ಚೆನ್ನೈ: ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿಯೊಬ್ಬ ನ್ಯಾಯಾಧೀಶರ ಮುಂದೆ ಬ್ಲೇಡ್ನಿಂದ ಕುತ್ತಿಗೆ ಕತ್ತರಿಸಿಕೊಂಡಿರುವ ಘಟನೆ ನಡೆದಿದ್ದು, ಇದರಿಂದ ಕೆಲ ಸಮಯ ನ್ಯಾಯಾಲಯದಲ್ಲಿ ಕೋಲಾಹಲ ಉಂಟಾಯಿತು.
ಜೈಲರ್ ತನ್ನನ್ನು ಹಿಂಸಿಸುತ್ತಿದ್ದಾನೆಂದು ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿ ಪಾಂಡಿಯನ್ ಆರೋಪಿಸಿ ಈ ರೀತಿಯಾಗಿ ನಡೆದುಕೊಂಡಿದ್ದಾನೆ. ವ್ಯಾಸರ್ಪಾಡಿ ಪ್ರದೇಶದ ಪಾಂಡಿಯನ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಇದರ ಮಧ್ಯೆ 4ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಮುಂದೆ ಮತ್ತೊಂದು ಪ್ರಕರಣದ ವಿಚಾರಣೆಗೆ ಹಾಜರಾಗಿದ್ದನು. ಈ ವೇಳೆ ನ್ಯಾಯಾಧೀಶರಾದ ರವಿ ಎದುರೇ ಬ್ಲೇಡ್ನಿಂದ ಗಂಟಲು ಕತ್ತರಿಸಿಕೊಂಡಿದ್ದಾನೆ. ಜತೆಗೆ ಅಧಿಕಾರಿಗಳು ತನ್ನತ್ತ ಹಿಂಸಿಸುತ್ತಿದ್ದಾರೆ ಎಂದು ತಿಳಿಸಿದ್ದಾನೆ.
ಘಟನೆ ನಡೆಯುತ್ತಿದ್ದಂತೆ ಪೊಲೀಸರು ಆತನಿಗೆ ಪ್ರಥಮ ಚಿಕಿತ್ಸೆ ನೀಡಿದ್ದು, ಇದರ ವಿಚಾರಣೆ ನಡೆಸುವಂತೆ ನ್ಯಾಯಾಧೀಶರು ಆದೇಶ ನೀಡಿದ್ದಾರೆಂದು ತಿಳಿದು ಬಂದಿದೆ.