ETV Bharat / bharat

ಪಕ್ಷದ ತತ್ವ ಸಿದ್ಧಾಂತಗಳೇ ಅದ್ಭುತ ವಿಜಯಕ್ಕೆ ಕಾರಣ: ಪ್ರಧಾನಿ ಮೋದಿ - ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು

ಪಂಚರಾಜ್ಯಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ನವದೆಹಲಿಯ ಬಿಜೆಪಿ ಮುಖ್ಯ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕರ್ತರ ಶ್ರಮಕ್ಕೆ ಧನ್ಯವಾದ ಸಲ್ಲಿಸಿದರು. ಅಲ್ಲದೇ, ಬಿಜೆಪಿ ಸರ್ಕಾರ ಮಹಿಳೆಯರು, ಬಡವರ ಅಭ್ಯುದಯಕ್ಕೆ ಬದ್ಧವಾಗಿರಲಿದೆ ಎಂದು ಭರವಸೆ ನೀಡಿದರು.

prime-minister
ಪ್ರಧಾನಿ ಮೋದಿ
author img

By

Published : Mar 10, 2022, 9:47 PM IST

Updated : Mar 10, 2022, 10:51 PM IST

ನವದೆಹಲಿ: ಪಂಚರಾಜ್ಯ ಚುನಾವಣೆಯಲ್ಲಿ ಅದ್ಭುತ ಯಶಸ್ಸು ಸಾಧಿಸಿದ ಬಳಿಕ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ನಡೆದ ಸಂಭ್ರಮಾಚಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಭಾಗವಹಿಸಿ, ಕಾರ್ಯಕರ್ತರ ಸಂತಸವನ್ನು ಇಮ್ಮಡಿಗೊಳಿಸಿದರು.

ಈ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಪಕ್ಷದ ತತ್ವ- ಸಿದ್ಧಾಂತಗಳೇ ಈ ಅದ್ಭುತ ವಿಜಯಕ್ಕೆ ಕಾರಣ. ಹೊಸ ಮತದಾರರು ಪಕ್ಷದ ಕೈ ಹಿಡಿದಿದ್ದಾರೆ. ಹೋಳಿ ಹಬ್ಬ ಇಂದಿನಿಂದಲೇ ಆರಂಭವಾಗಿದೆ ಹೇಳಿದರು.

ಪಕ್ಷದ ತತ್ವ ಸಿದ್ಧಾಂತಗಳೇ ಪ್ರಚಂಡ ಬಹುಮತಕ್ಕೆ ಕಾರಣವಾಗಿದೆ. ಬಡವರ ಅಬಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ. ಪಕ್ಷದ ಕೈ ಹಿಡಿದ ಮಹಿಳಾ ಮತದಾರರಿಗೆ ಧನ್ಯವಾದ ಹೇಳುವೆ. ಹೊಸ ಮತದಾರರು ಕೂಡ ನಮ್ಮನ್ನು ಆಶೀರ್ವದಿಸಿದ್ದಾರೆ. ಎಲ್ಲರಿಗೂ ನಾನು ಧನ್ಯವಾದ ಹೇಳುವೆ ಎಂದು ಮೋದಿ ಹೇಳಿದರು.

ಇನ್ನು ಕೆಲವರು ಜಾತಿ ಮುಂದಿಟ್ಟುಕೊಂಡು ಚುನಾವಣೆ ನಡೆಸಿದರು. ಅಂತಹ ಜಾತಿವಾದಿಗಳಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಇದು ಪ್ರಜಾಪ್ರಭುತ್ವದ ನಿಜವಾದ ಗೆಲುವಾಗಿದೆ. ಬಿಜೆಪಿಗೆ ಮತ ಹಾಕಿದ ಎಲ್ಲಾ ಮತದಾರರಿಗೆ ಹೃದಯಪೂರ್ವಕ ಧನ್ಯವಾದ ಎಂದರು.

'ಉತ್ತರ'ದಲ್ಲಿ ಇತಿಹಾಸ ಸೃಷ್ಟಿ: ಇನ್ನು ಉತ್ತರಪ್ರದೇಶ, ಉತ್ತರಾಖಂಡದಲ್ಲಿ ಬಿಜೆಪಿ ಸರ್ಕಾರ 2 ನೇ ಬಾರಿಗೆ ಅಧಿಕಾರಕ್ಕೇರುವ ಮೂಲಕ ಇತಿಹಾಸ ಸೃಷ್ಟಿಸಿದೆ. ಇದಕ್ಕೆ ಕಾರ್ಯಕರ್ತರು ಮತ್ತು ಮತದಾರರೇ ಕಾರಣ. ವಂಶಪಾರಂಪರ್ಯ ಆಡಳಿತದಿಂದ ಯಾವುದೇ ದೇಶ ಅಭಿವೃದ್ಧಿಯಾಗಿಲ್ಲ. ಭ್ರಷ್ಟಾಚಾರದ ಆಡಳಿತಕ್ಕೆ ಬಿಜೆಪಿ ಕಡಿವಾಣ ಹಾಕಿದೆ. ಕುಟುಂಬ ರಾಜಕೀಯ ನಿರ್ಮೂಲನೆಯಾಗುವ ದಿನಗಳು ದೂರವಿಲ್ಲ ಎಂದರು.

