ಪಾಟ್ನಾ (ಬಿಹಾರ): ಮೊದಲು ಪ್ರಧಾನಿ ನರೇಂದ್ರ ಮೋದಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲಿ, ಬಳಿಕ ನಾವೆಲ್ಲ ಲಸಿಕೆ ಪಡೆಯುತ್ತೇವೆಂದು ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ ಪುತ್ರ ಹಾಗೂ ಆರ್‌ಜೆಡಿ ಮುಖಂಡ ತೇಜ್ ಪ್ರತಾಪ್ ಯಾದವ್ ಹೇಳಿಕೆ ನೀಡಿದ್ದಾರೆ.
-
Prime Minister Narendra Modi should take first shot of COVID19 vaccine, then, we will also take it: RJD leader Tej Pratap Yadav pic.twitter.com/YuUomjLqCQ
— ANI (@ANI) January 8, 2021 " class="align-text-top noRightClick twitterSection" data="
">Prime Minister Narendra Modi should take first shot of COVID19 vaccine, then, we will also take it: RJD leader Tej Pratap Yadav pic.twitter.com/YuUomjLqCQ
— ANI (@ANI) January 8, 2021Prime Minister Narendra Modi should take first shot of COVID19 vaccine, then, we will also take it: RJD leader Tej Pratap Yadav pic.twitter.com/YuUomjLqCQ
— ANI (@ANI) January 8, 2021
ಇಂದು ದೇಶಾದ್ಯಂತ ಎರಡನೇ ಹಂತದ ಕೊರೊನಾ ಲಸಿಕೆಯ ಡ್ರೈ ರನ್ ನಡೆಯುತ್ತಿದ್ದು, ಶೀಘ್ರದಲ್ಲೇ ಲಸಿಕೆ ವಿತರಣೆಯಾಗಲಿದೆ. ಈ ಬಗ್ಗೆ ಮಾತನಾಡಿರುವ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ನಾಯಕ ತೇಜ್ ಪ್ರತಾಪ್ ಯಾದವ್, ಮೊದಲ ಲಸಿಕೆಯನ್ನು ಪಿಎಂ ಮೋದಿ ಪಡೆದರೆ ಅದು ದೇಶದ ಜನರಲ್ಲಿ ವಿಶ್ವಾಸ ಮೂಡಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇದು ಬಿಜೆಪಿ ಲಸಿಕೆ, ನಾನು ತೆಗೆದುಕೊಳ್ಳುವುದಿಲ್ಲ: ಅಖಿಲೇಶ್ ಯಾದವ್
ಭಾರತದ ಕೋವಿಡ್ ಲಸಿಕೆಯನ್ನು ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ಕೂಡ ಪ್ರಶ್ನಿಸಿದೆ. ಕೆಲದಿನಗಳ ಹಿಂದೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ದೇಶದಲ್ಲಿ ವಿತರಿಸಲಾಗುವ ಕೋವಿಡ್-19 ಲಸಿಕೆಗಳನ್ನು 'ಬಿಜೆಪಿಯ ಲಸಿಕೆ' ಎಂದು ಹೇಳಿದ್ದರು. ಬಿಜೆಪಿಯಿಂದ ನೀಡಲಾಗುತ್ತಿರುವ ಲಸಿಕೆಯನ್ನು ನಾನು ಹೇಗೆ ನಂಬಲಿ? ಲಸಿಕೆಯನ್ನು ನಾನು ತೆಗೆದುಕೊಳ್ಳುವುದಿಲ್ಲ ಎಂದಿದ್ದರು.