ETV Bharat / bharat

ಅಧಿವೇಶನದಲ್ಲಿ ಫಲಪ್ರದ ಸಂವಾದ, ಚರ್ಚೆ ನಡೆಸಿ: ಸಂಸದರಿಗೆ ಪ್ರಧಾನಿ ಮೋದಿ ಸಲಹೆ

ಸಂಸತ್ತಿನ ಮುಂಗಾರು ಅಧಿವೇಶನ ಫಲಪ್ರದ ಮತ್ತು ಉತ್ತಮ ಚರ್ಚೆ, ಸಂವಾದಕ್ಕೆ ನಾಂದಿ ಹಾಡಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಅಧಿವೇಶನದಲ್ಲಿ ಫಲಪ್ರದ ಸಂವಾದ, ಚರ್ಚೆ ನಡೆಸಿ: ಸಂಸದರಿಗೆ ಪ್ರಧಾನಿ ಮೋದಿ ಸಲಹೆ
ಅಧಿವೇಶನದಲ್ಲಿ ಫಲಪ್ರದ ಸಂವಾದ, ಚರ್ಚೆ ನಡೆಸಿ: ಸಂಸದರಿಗೆ ಪ್ರಧಾನಿ ಮೋದಿ ಸಲಹೆ
author img

By

Published : Jul 18, 2022, 10:37 AM IST

ನವದೆಹಲಿ: ಇಂದಿನಿಂದ ಆರಂಭವಾಗುವ ಮುಂಗಾರು ಅಧಿವೇಶನ ಫಲಪ್ರದವಾಗಬೇಕು. ಸಂಸತ್ತಿನಲ್ಲಿ ಮುಕ್ತ ಮನಸ್ಸಿನಿಂದ ಚರ್ಚೆ, ಸಂವಾದ ನಡೆಯಬೇಕು. ಎಲ್ಲಾ ಸಂಸದರು ದೀರ್ಘವಾಗಿ ಆಲೋಚಿಸಿ ವಿಷಯಗಳ ಬಗ್ಗೆ ಚರ್ಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದರು.

ಅಧಿವೇಶನ ಆರಂಭಕ್ಕೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಈ ಅಧಿವೇಶನವು ಬಹಳ ಮಹತ್ವದ್ದಾಗಿದೆ. ಏಕೆಂದರೆ ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಚುನಾವಣೆಗಳು ನಡೆಯುತ್ತಿವೆ. ಇಂದು ರಾಷ್ಟ್ರಪತಿ ಚುನಾವಣೆಗೆ ಮತದಾನ ಆರಂಭವಾಗಿದೆ. ಈ ಅಧಿವೇಶನದಲ್ಲಿ ಹೊಸ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳು ಹೊಸ ಮಾರ್ಗದರ್ಶಕರಾಗಿ ಬರಲಿದ್ದಾರೆ" ಎಂದರು.

"ಇದಲ್ಲದೇ, ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು (75 ವರ್ಷ) ಆಚರಿಸುತ್ತಿದ್ದೇವೆ. ಮುಂದಿನ 25 ವರ್ಷಗಳಿಗೆ ದೇಶ 100 ವರ್ಷಗಳ ಸ್ವಾತಂತ್ರ್ಯವನ್ನು ಪೂರೈಸಲಿದೆ. ಇದು ಮಹತ್ತರ ಮೈಲುಗಲ್ಲು. ಆಗ ನಾವು ಈ ಹಿಂದೆ ನಡೆದುಕೊಂಡು ಬಂದ ಹಾದಿಯು ನಮ್ಮ ಸಂಕಲ್ಪ ಮತ್ತು ಹೊಣೆಗಾರಿಕೆಯನ್ನು ನಿರ್ಧರಿಸುತ್ತದೆ. ದೇಶ ಹೊಸ ಎತ್ತರಕ್ಕೆ ಬೆಳೆಯಲಿದೆ" ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ: ಮುರ್ಮು VS ಸಿನ್ಹಾ: ಇಂದು ರಾಷ್ಟ್ರಪತಿ ಚುನಾವಣೆಗೆ ಮತದಾನ, ಸಕಲ ಸಿದ್ಧತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.