ETV Bharat / bharat

ಚಂದ್ರಯಾನ-3 ಯಶಸ್ವಿ: ಬೆಂಗಳೂರಿಗೆ ಬಂದಿಳಿದ ಪ್ರಧಾನಿ, ಹೆಚ್​ಎಎಲ್​​​ನಲ್ಲಿ ಅದ್ಧೂರಿ ಸ್ವಾಗತ - ಚಂದ್ರಯಾನ 3

Chandrayaan-3 Mission: ಚಂದ್ರಯಾನ-3 ಮಿಷನ್‌ನಲ್ಲಿ ಭಾಗಿಯಾಗಿರುವ ಇಸ್ರೋ ತಂಡದ ವಿಜ್ಞಾನಿಗಳನ್ನು ಭೇಟಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಂಗಳೂರಿಗೆ ಆಗಮಿಸಿದರು.

Chandrayaan 3
ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನ
author img

By ETV Bharat Karnataka Team

Published : Aug 26, 2023, 6:18 AM IST

Updated : Aug 26, 2023, 6:45 AM IST

ಬೆಂಗಳೂರು: ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ಚಂದ್ರಯಾನ-3 ಮಿಷನ್‌ನಲ್ಲಿ ಭಾಗಿಯಾಗಿರುವ ಇಸ್ರೋ ತಂಡದ ವಿಜ್ಞಾನಿಗಳನ್ನು ಭೇಟಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದರು.

  • #WATCH | Karnataka | PM Narendra Modi arrives at HAL airport in Bengaluru after concluding his two-nation visit to South Africa and Greece.

    PM Modi will meet scientists of the ISRO team involved in Chandrayaan-3 Mission at ISRO Telemetry Tracking & Command Network Mission… pic.twitter.com/1GOeilOgHB

    — ANI (@ANI) August 26, 2023 " class="align-text-top noRightClick twitterSection" data=" ">

ಮೋದಿ ಅವರನ್ನು ಸ್ಥಳೀಯ ಕಲಾವಿದರು ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದ ಹೊರಗೆ ಬೀದಿಗಳಲ್ಲಿ ಧೋಲ್ ನುಡಿಸುವ ಮೂಲಕ ಸ್ವಾಗತಿಸಿದರು. ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್‌ಗೆ ಎರಡು ರಾಷ್ಟ್ರಗಳ ಭೇಟಿಯನ್ನು ಮುಗಿಸಿದ ನಂತರ ಪ್ರಧಾನಿ ಮೋದಿ ಇಲ್ಲಿಗೆ ಆಗಮಿಸಿದರು.

  • #WATCH | Karnataka | BJP MP Tejaswi Surya present outside HAL airport in Bengaluru to welcome PM Modi as he arrived there after concluding his two-nation visit to South Africa and Greece. pic.twitter.com/miaTXwBRlk

ಹೆಚ್​ಎಎಲ್​ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರ್ಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ. ಡಿಜಿಪಿ ಅಲೋಕ್​ ಮೋಹನ್​ ಸೇರಿದಂತೆ ಹಿರಿಯ ಅಧಿಕಾರಿಗಳು ಹೂ ಗುಚ್ಚ ನೀಡಿ ಬೆಂಗಳೂರಿಗೆ ವೆಲ್​ ಕಮ್​ ಮಾಡಿದರು. ಇಲ್ಲಿಂದ ಪ್ರಧಾನಿ ಜಾಲಹಳ್ಳಿ ಕ್ರಾಸ್​ ಮೂಲಕ ಇಸ್ರೋ ಕಚೇರಿ ತಲುಪಲಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸೂಕ್ತ ಬಿಗಿ ಭದ್ರತೆ ಮಾಡಲಾಗಿದೆ. ರಸ್ತೆ ಮಾರ್ಗಗಳನ್ನ ಬದಲಿಸಲಾಗಿದೆ.

ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ಚಂದ್ರಯಾನ-3 ಮಿಷನ್‌ನಲ್ಲಿ ತೊಡಗಿರುವ ವಿಜ್ಞಾನಿಗಳನ್ನು ಪ್ರಧಾನಿ ಭೇಟಿ ಮಾಡಿ ಸಂವಾದ ನಡೆಸಲಿದ್ದಾರೆ. ಮೋದಿ ಅವರನ್ನು ಸ್ವಾಗತಿಸಲು ಪೋಸ್ಟರ್‌ಗಳು ಮತ್ತು ರಾಷ್ಟ್ರಧ್ವಜದೊಂದಿಗೆ ಸ್ಥಳೀಯರು ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದ ಹೊರಗೆ ಬೀದಿಗಳಲ್ಲಿ ಜಮಾಯಿಸಿ, ಅದ್ದೂರಿ ಸ್ವಾಗತ ಕೋರಿದರು.

  • #WATCH | Karnataka | Local artists play dhol and dance on the streets outside HAL airport in Bengaluru to welcome PM Narendra Modi as he will meet scientists of ISRO team involved in the Chandrayaan-3 Mission at ISRO Telemetry Tracking & Command Network Mission Control Complex.… pic.twitter.com/MO1tXpO3a7

ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್‌ ಪ್ರವಾಸ ಮುಗಿಸಿದ ಬಳಿಕ ಪ್ರಧಾನಿ ಸೀದಾ ಅಥೆನ್ಸ್​ನಿಂದ ಬೆಂಗಳೂರಿಗೆ ಬಂದಿಳಿದರು. ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣದ ಹೊರಗೆ ಜಮಾಯಿಸಿದ ಸ್ಥಳೀಯರು, ಮೋದಿ ಸ್ವಾಗತಿಸಲು ಕಾತರರಾಗಿ ನಸುಕಿನ ಜಾವದಿಂದಲೇ ಕಾಯ್ದರು.

  • #WATCH | Karnataka | Locals with posters and the national flag gather on the streets outside HAL airport in Bengaluru to welcome PM Narendra Modi as he will meet scientists of ISRO team involved in the Chandrayaan-3 Mission at ISRO Telemetry Tracking & Command Network Mission… pic.twitter.com/mV4fapzLDZ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಸ್ಥಳೀಯ ಕಲಾವಿದರು ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದ ಹೊರಗೆ ಬೀದಿಗಳಲ್ಲಿ ಧೋಲ್ ನುಡಿಸಿ ಮತ್ತು ನೃತ್ಯ ಮಾಡಿ ಸಂಭ್ರಮಿಸಿದರು.

  • Landed in Bengaluru. Looking forward to interacting with our exceptional @isro scientists who have made India proud with the success of Chandrayaan-3! Their dedication and passion are truly the driving forces behind our nation's achievements in the space sector.

    — Narendra Modi (@narendramodi) August 26, 2023 " class="align-text-top noRightClick twitterSection" data=" ">

ಮೋದಿ ಟ್ವೀಟ್​: ಬೆಳ್ಳಂ ಬೆಳಗ್ಗೆಯೇ ಬೆಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದಾರೆ. ’’ ನಮ್ಮ ಅಸಾಧಾರಣ ವಿಜ್ಞಾನಿಗಳ ಜೊತೆ ಸಂವಹನ ನಡೆಸಲು ಎದುರು ನೋಡುತ್ತಿದ್ದೇನೆ @isro. ಚಂದ್ರಯಾನ-3 ಯಶಸ್ಸಿನಿಂದ ಭಾರತಕ್ಕೆ ಹೆಮ್ಮೆ ತಂದಿದೆ. ಭಾರತದ ಕೀರ್ತಿ ಪತಾಕೆ ಹಾರಿಸಿದ ವಿಜ್ಞಾನಿಗಳು. ಅವರ ಸಮರ್ಪಣೆ ಮತ್ತು ಉತ್ಸಾಹವು ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ರಾಷ್ಟ್ರದ ಸಾಧನೆಗಳ ಹಿಂದಿನ ಪ್ರೇರಕ ಶಕ್ತಿಗಳಾಗಿವೆ ಎಂದು ಟ್ವೀಟ್​​ನಲ್ಲಿ ಮೋದಿ ಬಣ್ಣಿಸಿದ್ದಾರೆ.

ಇದನ್ನೂ ಓದಿ: ಚಂದ್ರನ ದಕ್ಷಿಣ ಧ್ರುವದಲ್ಲಿ 8 ಮೀಟರ್‌ ದೂರ ಕ್ರಮಿಸಿದ ರೋವರ್ ಪ್ರಜ್ಞಾನ್: ಇಸ್ರೋ

Last Updated : Aug 26, 2023, 6:45 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.