ನವದೆಹಲಿ : ಇಂದು ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-19 ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ. ಈ ಮೂಲಕ ಎಲ್ಲರೂ ಒಗ್ಗೂಡಿ ಕೊರೊನಾ ಮುಕ್ತ ದೇಶ ನಿರ್ಮಾಣ ಮಾಡೋಣ ಎಂದು ಕರೆಕೊಟ್ಟಿದ್ದಾರೆ.
ಇನ್ನು, ಈ ವೇಳೆ ಅಸ್ಸೋಂನ ಸಂಸ್ಕೃತಿಯ ಪ್ರತೀಕವಾದ ಗ್ಯಾಮ್ಚಾವನ್ನು ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಗ್ಯಾಮ್ಚಾ ಅಸ್ಸೋಂನ ಮಹಿಳೆಯರ ಆಶೀರ್ವಾದದ ಸಂಕೇತವಾಗಿದೆ. ಪ್ರಧಾನಿ ಅನೇಕ ಸಂದರ್ಭದಲ್ಲಿ ಗ್ಯಾಮ್ಚಾ ಧರಿಸಿರುವುದನ್ನು ಕಾಣಬಹುದು.
ಇದನ್ನು ಓದಿ: ಏಮ್ಸ್ನಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದ ಪ್ರಧಾನಿ ನರೇಂದ್ರ ಮೋದಿ
ಪುದುಚೇರಿಯ ಸಿಸ್ಟರ್ ಪಿ. ನಿವಿದ ಮತ್ತು ಕೇರಳದ ರೋಸಮ್ಮ ಅನಿಲ್ ಎಂಬುವರು ಪ್ರಧಾನಿ ಮೋದಿಯವರಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಿದ ಇಬ್ಬರು ನರ್ಸ್ಗಳು.