ETV Bharat / bharat

ಪ್ರಧಾನಿ ಮೋದಿಯಿಂದ ಕೇದಾರನಾಥದಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯರ ಪ್ರತಿಮೆ ಲೋಕಾರ್ಪಣೆ

author img

By

Published : Nov 5, 2021, 10:19 AM IST

Updated : Nov 5, 2021, 10:49 AM IST

ಗಡಿಯಲ್ಲಿ ಸೈನಿಕರ ಜೊತೆ ದೀಪಾವಳಿ ಆಚರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದ ರುದ್ರಪ್ರಯಾಗ್​​ ಜಿಲ್ಲೆಯಲ್ಲಿರುವ ಕೇದಾರನಾಥ ಕ್ಷೇತ್ರಕ್ಕೆ ತೆರಳಿದರು. ಮೈಸೂರಿನ ಶಿಲ್ಪಿ ನಿರ್ಮಿಸಿರುವ ಆದಿ ಗುರು ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನು ಉದ್ಘಾಟಿಸಿದರು.

prime-minister-narendra-modi
ಪ್ರಧಾನಿ ನರೇಂದ್ರ ಮೋದಿ

ಡೆಹ್ರಾಡೂನ್​(ಉತ್ತರಾಖಂಡ): ಕೇದಾರನಾಥನ ಸನ್ನಿಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಆದಿ ಗುರು ಶ್ರೀ ಶಂಕರಾಚಾರ್ಯರ ಪ್ರತಿಮೆ ಅನಾವರಣ ಮಾಡಿದ್ದಾರೆ. 12 ಅಡಿ ಎತ್ತರದ ಸುಮಾರು 26 ರಿಂದ 28 ಟನ್ ತೂಕದ ಏಕಶಿಲಾ ಪ್ರತಿಮೆಯನ್ನು ಉದ್ಘಾಟಿಸಿದರು. ಸ್ವಲ್ಪ ಹೊತ್ತು ಪ್ರತಿಮೆ ಮುಂದೆ ಕೂತು ಧ್ಯಾನ ಮಾಡಿ, ಶಂಕರಾಚಾರ್ಯರಿಗೆ ನಮಸ್ಕರಿಸಿದರು. ಮೈಸೂರಿನ ಖ್ಯಾತ ಶಿಲ್ಪಿ ಅರುಣ್​ ಯೋಗಿರಾಜ್​ ನಿರ್ಮಾಣ ಮಾಡಿರುವ ಪ್ರತಿಮೆ ಇದು. ಕಳೆದ ಸಪ್ಟೆಂಬರ್​​ನಲ್ಲಿ ಪ್ರತಿಮೆ ಕೆತ್ತನೆ ಕಾರ್ಯವನ್ನು ಶಿಲ್ಪಿ ಅರುಣ್​ ಯೋಗಿರಾಜ್​ ಆರಂಭಿಸಿದ್ದರು. ಮೈಸೂರಿನಿಂದ ಚಮೋಲಿವರೆಗೂ ರಸ್ತೆ ಮೂಲಕ ಪ್ರತಿಮೆ ಸಾಗಿಸಲಾಗಿತ್ತು. ಅಲ್ಲಿಂದ ಚಿನೂಕ್​ ಹೆಲಿಕಾಪ್ಟರ್​ನಲ್ಲಿ ಕೇದಾರನಾಥ ಕ್ಷೇತ್ರಕ್ಕೆ ಕೊಂಡೊಯ್ಯಲಾಗಿತ್ತು. ಅಲ್ಲಿ ಸುಮಾರು ಒಂದು ತಿಂಗಳು ಇದ್ದ ಶಿಲ್ಪಿ ಅರುಣ್ ಯೋಗಿರಾಜ್​ ಪ್ರತಿಮೆಗೆ ಅಂತಿಮ ಸ್ಪರ್ಶ ನೀಡಿ ರಾಜ್ಯಕ್ಕೆ ಮರಳಿದ್ದರು.

ಪ್ರಧಾನಿ ಮೋದಿಯಿಂದ ಗುರು ಶಂಕರಾಚಾರ್ಯರರ ಪ್ರತಿಮೆ ಲೋಕಾರ್ಪಣೆ

ಇದರ ಜೊತೆಗೆ ಹಿಮಾಲಯದ ದೇವಾಲಯಗಳ ಮರು ನಿರ್ಮಾಣಕ್ಕಾಗಿ 300 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಇದಕ್ಕೂ ಮುನ್ನ ಪ್ರಧಾನಿ ಮೋದಿ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ಕೇದಾರನಾಥನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಶಿವನ ಮೂರ್ತಿಗೆ ಆರತಿ ಬೆಳಗಿ ನಮಿಸಿದರು. ರುದ್ರಾಭಿಷೇಕವನ್ನೂ ನೆರವೇರಿಸಿದರು. ಕೇದಾರನಾಥದಲ್ಲಿರುವ ಬಹುತೇಕ ಎಲ್ಲಾ ಗುಡಿಗಳಿಗೂ ಪ್ರಧಾನಿ ಮೋದಿ ತೆರಳಿ ನಮಸ್ಕರಿಸಿದರು.

2013ರಲ್ಲಿ ಉಂಟಾದ ಪ್ರವಾಹದಲ್ಲಿ ಶಂಕರಾಚಾರ್ಯರ ಪ್ರತಿಮೆಗೆ ಹಾನಿಯಾಗಿತ್ತು. ಇದಾದ ಬಳಿಕ ಮೋದಿ ಅಲ್ಲಿಯೇ ಆದಿ ಗುರುಗಳ ಪ್ರತಿಮೆ ಮತ್ತು ವಸ್ತುಸಂಗ್ರಹಾಲಯ ನಿರ್ಮಿಸುವುದಾಗಿ ತಿಳಿಸಿದ್ದರು.

ಇದನ್ನೂ ಓದಿ: ದ್ವಾರಕಾದಲ್ಲಿ ಭೂಕಂಪ: ಗುಜರಾತ್​ ಸಿಎಂಗೆ ಕರೆ ಮಾಡಿ ಸ್ಥಿತಿಗತಿ ತಿಳಿದುಕೊಂಡ ಪ್ರಧಾನಿ

Last Updated : Nov 5, 2021, 10:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.