ಅನಂತಪುರ (ಆಂಧ್ರಪ್ರದೇಶ): ಇಲ್ಲಿರೋದು ಜೈಲು, ತರಹೇವಾರಿ ಆಹಾರ ಪದಾರ್ಥಗಳ ಸುವಾಸನೆ.. ನೀವು ಕೇಳಿದ ಫುಡ್ ಇಲ್ಲಿ ನಿಮಗೆ ಸಿಗೋದು ಖಚಿತ.. ಹಾಗಂತ ಇದು ಜೈಲೂಟ ಅನ್ಕೊಂಡ್ರೆ ನಿಮ್ಮ ಊಹೆ ತಪ್ಪಾಗುತ್ತೆ. ವ್ಯಾಪಾರದ ಬಗ್ಗೆ ಒಲವು ಹೊಂದಿರುವವರು ಯಾವಾಗಲೂ ತಮ್ಮ ಉದ್ಯಮಗಳನ್ನು ವಿಶಿಷ್ಟವಾಗಿ ಆರಂಭಿಸಲು ಯೋಚಿಸುತ್ತಿರುತ್ತಾರೆ. ಅಂತೆಯೇ ಇಲ್ಲೊಂದು ವಿಭಿನ್ನ ರೀತಿಯ ರೆಸ್ಟೋರೆಂಟ್ನ್ನು ತೆರೆಯಲಾಗಿದೆ.
ಹೌದು, ಅನಂತಪುರದಲ್ಲಿ ಜೈಲು ರೀತಿಯ ರೆಸ್ಟೋರೆಂಟ್ನ್ನು ಆರಂಭಿಸಲಾಗಿದೆ. ಇದು ಅನಂತಪುರದ ರುದ್ರಂಪೇಟೆ ಬೈಪಾಸ್ ಪಕ್ಕದಲ್ಲಿದೆ. ರೆಸ್ಟೊರೆಂಟ್ ಪ್ರವೇಶಿಸಿದ ಕೂಡಲೇ ಜೈಲು ಸೇರಿದಂತೆ ಭಾಸವಾಗುತ್ತದೆ. ಅಷ್ಟೇ ಅಲ್ಲಾ, ದ್ವಾರದಲ್ಲಿ ಕಾವಲುಗಾರನಿದ್ದು, ಎಲ್ಲಿ ನೋಡಿದರೂ ಬಂದೂಕು ಹಿಡಿದ ವ್ಯಕ್ತಿಗಳು ಕಾಣುತ್ತಾರೆ. ಕೈದಿಗಳ ಸಮವಸ್ತ್ರದಲ್ಲಿರುವ ಸರ್ವರ್‌ಗಳು ನಿಮ್ಮ ಸೇವೆ ಮಾಡುತ್ತಾರೆ. ನೀವು ಒಮ್ಮೆ ಇಲ್ಲಿಗೆ ಕಾಲಿಟ್ಟ ತಕ್ಷಣ ಮುಖ್ಯ ದ್ವಾರ ಬಂದ್ ಆಗುತ್ತದೆ. ಆ ಕ್ಷಣವೇ ಜೈಲಿನ ಅನುಭವ ಅರಂಭ ಆಗುತ್ತದೆ.
ಈ ರೀತಿ ಆಲೋಚನೆ ಯಾವಾಗ ಬಂತು?
ರೆಸ್ಟೋರೆಂಟ್ ಮಾಲೀಕರಾದ ಅನುಷಾ, ಮನೋಜ್ ಮತ್ತು ರಘುವಂಶಿ ಅವರು ಕಾರ್ಪೊರೇಟ್ ಉದ್ಯೋಗದಲ್ಲಿದ್ದವರು. ಇವರು ಕೊರೊನಾದ ಲಾಕ್‌ಡೌನ್ ಹಿನ್ನೆಲೆ ಮನೆಯಲ್ಲಿದ್ದಾಗ ಈ ಆಲೋಚನೆ ಕಂಡುಕೊಂಡರಂತೆ. ಅದನ್ನು ಪರಿಣಾಮಕಾರಿಯಾಗಿ ಬಳಸಲು ಮುಂದಾಗಿ ಯಶಸ್ಸು ಕಂಡಿದ್ದಾರೆ.
ಇದನ್ನೂ ಓದಿ: ನೀಟ್- ಪಿಜಿ ಕೌನ್ಸಿಲಿಂಗ್ ಜನವರಿ 12ರಂದು ಆರಂಭ: ಕೇಂದ್ರ ಆರೋಗ್ಯ ಸಚಿವ
ಈ ಬಗೆಗಿನ ಅವರ ಸಂಶೋಧನೆಯಲ್ಲಿ ಉತ್ತಮ ಆಹಾರವನ್ನು ನೀಡುವ ಹಲವಾರು ಸ್ಥಳಗಳಿದ್ದರೂ, ತಮಗೆ ಬೇಕಾದ 'ಉಲ್ಲಾಸಕರ ಅನುಭವ' ಎಲ್ಲಿಯೂ ಕಂಡುಬರಲಿಲ್ಲವಂತೆ. ಅದನ್ನೇ ಬಂಡವಾಳ ಮಾಡಿಕೊಳ್ಳಲು ಈ ಮೂವರು ನಿರ್ಧರಿಸಿದ್ದಾರೆ.
ಇಷ್ಟೇ ಅಲ್ಲಾ, ಮೆನುವಿನಲ್ಲಿ ಭಾರಿ ಬೆಲೆ ಏನು ಇಲ್ಲ. ಕೈಗೆಟುವ ಬೆಲೆಯಲ್ಲಿ ಆಹಾರ ಲಭ್ಯವಾಗುತ್ತದೆ. ಜೊತೆಗೆ ಅದ್ಭುತ ಅನುಭವ ಸಹ ಸಿಗಲಿದೆ.