಮಹಾರಾಷ್ಟ್ರ): ಬಾಲಿವುಡ್​ ನಟ ಸುನಿಲ್​ ಶೆಟ್ಟಿ ವಾಸವಿರುವ ಅಪಾರ್ಟ್​ಮೆಂಟ್​ನಲ್ಲಿ ಕೊರೊನಾ ಪ್ರಕರಣ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಕಟ್ಟಡವನ್ನು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ಸೀಲ್​ಡೌನ್​ ಮಾಡಿದೆ.

ಸುನಿಲ್ ಶೆಟ್ಟಿ ದಕ್ಷಿಣ ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ 'ಪೃಥ್ವಿ ಅಪಾರ್ಟ್​ಮೆಂಟ್'ನಲ್ಲಿ ವಾಸಿಸುತ್ತಿದ್ದಾರೆ. ಆ ಕಟ್ಟಡದಲ್ಲಿ 5 ಕೊರೊನಾ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಬಿಎಂಸಿ ಸೀಲ್​ಡೌನ್​ ಮಾಡಿದೆ.

ಬಿಎಂಸಿಯ ಸಹಾಯಕ ಆಯುಕ್ತ ಪ್ರಶಾಂತ್ ಗಾಯಜ್​ವಾಡ್​ ಈ ಬಗ್ಗೆ ಮಾಹಿತಿ ನೀಡಿದ್ದಾರೆ. "ಪೃಥ್ವಿ ಅಪಾರ್ಟ್​ಮೆಂಟ್'ನ್ನು ಸೀಲ್​ಡೌನ್​ ಮಾಡಲಾಗಿದ್ದು, ಯಾರಿಗೂ ಪ್ರವೇಶ ನೀಡಲಾಗುವುದಿಲ್ಲ. ಇಲ್ಲಿ ಪೊಲೀಸ್​ ಭದ್ರತೆಯನ್ನು ನಿಯೋಜಿಸಲಾಗುತ್ತದೆ" ಎಂದು ಹೇಳಿದರು.

"ನಟ ಸುನಿಲ್ ಶೆಟ್ಟಿ ಅವರ ಇಡೀ ಕುಟುಂಬವು ಈ ಕಟ್ಟಡದ 18 ನೇ ಮಹಡಿಯಲ್ಲಿ ವಾಸಿಸುತ್ತಿದೆ. ಅವರ ಕುಟುಂಬವು ಸುರಕ್ಷಿತವಾಗಿದೆ" ಎಂದು ಬಿಎಂಸಿ ಅಧಿಕಾರಿಗಳು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.