ಆಡಳಿತದಲ್ಲಿ ಪಾರದರ್ಶಕತೆಯನ್ನು ತಂದಿದ್ದೇವೆ. ಬಡವರಿಗೆ ನೀಡಿದ ಭರವಸೆ ನಿಮ್ಮ ಮನೆ ತಲುಪುತ್ತದೆ ಎಂದು ಹೇಳಿದ್ದೇವೆ. ಅದು ತಲುಪುವ ತನಕ ಸುಮ್ಮನೆ ಕೂರುವವರು ನಾವಲ್ಲ. ಇಂದು ಪ್ರಕಟವಾದ ಚುನಾವಣಾ ಫಲಿತಾಂಶ 2024ರ ಲೋಕಸಭೆ ಚುನಾವಣೆಯ ದಿಕ್ಕನ್ನು ಸ್ಪಷ್ಟಪಡಿಸಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.

ಪಂಜಾಬ್​ನಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಆ ರಾಜ್ಯದಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸಲಾಗುವುದು. ತಮ್ಮ ಪ್ರಾಣ ಒತ್ತಯಿಟ್ಟು ಹೋರಾಡಿದ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದ ಎಂದರು.

ಡಬಲ್​ ಎಂಜಿನ್​ ಸರ್ಕಾರದಿಂದ ಅಭಿವೃದ್ಧಿ: ಇನ್ನು ಕೇಂದ್ರ- ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಅಭಿವೃದ್ಧಿಗೆ ಪೂರಕ. ಎಲ್ಲೆಲ್ಲಿ ಡಬಲ್ ಎಂಜಿನ್ ಸರ್ಕಾರವಿದೆಯೋ, ಅಲ್ಲಿ ಜನರ ಹಿತ ಕಾಪಾಡುವ ಕಾರ್ಯ ಮಾಡಲಾಗುವದು ಎಂದರು.

ಭಾರತೀಯರ ರಕ್ಷಣೆಯಲ್ಲೂ ರಾಜಕೀಯ: ಯುದ್ಧ ಪೀಡಿತ ಉಕ್ರೇನ್​​ನಲ್ಲಿ ಸಿಲುಕಿದ್ದ ಭಾರತೀಯರನ್ನು ರಕ್ಷಣೆ ಮಾಡಲು ಸರ್ಕಾರ ಹೆಣಗಾಡುತ್ತಿದ್ದರೆ, ಇತ್ತ ವಿರೋಧ ಪಕ್ಷಗಳು ಅದರಲ್ಲೂ ರಾಜಕೀಯ ಮಾಡಿವೆ. ಸರ್ಕಾರ ಆಪರೇಷನ್ ಗಂಗಾ ಕಾರ್ಯಾಚರಣೆಯಡಿ 18 ಸಾವಿರಕ್ಕೂ ಅಧಿಕ ಭಾರತೀಯರನ್ನು ರಕ್ಷಿಸಿದೆ ಎಂದರು.

ಉಕ್ರೇನ್​-ರಷ್ಯಾ ಯುದ್ಧದ ಪರಿಣಾಮಗಳು ಹಲವಾರು ದೇಶಗಳ ಮೇಲೆ ಬಿದ್ದಿದೆ. ಇದರಿಂದಾಗಿ ಸೂರ್ಯಕಾಂತಿ ಎಣ್ಣೆಯ ದರವೂ ಏರಿಕೆ ಕಂಡಿದೆ. ಭಾರತ ಈ ದೇಶಗಳಿಂದ ಎಣ್ಣೆ ಖರೀದಿ ಮಾಡುತ್ತಿದೆ. ಇದೀಗ ದರ ಏರಿಕೆಯು ನಮಗೆ ಒಂದು ಪಾಠ ಕಲಿಸಿದೆ. ಆತ್ಮನಿರ್ಭರದಲ್ಲಿ ಭಾರತ ಸಾಗಬೇಕು ಎಂಬುದನ್ನು ಇದು ತಿಳಿಸಿದೆ ಎಂದರು.

ಇದನ್ನೂ ಓದಿ: 100 ಕ್ಷೇತ್ರದಲ್ಲಿ ಸ್ಪರ್ಧಿಸಿ 0 ಸುತ್ತಿದ ಓವೈಸಿ! ಮುಸ್ಲಿಂ ಬಾಹುಳ್ಯವಿದ್ದರೂ ಒಂದೂ ಸ್ಥಾನ ಗೆಲ್ಲಲಿಲ್ಲ

Last Updated : Mar 10, 2022, 10:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.